20 ರೂಪಾಯಿ ನೀರಿನ ಬಾಟಲಿಗೆ 100 ರೂಪಾಯಿ ತೆಗೆದುಕೊಂಡು, ಅದರ ಮೇಲೆ ಸೇವಾ ತೆರಿಗೆಯನ್ನೂ ವಸೂಲಿ ಮಾಡುತ್ತೀರಿ!

ರೆಸ್ಟೋರೆಂಟ್‌ಗಳಿಂದ ಗ್ರಾಹಕರಿಗೆ ಅನಗತ್ಯ ಶುಲ್ಕ ವಿಧಿಸುವುದರ ಬಗ್ಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ತರಾಟೆ!

ನವದೆಹಲಿ – ಉಪಾಹಾರ ಗೃಹಗಳಲ್ಲಿ (ರೆಸ್ಟೋರೆಂಟ್‌) 20 ರೂಪಾಯಿಗಳ ನೀರಿನ ಬಾಟಲಿಯನ್ನು 100 ರೂಪಾಯಿಗಳಿಗೆ ಮಾರಲಾಗುತ್ತದೆ. ‘ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ’ ಮತ್ತು ‘ಫೆಡರೇಷನ್ ಆಫ್ ಹೋಟೆಲ್ಸ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ’ಗೆ, “ನೀರಿನ ಬಾಟಲಿಯ ಮೇಲೆ ತೆಗೆದುಕೊಂಡ ಹೆಚ್ಚುವರಿ 80 ರೂಪಾಯಿಗಳು ರೆಸ್ಟೋರೆಂಟ್‌ನಲ್ಲಿನ ವಿಶಿಷ್ಟ ವಾತಾವರಣಕ್ಕಾಗಿ ಮಾತ್ರವೇ ಎಂದು ಏಕೆ ಹೇಳಲಾಗುವುದಿಲ್ಲ? ಎಂದು ನಮ್ಮ ಪ್ರಶ್ನೆಯಾಗಿದೆ. ಇದು ಹೀಗೆ ಇರಲು ಸಾಧ್ಯವಿಲ್ಲ. ಇದು ಒಂದು ದೊಡ್ಡ ಸಮಸ್ಯೆಯಾಗಿದೆ. ಗ್ರಾಹಕರಿಗೆ ವಿಶಿಷ್ಟ ವಾತಾವರಣದ ಅನುಭವವನ್ನು ನೀಡುವುದು ರೆಸ್ಟೋರೆಂಟ್ ಸೇವೆಯ ಒಂದು ಭಾಗವಾಗಿದೆ. ನೀವು ಎಂ.ಆರ್.ಪಿ.ಗಿಂತ ಹೆಚ್ಚಿನ ಮೊತ್ತವನ್ನು ವಿಧಿಸಬಹುದೇ? ಮತ್ತು ನೀರಿನ ಬಾಟಲಿಯ ಮೇಲೆ ಹೆಚ್ಚುವರಿ 80 ರೂಪಾಯಿಗಳನ್ನು ವಿಧಿಸಿದರೆ ಏನಾಗುತ್ತದೆ?” ಎಂದು ದೆಹಲಿ ಉಚ್ಚ ನ್ಯಾಯಾಲಯ ಒಂದು ವಿಚಾರಣೆಯ ಸಮಯದಲ್ಲಿ ರೆಸ್ಟೋರೆಂಟ್ ಸಂಘಟನೆಯನ್ನು ಪ್ರಶ್ನಿಸಿತು.

ಮಾರ್ಚ್ ತಿಂಗಳಲ್ಲಿ ಏಕಪೀಠ ನೀಡಿದ ಆದೇಶದ ವಿರುದ್ಧ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಟನೆಯು ಮತ್ತೊಮ್ಮೆ ಉಚ್ಚ ನ್ಯಾಯಾಲಯದ ಬಾಗಿಲು ತಟ್ಟಿದೆ. ಮಾರ್ಚ್ ತಿಂಗಳಲ್ಲಿ, ರೆಸ್ಟೋರೆಂಟ್‌ ಗಳು ರಹಸ್ಯವಾಗಿ ಮತ್ತು ಬಲವಂತವಾಗಿ ಊಟದ ಬಿಲ್‌ ನ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ಊಟದ ಬಿಲ್‌ ನಲ್ಲಿ ಆತುರದ ಮತ್ತು ಬಲವಂತವಾಗಿ ಸೇವಾ ಶುಲ್ಕವನ್ನು (ಸರ್ವಿಸ್ ಟ್ಯಾಕ್ಸ್) ವಿಧಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.