ಟ್ರಂಪ್ ರಿಂದ ಎಲ್ಲ ದೇಶಗಳಿಗೆ ಬೆದರಿಕೆ
ನವದೆಹಲಿ – ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿಗೆ ಬೆದರಿಕೆ ಒಡ್ಡುತ್ತಾ, ಯಾವ ದೇಶಗಳು ಅಮೆರಿಕಾದ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಡಿಜಿಟಲ್ ಸೇವಾ ತೆರಿಗೆ ಅಥವಾ ಸಂಬಂಧಿತ ನಿಯಮಗಳನ್ನು ವಿಧಿಸುತ್ತವೆಯೋ, ಆ ದೇಶಗಳ ಮೇಲೆ ಅಮೆರಿಕಾ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಆ ದೇಶಗಳಿಗೆ ಅಮೆರಿಕಾದ ‘ಚಿಪ್’ಗಳ ರಫ್ತಿನ ಮೇಲೂ ನಿಷೇಧ ಹೇರಲಾಗುವುದು.
ಟ್ರಂಪ್ ಅವರ ಈ ಹೇಳಿಕೆಯು ‘ಆಲ್ಫಾಬೆಟ್’, ‘ಮೆಟಾ’ ಮತ್ತು ‘ಅಮೆಜಾನ್’ನಂತಹ ಅಮೆರಿಕಾದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ರಕ್ಷಣೆಗಾಗಿ ಆಗಿದೆ. ಅವರು ತಮ್ಮದೇ ಸಾಮಾಜಿಕ ಮಾಧ್ಯಮವಾದ ‘ಟ್ರೂತ್ ಸೋಶಿಯಲ್’ ಮೂಲಕ, ‘ಡಿಜಿಟಲ್ ತೆರಿಗೆ’, ‘ಡಿಜಿಟಲ್ ಸೇವಾ ಕಾನೂನುಗಳು’ ಮತ್ತು ‘ಡಿಜಿಟಲ್ ಮಾರುಕಟ್ಟೆ ನಿಯಮಗಳು’ ಅಮೆರಿಕಾದ ತಂತ್ರಜ್ಞಾನಕ್ಕೆ ಹಾನಿ ಮಾಡಲು ಮತ್ತು ತಾರತಮ್ಯ ಮಾಡಲು ರಚಿಸಲಾಗಿದೆ ಎಂದು ಹೇಳಿದ್ದಾರೆ. ಅವುಗಳು ನಾಚಿಕೆಯಿಲ್ಲದೆ ಚೀನಾದ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಗಳಿಗೆ ವಿನಾಯಿತಿ ನೀಡುತ್ತವೆ. ಇದು ಈಗಲೇ ನಿಲ್ಲಬೇಕು.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation