ಗುತ್ತಿಗೆ ಪ್ರಾಧ್ಯಾಪಕರ ವೇತನದ ಕುರಿತು ಸರ್ವೋಚ್ಚ ನ್ಯಾಯಾಲಯದ ಹೇಳಿಕೆ

ನವದೆಹಲಿ – ಶಿಕ್ಷಕರಿಗೆ ಗೌರವಾನ್ವಿತ ವೇತನ ಸಿಗದಿದ್ದರೆ, ‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ । ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥’ (ಅರ್ಥ: ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ. ಗುರುವೇ ಸಾಕ್ಷಾತ್ ಪರಬ್ರಹ್ಮ. ಅಂತಹ ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.) ಈ ಶ್ಲೋಕ ನಿರರ್ಥಕ ಎಂದು ಸರ್ವೋಚ್ಚ ನ್ಯಾಯಾಲಯ ಗುಜರಾತ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಹೇಳಿದೆ. ಗುತ್ತಿಗೆ ಪ್ರಾಧ್ಯಾಪಕರ ವೇತನಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಈ ಹೇಳಿಕೆ ನೀಡಿತು.
ಸರ್ವೋಚ್ಚ ನ್ಯಾಯಾಲಯದ ಹೇಳಿಕೆಗಳು
1. ಗುತ್ತಿಗೆ ಸಹಾಯಕ ಪ್ರಾಧ್ಯಾಪಕರಿಗೆ ವೇತನವಾಗಿ ಕೇವಲ 30,000 ರೂಪಾಯಿಗಳನ್ನು ನೀಡಲಾಗುತ್ತಿದ್ದು, ಕಾಯಂಗೊಳಿಸಿರುವ ಸಹಾಯಕ ಪ್ರಾಧ್ಯಾಪಕರಿಗೆ 1 ಲಕ್ಷ 20 ಸಾವಿರದಿಂದ 1 ಲಕ್ಷ 40 ಸಾವಿರ ರೂಪಾಯಿಗಳಷ್ಟು ವೇತನ ನೀಡಲಾಗುತ್ತಿದೆ. ಈ ವ್ಯತ್ಯಾಸ ಚಿಂತಾಜನಕವಾಗಿದೆ.
2. ಯಾವ ಶಿಕ್ಷಕರು ನಮ್ಮ ಮುಂದಿನ ಹಲವು ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತಾರೆಯೋ, ಅವರೊಂದಿಗೆ ಈ ರೀತಿ ವರ್ತಿಸಲು ಸಾಧ್ಯವಿಲ್ಲ. ಶಿಕ್ಷಕರು ಯಾವುದೇ ದೇಶದ ಬೆನ್ನೆಲುಬಾಗಿದ್ದಾರೆ; ಏಕೆಂದರೆ ಅವರೇ ನಮ್ಮ ಮಕ್ಕಳನ್ನು ಭವಿಷ್ಯದ ಸವಾಲುಗಳಿಗೆ ಮತ್ತು ಉತ್ತಮ ಜೀವನ ನಡೆಸಲು ಸಿದ್ಧಪಡಿಸುತ್ತಾರೆ. ಶಿಕ್ಷಕರು ಸಮಾಜಕ್ಕೆ ಸಂಶೋಧನೆ, ಚಿಂತನೆ ಮತ್ತು ಮೌಲ್ಯಗಳ ಮೂಲಕ ಪ್ರಗತಿಯ ಹಾದಿಯನ್ನು ತೋರಿಸುತ್ತಾರೆ.
3. ಶಿಕ್ಷಕರಿಗೆ ಗೌರವಾನ್ವಿತ ವೇತನ ಸಿಗದಿದ್ದರೆ, ದೇಶದಲ್ಲಿ ಜ್ಞಾನ ಮತ್ತು ಬೌದ್ಧಿಕ ಪ್ರಗತಿಗೆ ಸರಿಯಾದ ಸ್ಥಾನ ಸಿಗುವುದಿಲ್ಲ.
4. ಕಳೆದ 2 ದಶಕಗಳಿಂದ ಸಹಾಯಕ ಪ್ರಾಧ್ಯಾಪಕರಿಗೆ ಇಷ್ಟು ಕಡಿಮೆ ವೇತನ ನೀಡುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ನಮ್ಮ ಮುಂದೆ ಸಲ್ಲಿಸಿದ ಮಾಹಿತಿಯ ಪ್ರಕಾರ, 2,720 ಖಾಲಿ ಹುದ್ದೆಗಳಲ್ಲಿ ಕೇವಲ 923 ಹುದ್ದೆಗಳಿಗೆ ಮಾತ್ರ ಕಾಯಂ ನೇಮಕಾತಿ ಮಾಡಲಾಗಿದೆ. ಶಿಕ್ಷಕರ ಕೊರತೆಯಿಂದ ಶಿಕ್ಷಣದ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!