ಲಂಡನ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ವಿರೋಧಿಸುತ್ತಿರುವ ಪಾಕಿಸ್ತಾನಿ ಯುವಕರಿಗೆ ಭಾರತೀಯ ಯುವತಿಯರಿಂದ ಪ್ರತ್ಯುತ್ತರ Pakistan Youth Disturb Indian Independence Celebration

ಲಂಡನ್ (ಬ್ರಿಟನ್) – ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಲಂಡನ್ ಬೀದಿಗಳಲ್ಲಿ ಭಾರತದ ರಾಷ್ಟ್ರಧ್ವಜದೊಂದಿಗೆ ಬಂದಿದ್ದ ಭಾರತೀಯ ಯುವತಿಯರೊಂದಿಗೆ ಪಾಕಿಸ್ತಾನಿ ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿ ಕೆಲವು ಪಾಕಿಸ್ತಾನಿ ಯುವಕರು ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಲೇ ಭಾರತೀಯ ಯುವತಿಯರ ಕೈಯಿಂದ ರಾಷ್ಟ್ರಧ್ವಜವನ್ನು ಕಸಿದುಕೊಳ್ಳಲು ಪ್ರಯತ್ನಿಸುವುದು ಕಂಡುಬರುತ್ತದೆ. ಈ ವೇಳೆ, ಭಾರತೀಯ ಯುವತಿಯರು ಪಾಕಿಸ್ತಾನಿಗಳಿಗೆ ಪ್ರತ್ಯುತ್ತರ ನೀಡಿ ಅವರನ್ನು ಹಿಮ್ಮೆಟ್ಟಿಸಿದರು. ಈ ಸಂದರ್ಭದಲ್ಲಿ, ಅವರು “ಹಿಂದೂಸ್ತಾನ್ ಜಿಂದಾಬಾದ್” ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು. ಲಂಡನ್ ಬೀದಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂತಹ ವಿವಾದಗಳು ಆಗಾಗ್ಗೆ ನಡೆಯುತ್ತಿರುತ್ತವೆ.