ಟರ್ಕಿಯಿಂದ ನೇಪಾಳವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ

  • ಬಡ ಮತ್ತು ಅನಾಥ ಹಿಂದೂ ಮಕ್ಕಳಿಗೆ ಇಸ್ಲಾಮಿಕ್ ಶಿಕ್ಷಣ ನೀಡುವ ಪ್ರಯತ್ನ

  • ಸರಕಾರೇತರ ಸಂಸ್ಥೆಗಳಿಗೆ ಟರ್ಕಿಯಿಂದ ಹಣ ಪೂರೈಕೆ

ಕಠ್ಮಂಡು (ನೇಪಾಳ) – ನೇಪಾಳದಲ್ಲಿ ಸೂಕ್ತ ಅನುಮತಿ ಇಲ್ಲದ ವಿದೇಶಿಯರಿಂದ ಚಿಕ್ಕ ಹಿಂದೂ ಮಕ್ಕಳಿಗೆ ಕುರಾನ್ ಕಲಿಸುತ್ತಿರುವುದು ಬಹಿರಂಗಗೊಂಡ ನಂತರ ಹಲವೆಡೆ ದಾಳಿ ನಡೆಸಲಾಯಿತು. ತನಿಖೆಯ ಸಮಯದಲ್ಲಿ, ಕೆಲವು ವಿದೇಶಿ ಶಕ್ತಿಗಳು ನೇಪಾಳದ ಬಡ ಮತ್ತು ಅನಾಥ ಹಿಂದೂ ಮಕ್ಕಳನ್ನು ವಂಚಿಸಿ, ಜನಸಂಖ್ಯೆಯ ಧಾರ್ಮಿಕ ಸಮತೋಲನವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ಯತ್ನದ ಹಿಂದೆ ಟರ್ಕಿ ಇದೆ ಎಂದು ಮಾಹಿತಿ ಬಹಿರಂಗವಾಗಿದೆ.

1. ಲಲಿತಪುರದಲ್ಲಿರುವ ಕೆಲವು ವಸತಿ ನಿಲಯಗಳ ಮೇಲೆ ದಾಳಿ ಮಾಡಲಾಯಿತು. ಅವು ‘ಹಿಮಾಲಯ ಎಜುಕೇಶನ್ ಅಂಡ್ ವೆಲ್‌ಫೇರ್ ಸೊಸೈಟಿ’ಗೆ ಸಂಬಂಧಿಸಿದ್ದವು ಆಗಿತ್ತು. ಇದು ಬಡ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ನೀಡುವ ಸರಕಾರೇತರ ಸಂಸ್ಥೆಯಾಗಿದೆ.

2. ಈ ಸಂಸ್ಥೆಗಳಲ್ಲಿ, ಕಪಿಲವಸ್ತು, ಸಿರಾಹಲಿ, ರೌತಹಟ್, ಬಾಂಕೆ ಜಿಲ್ಲೆಗಳ ಬಡ ಮತ್ತು ಅನಾಥ ಮಕ್ಕಳನ್ನು ಕರೆತಂದು ಮತಾಂತರಕ್ಕಾಗಿ ಇಸ್ಲಾಮಿಕ್ ಶಿಕ್ಷಣವನ್ನು ನೀಡಲಾಗುತ್ತಿತ್ತು. ಈ ಮಕ್ಕಳಿಗೆ ನೇಪಾಳ ಸರಕಾರದ ಅಧಿಕೃತ ಶೈಕ್ಷಣಿಕ ಪುಸ್ತಕಗಳನ್ನು ಕಲಿಸದೇ ಇಸ್ಲಾಮಿಕ್ ಗ್ರಂಥಗಳನ್ನು ಕಲಿಸಲಾಗುತ್ತಿತ್ತು. ನೇಪಾಳದ ಪಠ್ಯಕ್ರಮದಲ್ಲಿ ಧಾರ್ಮಿಕ ಶಿಕ್ಷಣವನ್ನು ಸೇರಿಸಲಾಗಿಲ್ಲ; ಆದರೂ ಈ ಸರಕಾರೇತರ ಸಂಸ್ಥೆಗಳು ಧಾರ್ಮಿಕ ಶಿಕ್ಷಣ ನೀಡುತ್ತಿದ್ದವು.

3. ತನಿಖೆಯಲ್ಲಿ, ಈ ಸಂಸ್ಥೆಗಳು ಪ್ರತಿ ವರ್ಷ ವಿದೇಶಿ ಸಂಸ್ಥೆಗಳಿಂದ ಸುಮಾರು ಎರಡೂವರೆ ಕೋಟಿ ನೇಪಾಳಿ ರೂಪಾಯಿಗಳನ್ನು ಪಡೆಯುತ್ತಿವೆ ಎಂದು ತಿಳಿದುಬಂದಿದೆ. ಅದರಲ್ಲಿ ಟರ್ಕಿಯಲ್ಲಿರುವ 6 ಅಂತರಾಷ್ಟ್ರೀಯ ಸಂಸ್ಥೆಗಳೂ ಸೇರಿವೆ. ಅಲ್ಲದೆ, ಇಂಡೋನೇಷ್ಯಾದ ಹಲವು ಇಸ್ಲಾಮಿಕ್ ಶಿಕ್ಷಕರು ಪ್ರವಾಸಿ ವೀಸಾದಲ್ಲಿ ನೇಪಾಳಕ್ಕೆ ಬಂದು ಧಾರ್ಮಿಕ ಪ್ರಚಾರ ಮಾಡುತ್ತಾರೆ. ಇದು ನೇಪಾಳದ ವಲಸೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

4. ಅಧಿಕಾರಿಗಳು ಇಂತಹ ಚಟುವಟಿಕೆಗಳು ಕಾನೂನನ್ನು ಉಲ್ಲಂಘಿಸುವುದಲ್ಲದೆ, ದೇಶದ ಭದ್ರತೆ ಮತ್ತು ಮಕ್ಕಳ ಶಿಕ್ಷಣಕ್ಕೂ ಗಂಭೀರ ಅಪಾಯವನ್ನುಂಟುಮಾಡುತ್ತವೆ ಎಂದು ಒಪ್ಪಿಕೊಂಡಿದ್ದಾರೆ. ಅನೇಕ ನೇಪಾಳಿ ಅಧಿಕಾರಿಗಳು ಇದನ್ನು ‘ಅತ್ಯಂತ ಗಂಭೀರ ಘಟನೆ’ ಎಂದು ಕರೆದಿದ್ದಾರೆ.

ಎರ್ಡೋಗನ್ ಆಡಳಿತದಲ್ಲಿ ಹೆಚ್ಚಿದ ಪ್ರಯತ್ನಗಳು

ಟರ್ಕಿಯ ಅಧ್ಯಕ್ಷ ಎರ್ಡೋಗನ್ ಅವರ ಆಡಳಿತದಲ್ಲಿ, ಇಂತಹ ನೂರಾರು ಸಂಸ್ಥೆಗಳು ಸ್ಥಾಪನೆಯಾಗಿವೆ. ಭಾರತ, ನೇಪಾಳ, ಶ್ರೀಲಂಕಾದಂತಹ ಮುಸ್ಲಿಮೇತರ ದೇಶಗಳಲ್ಲಿ ಇಸ್ಲಾಮಿಕ್ ಶಿಕ್ಷಣವನ್ನು ಹರಡಲು ಹಣವನ್ನು ಬಳಸುವುದೇ ಇವರ ಉದ್ದೇಶ. ಟರ್ಕಿಯಲ್ಲಿ ಸಕ್ರಿಯವಾಗಿರುವ ಅನೇಕ ಕಟ್ಟರವಾದಿ ಗುಂಪುಗಳು ನೇಪಾಳದ ಮೂಲಕ ಭಾರತದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಇಸ್ಲಾಮಿಕ್ ಪ್ರಸಾರವನ್ನು ತಡೆಗಟ್ಟಲು ನೇಪಾಳ ಸರಕಾರವು ವಿದೇಶಿ ನಿಧಿ ಮತ್ತು ಸರಕಾರೇತರ ಸಂಸ್ಥೆಗಳ ಚಟುವಟಿಕೆಗಳ ಮೇಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಚಿಂತಿಸುತ್ತಿದೆ.

ಸಂಪಾದಕೀಯ ನಿಲುವು

  • ಕೇವಲ ಭಾರತ ಮಾತ್ರವಲ್ಲ, ನೇಪಾಳವನ್ನೂ ಆದಷ್ಟು ಬೇಗ ಹಿಂದೂ ರಾಷ್ಟ್ರವನ್ನಾಗಿ ಮಾಡಿ ಹಿಂದೂಗಳ ರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ!
  • ಹಿಂದೂಗಳು ತಮ್ಮ ಧರ್ಮವನ್ನು ಇತರರ ಮೇಲೆ ಹೇರುವುದಿಲ್ಲ ಅಥವಾ ಪಿತೂರಿ ನಡೆಸಿ ಪ್ರಚಾರ ಮಾಡಲು ಪ್ರಯತ್ನಿಸುವುದಿಲ್ಲ; ಆದರೆ ಇತರ ಧರ್ಮದವರು ಇಂತಹ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಅವರ ಮೊದಲ ಗುರಿ ಹಿಂದೂಗಳಾಗಿರುತ್ತಾರೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!