Save Dharmasthala Protest : ಧರ್ಮಸ್ಥಳದ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಆಂದೋಲನ

ಬೆಂಗಳೂರು ನಗರದ ಜಿಲ್ಲಾಧಿಕಾರಿಗಳಾದ ಶ್ರೀ. ಜಿ. ಜಗದೀಶ್ ಅವರಿಗೆ ಮನವಿ ನೀಡಲಾಯಿತು

ಬೆಂಗಳೂರು – ಕೊಟ್ಯಂತರ ಹಿಂದೂಗಳ ಭಕ್ತಿಭಾವದ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ದುರುದ್ದೇಶಿತ ಅಪಪ್ರಚಾರ ಹಿಂದೂ ಸಮಾಜದಲ್ಲಿ ಭಾರೀ ಆಕ್ರೋಶವನ್ನು ಉಂಟು ಮಾಡಿದೆ. ಅನಾಮಿಕನ ಹೇಳಿಕೆಯನ್ನು ಆಧರಿಸಿ ತನಿಖೆ ನಡೆದರೂ ಯಾವುದೇ ಸತ್ಯ ಹೊರಬಾರದೆ ಇರುವ ಸಂದರ್ಭದಲ್ಲಿ, ಕೆಲವು ಯೂಟ್ಯೂಬ್ ಚಾನೆಲ್‌ಗಳು ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳು ಸುಳ್ಳು ವರದಿಗಳನ್ನು ಪ್ರಸಾರ ಮಾಡಿರುವುದು ತೀವ್ರ ಖಂಡನೀಯ. ಇದು ಕೇವಲ ತಾತ್ಕಾಲಿಕ ಘಟನೆ ಅಲ್ಲ, ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಭಾಗವೆಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಇಂದು ಮನವಿ ಸಲ್ಲಿಸಲಾಯಿತು.

ಬೆಂಗಳೂರು ನಗರದ ಜಿಲ್ಲಾಧಿಕಾರಿಗಳಾದ ಶ್ರೀ. ಜಿ. ಜಗದೀಶ್ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಯುವ ಬ್ರಿಗೇಡ್‌ನ ಶ್ರೀ. ಚಂದ್ರಶೇಖರ, ಶ್ರೀರಾಮ ಸೇನೆಯ ಶ್ರೀ.ಸುಂದರೇಶ ನರ್ಗಲ್, ಸೇವಾ ಕನ್ನಡಿಗ ಟ್ರಸ್ಟ್‌ನ ಶ್ರೀ.ಲಕ್ಷ್ಮಣ ಗೌಡ, ಹಿಂದೂ ಮುಖಂಡರಾದ ಶ್ರೀ.ಎಂ.ಎಲ್. ಶಿವಕುಮಾರ, ಶ್ರೀ. ಶರತ ಕುಮಾರ್ ಸೇರಿದಂತೆ ಹಲವಾರು ಹಿಂದೂ ಮುಖಂಡರು, ವಕೀಲರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.


ವಿವಿಧೆಡೆಯೂ ಆಂದೋಲನ

ಶಿವಮೊಗ್ಗ ನಗರದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು

ಸಾಗರ ತಾಲೂಕಿನಲ್ಲಿ ನಡೆದ ಜನಾಕ್ರೋಶ ಆಂದೋಲನ

(ಕೃಪೆ – ಶ್ರೀ. ರಾಘವೇಂದ್ರ, ಸಾಗರ)


(ಸೌಜನ್ಯ – JANAPARA VAANI NEWS ಜನಪರ ವಾಣಿ ನ್ಯೂ)

ಬೇಡಿಕೆಗಳು

1. ಧರ್ಮಸ್ಥಳದ ಅಪಮಾನ ಮಾಡಿದವರ ಮೇಲೆ ಎಸ್‌ಐಟಿ ಮೂಲಕ ಸಂಪೂರ್ಣ ತನಿಖೆ ನಡೆಸಬೇಕು.

2. ಸುಳ್ಳು, ಅಪಪ್ರಚಾರ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

3. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಎಡಪಂಥೀಯ ಒತ್ತಡ ಮತ್ತು ಅಪಪ್ರಚಾರದಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ಮಾಡಬೇಕು.