ಭಾರತದ ಪರವಾಗಿ ಮಾತನಾಡುವ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರನ ಮನೆಯ ಮೇಲೆ ಎಫ್.ಬಿ.ಐ ದಾಳಿ

ಎಫ್.ಬಿ.ಐ.ನ ಭಾರತೀಯ ಮೂಲದ ಮುಖ್ಯಸ್ಥ ಕಾಶ್ ಪಟೇಲ್ ಆದೇಶದ ಮೇರೆಗೆ ಕಾರ್ಯಾಚರಣೆ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ತನಿಖಾ ಸಂಸ್ಥೆಯಾದ ಎಫ್.ಬಿ.ಐ.ನ (‘ಫೆಡರೇಶನ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’) ತಂಡವು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರ ಮನೆಯ ಮೇಲೆ ದಾಳಿ ಮಾಡಿದೆ. ಈ ಕ್ರಮವು ಗೌಪ್ಯ ದಾಖಲೆಗಳ ಹಳೆಯ ತನಿಖೆಗೆ ಸಂಬಂಧಿಸಿದೆ. ಎಫ್.ಬಿ.ಐ.ನ ಮುಖ್ಯಸ್ಥ ಕಾಶ್ ಪಟೇಲ್ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ನಂತರ ಪಟೇಲ್ ತಕ್ಷಣವೇ ‘ಎಕ್ಸ್’ನಲ್ಲಿ ಒಂದು ಪೋಸ್ಟ್‌ನಲ್ಲಿ, ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ…’ ಎಂದು ಬರೆದಿದ್ದಾರೆ. ಬೋಲ್ಟನ್ ಅವರು ಟ್ರಂಪ್ ಅವರ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ ಮತ್ತು ಆಮದು ಸುಂಕದ ವಿಷಯದಲ್ಲಿ ಭಾರತದ ಪರವಾಗಿ ಮಾತನಾಡುತ್ತಿದ್ದಾರೆ.

ಜಾನ್ ಬೋಲ್ಟನ್ ಟ್ರಂಪ್ ಅವರ ವಿದೇಶಾಂಗ ಮತ್ತು ರಾಷ್ಟ್ರೀಯ ಭದ್ರತಾ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಇತ್ತೀಚೆಗೆ, ಅವರು ರಷ್ಯಾದಿಂದ ತೈಲ ಖರೀದಿಸಲು ಭಾರತದ ಮೇಲೆ ಸುಂಕ ವಿಧಿಸುವ ಟ್ರಂಪ್ ಅವರ ನಿರ್ಧಾರ ತಪ್ಪಾಗಿದೆ ಎಂದು ಹೇಳಿದ್ದರು. ರಷ್ಯಾದಿಂದ ತೈಲ ಖರೀದಿಸಲು ಕೇವಲ ಭಾರತದ ಮೇಲೆ ಸುಂಕ ವಿಧಿಸುವುದು ತಪ್ಪು ಎಂದು ಬೋಲ್ಟನ್ ಹೇಳಿದ್ದರು. ಚೀನಾ ಕೂಡ ರಷ್ಯಾದಿಂದ ತೈಲ ಖರೀದಿಸುತ್ತದೆ, ಆದರೆ ಅದರ ಮೇಲೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕ ಭಾರತವನ್ನು ಕೈಬಿಟ್ಟಂತಾಗಿದೆ ಮತ್ತು ಇದರಿಂದ ಭಾರತವು ರಷ್ಯಾ ಮತ್ತು ಚೀನಾದ ಹತ್ತಿರವಾಗಬಹುದು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಅಮೆರಿಕದಲ್ಲಿ ಭಾರತದ ಪರವಾಗಿ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದೂ ಕೂಡ ಭಾರತೀಯ ಮೂಲದ ಅಧಿಕಾರಿಯ ಆದೇಶದ ಮೇರೆಗೆ ಎಂಬುದು ಗಮನದಲ್ಲಿಟ್ಟುಕೊಳ್ಳಿ !
  • ವಿದೇಶಗಳಲ್ಲಿ ಭಾರತೀಯ ಮೂಲದವರು ದೊಡ್ಡ ಹುದ್ದೆಗಳನ್ನು ತಲುಪಿದಾಗ, ಅದು ಭಾರತೀಯರಿಗೆ ಹೆಮ್ಮೆಯ ವಿಷಯವಾದರೂ, ವಾಸ್ತವದಲ್ಲಿ ಅದರಿಂದ ಭಾರತಕ್ಕೆ ಲಾಭವಾಗುವುದಕ್ಕಿಂತ ಹಾನಿಯೇ ಹೆಚ್ಚಾಗಿದೆ. ಇದು ಇಲ್ಲಿಯವರೆಗಿನ ಇತಿಹಾಸವಾಗಿದೆ, ಭಾರತೀಯರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು!