|

ನವದೆಹಲಿ – ಸಂಸತ್ತಿನ ಮಳೆಗಾಲದ ಅಧಿವೇಶನದ ಅವಧಿಯಲ್ಲಿ ಲೋಕಸಭೆಯ ಕೆಲಸ 120 ಗಂಟೆಗಳ ಕಾಲ ನಡೆಯಬೇಕಿತ್ತು, ಆದರೆ ಸದಸ್ಯರು ಗದ್ದಲ ಮಾಡಿದ ಕಾರಣ ಕೇವಲ 37 ಗಂಟೆಗಳ ಕಾಲ ಮಾತ್ರ ಕೆಲಸ ನಡೆಯಿತು. ಈ ಅಧಿವೇಶನದಲ್ಲಿ ಲೋಕಸಭೆಯ 83 ಗಂಟೆಗಳ ಕೆಲಸದ ಅವಧಿ ವ್ಯರ್ಥವಾಗಿದೆ ಮತ್ತು ಕೇವಲ ಶೇ.31ರಷ್ಟು ಕೆಲಸ ನಡೆದಿದೆ. ರಾಜ್ಯಸಭೆಯಲ್ಲಿಯೂ 120 ಗಂಟೆಗಳ ಕೆಲಸ ನಡೆಯಬೇಕಿತ್ತು, ಆದರೆ ಗದ್ದಲದಿಂದಾಗಿ ಕೇವಲ 47 ಗಂಟೆಗಳ ಕಾಲ ಕೆಲಸ ನಡೆಯಿತು. ಸಂಸದರು ಸೃಷ್ಟಿಸಿದ ಗದ್ದಲದಿಂದಾಗಿ ರಾಜ್ಯಸಭೆಯ ಶೇ.62 ರಷ್ಟು ಸಮಯ ವ್ಯರ್ಥವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಮಯ ವ್ಯರ್ಥವಾದ ಕಾರಣ ಜನರ 204 ಕೋಟಿ ರೂಪಾಯಿಗಳು ನಷ್ಟವಾಗಿವೆ.
1. ಜುಲೈ 24 ಮತ್ತು ಆಗಸ್ಟ್ 1ರಂದು ಲೋಕಸಭೆಯ ಕೆಲಸ ಕೇವಲ 12 ನಿಮಿಷಗಳ ಕಾಲ ನಡೆಯಿತು, ಹಾಗೂ ಜುಲೈ 23ರಂದು 18 ನಿಮಿಷಗಳ ಕಾಲ ಕೆಲಸ ನಡೆಯಿತು. ಆಗಸ್ಟ್ 4ರಂದು ಲೋಕಸಭೆಯ ಕೆಲಸವನ್ನು 24 ನಿಮಿಷಗಳಲ್ಲಿ ಸ್ಥಗಿತಗೊಳಿಸಬೇಕಾಯಿತು.
2. ಸಂಸತ್ತಿನ ಮಳೆಗಾಲದ ಅಧಿವೇಶನ 21 ದಿನಗಳ ಕಾಲ ನಡೆಯಿತು. ಈ 21 ದಿನಗಳಲ್ಲಿ ಲೋಕಸಭೆ 1 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೇವಲ 5 ದಿನ ಮಾತ್ರ ಕೆಲಸ ಮಾಡಿದೆ.
3. ಭಾರತದ ಮೊದಲ ಲೋಕಸಭೆಯ ಕೆಲಸ 14 ಸತ್ರಗಳಲ್ಲಿ ನಡೆದಿತ್ತು. ಈ 14 ಸತ್ರಗಳಲ್ಲಿ ಕೆಲಸ 3 ಸಾವಿರ 784 ಗಂಟೆಗಳ ಕಾಲ ನಡೆಯಿತು. 1974 ರವರೆಗೂ ಪ್ರತಿ ಲೋಕಸಭಾ ಅವಧಿಯ ಸಭೆಗಳ ಸಂಖ್ಯೆ 100ಕ್ಕಿಂತ ಹೆಚ್ಚಿತ್ತು.
4. 1974ರ ನಂತರ ಮತ್ತು 2011ರವರೆಗೂ ಕೇವಲ 5 ಬಾರಿ ಸದನದ ಸಭೆಗಳ ಸಂಖ್ಯೆ 100ಕ್ಕಿಂತ ಹೆಚ್ಚಿತ್ತು.
5. ಮೊದಲ ಲೋಕಸಭೆಯಲ್ಲಿ 333 ಮಸೂದೆಗಳು ಅಂಗೀಕಾರವಾದವು. 17ನೇ ಲೋಕಸಭೆಯಲ್ಲಿ, ಅಂದರೆ ಕಳೆದ ಲೋಕಸಭೆಯಲ್ಲಿ, 2019 ರಿಂದ 2024ರ ಅವಧಿಯಲ್ಲಿ 222 ಮಸೂದೆಗಳು ಅಂಗೀಕಾರವಾದವು. ಈ ಸಮಯದಲ್ಲಿ ಜನರ ಪ್ರಮುಖ ಮಸೂದೆಗಳು ಸಂಸತ್ತಿನಲ್ಲಿ ಗದ್ದಲದ ನಡುವೆಯೂ ವಿರೋಧ ಪಕ್ಷದ ಚರ್ಚೆಯಿಲ್ಲದೆ ಅಂಗೀಕಾರವಾದವು.
ಸಂಪಾದಕೀಯ ನಿಲುವು
|
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !