ಗಿಲಗಿಟ್-ಬಾಲ್ಟಿಸ್ತಾನದಲ್ಲಿ ಚೀನಾ ನಿಯಂತ್ರಣದ ವಿರುದ್ಧ ಸ್ಥಳೀಯರ ಬಂಡಾಯ Pakistan China Trade Route Blocked

ಗಿಲಗಿಟ (ಗಿಲಗಿಟ-ಬಾಲ್ಟಿಸ್ತಾನ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲಗಿಟ – ಬಾಲ್ಟಿಸ್ತಾನದಲ್ಲಿ ಚೀನಾದ ವಿರುದ್ಧ ಜನರ ರೋಷ ಭುಗಿಲೆದ್ದಿದೆ. ಸ್ಥಳೀಯ ವ್ಯಾಪಾರಿಗಳಲ್ಲಿ ಚೀನಾ-ಪಾಕಿಸ್ತಾನದ ಸಂಚಿನ ಬಗ್ಗೆ ತೀವ್ರ ಆಕ್ರೋಶವಿದ್ದು, ಈಗ ಅವರು ಚೀನಾ ನಿಯಂತ್ರಣದ ವಿರುದ್ಧ ಬಂಡಾಯವೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಈ ಪ್ರದೇಶದ ಸೋಸ್ಟ್ ಭಾಗದ ವ್ಯಾಪಾರಿಗಳು ಚೀನೀ ಪ್ರಜೆಗಳ ವಿರುದ್ಧ ರಸ್ತೆ ತಡೆ ನಡೆಸಿ, ಗಡಿಯುದ್ದಕ್ಕೂ ಸಂಚಾರವನ್ನು ನಿಲ್ಲಿಸಿರುವುದನ್ನು ಕಾಣಬಹುದು.

ಸ್ಥಳೀಯ ನಾಗರಿಕರು ಮತ್ತು ವ್ಯಾಪಾರಿಗಳು, ಚೀನಾ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ ವ್ಯವಸ್ಥೆಯನ್ನು ತಮ್ಮ ಶೋಷಣೆಗಾಗಿ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅವರ ಆದಾಯದ ಬಹುಪಾಲು ಚೀನಾಕ್ಕೆ ಹೋಗುತ್ತದೆ ಮತ್ತು ಉಳಿದ ಭಾಗವನ್ನು ತೆರಿಗೆ ರೂಪದಲ್ಲಿ ಪಾಕಿಸ್ತಾನ ಸರಕಾರಕ್ಕೆ ನೀಡಬೇಕಾಗುತ್ತದೆ. ಇದರ ಜೊತೆಗೆ, ಸ್ಥಳೀಯ ವ್ಯಾಪಾರಿಗಳ ಸರಕುಗಳನ್ನು ಪಾಕಿಸ್ತಾನಕ್ಕೆ ಸಾಗಿಸಲು ಸಾಕಷ್ಟು ಅಡೆತಡೆಗಳನ್ನು ಸೃಷ್ಟಿಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಲಂಚ ನೀಡದೆ ಸರಕುಗಳನ್ನು ಹೋಗಲು ಬಿಡುತ್ತಿಲ್ಲ. ಮತ್ತೊಂದೆಡೆ, ಚೀನಾದ ಸರಕುಗಳನ್ನು ಯಾವುದೇ ತೊಂದರೆಯಿಲ್ಲದೆ ಪಾಕಿಸ್ತಾನಕ್ಕೆ ತಕ್ಷಣವೇ ಕಳುಹಿಸಲಾಗುತ್ತದೆ.

ಚೀನಾ ಭೂಮಿ ಕಬಳಿಸುತ್ತಿದೆ ಎಂದು ಆರೋಪ!

ಗಿಲಗಿಟ್-ಬಾಲ್ಟಿಸ್ತಾನದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೂ ತೀವ್ರ ಅಸಮಾಧಾನವಿದೆ. ಇದರಿಂದ ತಮ್ಮ ಆರ್ಥಿಕತೆಗೆ ಯಾವುದೇ ಲಾಭವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಬದಲಾಗಿ, ಚೀನಾ ನಮ್ಮ ಭೂಮಿಯನ್ನು ಕಬಳಿಸುತ್ತಿದೆ ಮತ್ತು ಆರ್ಥಿಕವಾಗಿ ನಮ್ಮನ್ನು ಶೋಷಿಸುತ್ತಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಸಣ್ಣ ವ್ಯಾಪಾರಿಗಳ ವ್ಯವಹಾರಗಳು ಕುಂಠಿತಗೊಳ್ಳುತ್ತಿವೆ.

ಸಂಪಾದಕೀಯ ನಿಲುವು

ಪಾಕಿಸ್ತಾನ್ ಗಿಲಗಿಟ್-ಬಾಲ್ಟಿಸ್ತಾನದ ನಾಗರೀಕರನ್ನು ಎಲ್ಲಾ ರೀತಿಯಲ್ಲಿ ಶೋಷಣೆ ಮಾಡುತ್ತಿದೆ ಮತ್ತು ಚೀನಾ ಕೂಡ ಅದಕ್ಕೆ ಕೈಜೋಡಿಸುತ್ತಿದೆ. ಆದ್ದರಿಂದ ಯಾವ ರೀತಿ ಬಾಂಗ್ಲಾದೇಶ ಸ್ವತಂತ್ರಗೊಳಿಸುವುದಕ್ಕಾಗಿ ಭಾರತ ಪಾತ್ರವಹಿಸಿತು, ಅದೇ ರೀತಿ ಯೋಗ್ಯ ಅವಕಾಶ ನೋಡಿ ಈ ಪ್ರದೇಶವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಕೂಡ ವ್ಯೂಹರಚನೆ ರೂಪಿಸಬೇಕು.