ಹೆಚ್ಚುತ್ತಿರುವ ನಗರ ನಕ್ಸಲ್ ವಾದ ಮತ್ತು ಜನ ಸುರಕ್ಷಾ ಕಾನೂನು ವಿಷಯದ ಮೇಲೆ ಪುಣೆಯಲ್ಲಿ ನಡೆದ ವಿಶೇಷ ವಿಚಾರ ಸಂಕಿರಣಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.

ರಾಷ್ಟ್ರಭಕ್ತ ನ್ಯಾಯವಾದಿಗಳ ಸಮಿತಿಯಿಂದ ಆಯೋಜನೆ

ಪುಣೆ – ‘ಹೆಚ್ಚುತ್ತಿರುವ ನಗರ ನಕ್ಸಲ್ ವಾದ ಮತ್ತು ಜನ ಸುರಕ್ಷಾ ಕಾಯ್ದೆ’ ವಿಷಯದ ಮೇಲೆ ಆಗಸ್ಟ್ 19 ರಂದು ತಿಲಕ್ ರಸ್ತೆ, ಸದಾಶಿವ ಪೇಠದಲ್ಲಿರುವ ತಿಲಕ್ ಸ್ಮಾರಕ ಮಂದಿರದಲ್ಲಿ ರಾಷ್ಟ್ರಭಕ್ತ ನ್ಯಾಯವಾದಿಗಳ ಸಮಿತಿಯಿಂದ ಆಯೋಜಿಸಲಾಗಿದ್ದ ವಿಶೇಷ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಿತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ವಿಚಾರ ಸಂಕಿರಣದಲ್ಲಿ ‘ಅಸತ್ಯಮೇವ ಜಯತೆ’ ಪುಸ್ತಕದ ಪ್ರಸಿದ್ಧ ಲೇಖಕ ಶ್ರೀ. ಅಭಿಜಿತ ಜೋಗ, ಭಾಜಪ ಹಿರಿಯ ನಾಯಕ ಶ್ರೀ. ಮಾಧವ ಭಾಂಡಾರಿ, ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ಸಂಘಟಕ ಶ್ರೀ.ಸುನಿಲ ಘನವಟ್, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ. ವಿಕ್ರಮ್ ಭಾವೆ, ಹಾಗೂ ಹಿರಿಯ ಪತ್ರಕರ್ತ ಶ್ರೀ. ಪ್ರಸಾದ ಕಾಥೆ ಭಾಗವಹಿಸಿದ್ದರು. ಪುಣೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು, ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.