ಜಗತ್ತಿನ ನೆರವು ಕೋರಿದ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯುನೂಸ್ !

ಢಾಕಾ (ಬಾಂಗ್ಲಾದೇಶ) – ನಿರಾಶ್ರಿತ ರೋಹಿಂಗ್ಯಾಗಳಿಂದಾಗಿ ಬಾಂಗ್ಲಾದೇಶದ ಆರ್ಥಿಕತೆ ಮತ್ತು ಪರಿಸರದ ಮೇಲೆ ಒತ್ತಡ ಹೆಚ್ಚಾಗಿದೆ. ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ಇದ್ದಾರೆ. ಅವರಿಗೆ ಆಹಾರ ಒದಗಿಸುವುದು ಕಷ್ಟವಾಗುತ್ತಿದೆ. ಇದು ಬಾಂಗ್ಲಾದೇಶ ಸೇರಿದಂತೆ ಇಡೀ ಜಗತ್ತಿಗೆ ದೊಡ್ಡ ಸವಾಲಾಗಿದೆ. ಜಗತ್ತು ಈ ವಿಷಯದಲ್ಲಿ ಒಟ್ಟಾಗಿ ಸೇರಿ ರೋಹಿಂಗ್ಯಾ ಮುಸ್ಲಿಮರು ತಮ್ಮ ದೇಶಕ್ಕೆ ಮರಳಲು ಸಹಾಯ ಮಾಡಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯುನೂಸ್ ಅವರು ಮನವಿ ಮಾಡಿದರು.
ಆಗಸ್ಟ್ 2017 ರಿಂದ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ನಂತರ, ರೋಹಿಂಗ್ಯಾಗಳು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದರು. ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯಲ್ಲಿ ಅವರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಯುನೂಸ್ ಅವರು ರೋಹಿಂಗ್ಯಾಗಳ ಮರುಸ್ಥಾಪನೆಗಾಗಿ 7 ಅಂಶಗಳ ಯೋಜನೆಯನ್ನೂ ಮಂಡಿಸಿದರು.
🇧🇩 Bangladesh’s Interim Govt Chief Advisor Muhammad Yunus admits:
👉 “It is becoming difficult for us to support Rohingya refugees!”🌍 Appeals for world’s help…
But what about 🇮🇳 India?
⚠️ India is burdened with millions of Bangladeshi Muslim infiltrators for decades!➡️… pic.twitter.com/eVdNyOJfCW
— Sanatan Prabhat (@SanatanPrabhat) August 26, 2025
ರೋಹಿಂಗ್ಯಾಗಳಿಗೆ ಮ್ಯಾನ್ಮಾರ್‌ಗೆ ಹಿಂದಿರುಗಬೇಕಿದೆ!
ಕಾಕ್ಸ್ ಬಜಾರ್‌ನಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳು ‘ರೋಹಿಂಗ್ಯಾ ನರಮೇಧ ಸ್ಮರಣಾರ್ಥ ದಿನ’ವನ್ನು ಆಚರಿಸಿದರು. ಅವರ ಕೈಯಲ್ಲಿ ಮನೆಗೆ ಮರಳುವಂತೆ ಒತ್ತಾಯಿಸುವ ಫಲಕಗಳಿದ್ದವು. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation