ಮುರಾದಾಬಾದ್‌ನಲ್ಲಿ ಹಿಂದೂ ಹೆಸರಿನಲ್ಲಿ ಬ್ಯಾಂಡ್ ಕಂಪನಿ ನಡೆಸುತ್ತಿರುವ ಮುಸಲ್ಮಾನರು

ದೂರಿನ ನಂತರ ಆಡಳಿತ ಸಕ್ರಿಯ

ಮುರಾದಾಬಾದ್ (ಉತ್ತರ ಪ್ರದೇಶ) – ನಗರದಲ್ಲಿ ಬ್ಯಾಂಡ್ ಕಂಪನಿಗಳ ಹೆಸರಿನ ಬಗ್ಗೆ ವಿವಾದ ಉಂಟಾಗಿದೆ. ಮುಸ್ಲಿಂ ಮಾಲೀಕರು ತಮ್ಮ ಬ್ಯಾಂಡ್ ಕಂಪನಿಗಳನ್ನು ಹಿಂದೂ ದೇವರುಗಳು ಅಥವಾ ಹಿಂದೂ ಸಮಾಜದ ಹೆಸರಿನಲ್ಲಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಬಯಲಾದ ನಂತರ ವಕೀಲ ಸಿ.ವಿ. ಶರ್ಮಾ ಅವರು ಅಧಿಕೃತ ದೂರು ದಾಖಲಿಸಿದ್ದಾರೆ. ದೂರಿನ ನಂತರ ಆಡಳಿತ ಸಕ್ರಿಯವಾಗಿದ್ದು, ಪೊಲೀಸರು ಇಬ್ಬರನ್ನೂ ಕರೆದು ಹೇಳಿಕೆಗಳನ್ನು ಪಡೆದಿದ್ದಾರೆ.

೧. ದೂರುದಾರ ವಕೀಲ ಸಿ.ವಿ. ಶರ್ಮಾ ಅವರು ಮುಖ್ಯಮಂತ್ರಿಯವರಿಗೆ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿ, ಮುರಾದಾಬಾದ್ ನಗರದಲ್ಲಿ ‘ಶರ್ಮಾ ಬ್ಯಾಂಡ್’, ‘ಕುಮಾರ್ ಬ್ಯಾಂಡ್’ನಂತಹ ಅನೇಕ ಬ್ಯಾಂಡ್ ಕಂಪನಿಗಳನ್ನು ಹಿಂದೂ ಹೆಸರುಗಳಲ್ಲಿ ನಡೆಸಲಾಗುತ್ತಿದೆ, ಆದರೆ ಅವುಗಳ ಮಾಲೀಕರು ಮುಸ್ಲಿಮರು ಎಂದು ಹೇಳಿದ್ದಾರೆ.

೨. ಕಾವಡ ಯಾತ್ರೆಯ ಸಮಯದಲ್ಲಿ ಹಿಂದೂ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಇತರ ಸಮುದಾಯಗಳ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು, ಅದೇ ರೀತಿ ಇಲ್ಲಿಯೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ಕೇವಲ ಹೆಸರಿನ ವಿಷಯವಲ್ಲ, ಇದು ಶ್ರದ್ಧೆ ಮತ್ತು ಧಾರ್ಮಿಕ ಗುರುತಿನ ಪ್ರಶ್ನೆ ಎಂದು ಶರ್ಮಾ ಹೇಳಿದ್ದಾರೆ.

೩. ಮಾಧ್ಯಮಗಳಲ್ಲಿ ಈ ಪ್ರಕರಣ ಪ್ರಕಟವಾದ ನಂತರ ಬ್ಯಾಂಡ್ ನಿರ್ವಾಹಕರಲ್ಲಿ ಆತಂಕ ನೆಲೆಸಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

೪. ಈ ವಿವಾದಕ್ಕೆ ಮುರಾದಾಬಾದ್‌ನ ಮಾಜಿ ಸಂಸದ ಎಸ್.ಟಿ. ಹಸನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ರಾಜಕೀಯದಲ್ಲಿ ಪ್ರತಿಯೊಂದು ಸಣ್ಣ ವಿಷಯಕ್ಕೂ ಹಿಂದೂ-ಮುಸ್ಲಿಂ ಬಣ್ಣ ಹಚ್ಚಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. (ಮುಸ್ಲಿಮರೇ ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಹಿಂದೂಗಳ ಧಾರ್ಮಿಕ ಭಾವನೆಗಳ ಲಾಭ ಪಡೆಯುತ್ತಿದ್ದಾರೆ. ಇದು ಒಂದು ರೀತಿಯ ವಂಚನೆಯಾಗಿದೆ. ಎಸ್.ಟಿ. ಹಸನ್ ಅವರು ತಮ್ಮ ಸಮುದಾಯದ ಜನರಿಗೆ ಈ ರೀತಿ ಮಾಡದಂತೆ ಏಕೆ ಮನವಿ ಮಾಡುವುದಿಲ್ಲ? – ಸಂಪಾದಕರು)

ಸಂಪಾದಕೀಯ ನಿಲುವು

ಬ್ಯಾಂಡ್ ಕಂಪನಿ ನಡೆಸಲು ಮುಸ್ಲಿಮರು ಹಿಂದೂಗಳ ಹೆಸರನ್ನು ಏಕೆ ಆಶ್ರಯಿಸಬೇಕು? ಇದು ಹಿಂದೂ ಸಮಾಜದ ವಂಚನೆಯಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ!