1971ರಲ್ಲಿ ಪಾಕಿಸ್ತಾನ ಸೇನೆಯು ಪೂರ್ವ ಪಾಕಿಸ್ತಾನದಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ! India Slams Pakistan East Pakistan Liberation

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಲೈಂಗಿಕ ದೌರ್ಜನ್ಯಗಳ ಬಗ್ಗೆ ಪಾಕಿಸ್ತಾನಕ್ಕೆ ತಿವಿದ ಭಾರತ !

ನ್ಯೂಯಾರ್ಕ್ (ಅಮೆರಿಕ) – ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ತಿವಿದಿದೆ. ಇಲ್ಲಿ ಲೈಂಗಿಕ ದೌರ್ಜನ್ಯಗಳ ಕುರಿತು ನಡೆದ ಚರ್ಚೆಯ ಸಮಯದಲ್ಲಿ, ಭಾರತದ ಪ್ರತಿನಿಧಿ ಪುನ್ನೂಸ್ ಅವರು 1971 ರಿಂದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಲೈಂಗಿಕ ಹಿಂಸಾಚಾರದ ಬಗ್ಗೆ ಮಾಹಿತಿ ನೀಡಿದರು. ಅವರು ಮಾತನಾಡಿ, ಆ ಸಮಯದಲ್ಲಿ ಪಾಕಿಸ್ತಾನ ಸೇನೆಯು ಪೂರ್ವ ಪಾಕಿಸ್ತಾನದಲ್ಲಿ ಸಾವಿರಾರು ಮಹಿಳೆಯರ ಮೇಲೆ ಹೇಯವಾದ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದು, ಇದು ನಾಚಿಕೆಗೇಡಿನ ಇತಿಹಾಸದ ಒಂದು ಭಾಗವಾಗಿದೆ ಎಂದು ಅವರು ಹೇಳಿದರು. ನೈತಿಕವಾಗಿ ಅಯೋಗ್ಯವಾಗಿರುವ ಈ ಕೃತ್ಯಗಳು ಇಂದಿಗೂ ಮುಂದುವರಿದಿವೆ.

ಪುನ್ನೂಸ್ ಅವರು ಮಾತು ಮುಂದುವರೆಸಿ,

1. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ಹಿಂಸಿಸಲು ಒಂದು ಅಸ್ತ್ರವಾಗಿ, ಸಾವಿರಾರು ಸಂತ್ರಸ್ತ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಸಾಮೂಹಿಕವಾಗಿ ಅಪಹರಿಸುವುದು, ಕಳ್ಳಸಾಗಣೆ, ಬಾಲ್ಯವಿವಾಹ, ಬಲವಂತದ ವಿವಾಹ, ಲೈಂಗಿಕ ದೌರ್ಜನ್ಯ, ಬಲವಂತದ ಮತಾಂತರ ಇತ್ಯಾದಿಗಳ ಬಗ್ಗೆ ವಿವರವಾದ ವಿವರಣೆಯನ್ನು ಇತ್ತೀಚೆಗೆ ಪ್ರಕಟವಾದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ ನೀಡಲಾಗಿದೆ.

2. ಪಾಕಿಸ್ತಾನದ ನ್ಯಾಯ ವ್ಯವಸ್ಥೆಯು ಇಂತಹ ಹೇಯ ಕೃತ್ಯಗಳಿಗೆ ಕಾನೂನುಬದ್ಧತೆಯನ್ನು ನೀಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅಪರಾಧಗಳನ್ನು ಮಾಡಿದವರೇ ಈಗ ನ್ಯಾಯದ ರಕ್ಷಕರು ಎಂದು ನಟಿಸುತ್ತಿರುವುದು ವಿರೋಧಾಭಾಸವಾಗಿದೆ. ಇದರಿಂದ ಅವರ ದ್ವಿಮುಖ ಮತ್ತು ಬೂಟಾಟಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ, ಮೊದಲು ಈ ಭೀಕರ ಅಪರಾಧಗಳನ್ನು ಮಾಡಿದವರಿಗೆ ಶಿಕ್ಷೆಯಾಗಬೇಕು.

3. ಸಂಘರ್ಷದ ಪ್ರದೇಶಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳು ಕೇವಲ ಒಬ್ಬ ವ್ಯಕ್ತಿಯ ಜೀವನವನ್ನು ಹಾಳುಮಾಡುವುದಿಲ್ಲ, ಸಮಾಜದ ರಚನೆಯನ್ನೇ ನಾಶಮಾಡುತ್ತವೆ ಮತ್ತು ಹಲವಾರು ತಲೆಮಾರುಗಳವರೆಗೆ ಉಳಿಯುವ ಗಾಯಗಳನ್ನು ಸಮುದಾಯದ ಮೇಲೆ ಬಿಟ್ಟು ಹೋಗುತ್ತವೆ.

ಸಂಪಾದಕೀಯ ನಿಲುವು

ಈ ಕೃತ್ಯಗಳಿಗೆ ಪಾಕಿಸ್ತಾನದ ಸೇನೆಗೆ ಯಾರೂ ಶಿಕ್ಷೆ ವಿಧಿಸಿಲ್ಲ ಎಂಬುದು ವಾಸ್ತವವಾಗಿದೆ!