
ನವದೆಹಲಿ – ಆಗಸ್ಟ್ 11ರ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ಆಗಸ್ಟ್ 18 ರಂದು ದೆಹಲಿ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಬೀದಿ ನಾಯಿಗಳನ್ನು ಹಿಡಿಯಲು ಹೋಗಿದ್ದರು. ಆ ಸಮಯದಲ್ಲಿ ಅಲ್ಲಿನ ನಾಯಿ ಪ್ರೇಮಿಗಳು ಸಿಬ್ಬಂದಿಗಳನ್ನು ಬೆದರಿಸಿ, ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ತಂದಿದ್ದ ವಾಹನಕ್ಕೂ ಹಾನಿ ಮಾಡಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಬೀದಿ ನಾಯಿಗಳನ್ನು ತಕ್ಷಣವೇ ಸ್ಥಳಾಂತರಿಸಬೇಕು ಮತ್ತು ಅವುಗಳನ್ನು ಮತ್ತೆ ಬಿಡಬಾರದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ವಸತಿ ಕಲ್ಯಾಣ ಸಂಘವು ಅಪಾಯಕಾರಿ ನಾಯಿಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿತ್ತು. ಅದರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾಗ ನಾಯಿ ಪ್ರೇಮಿಗಳು ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಹಲವರು ‘ಇದು ನ್ಯಾಯಾಲಯದ ಆದೇಶದ ಅವಹೇಳನೆ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪ್ರಾಣಿಪ್ರೇಮಿಗಳಿಗೆ ಮನುಷ್ಯನ ಜೀವಕ್ಕಿಂತ ನಾಯಿಯ ಜೀವವೇ ಮುಖ್ಯ ಎನಿಸುತ್ತದೆ. ಇಂತಹ ಅಮಾನುಷ ಪ್ರಾಣಿಪ್ರೇಮಿಗಳನ್ನು ‘ಬೀದಿ ನಾಯಿಗಳೊಂದಿಗೆ ಒಂದೇ ಸ್ಥಳದಲ್ಲಿ ಕೂಡಿ ಹಾಕಿ’, ಎಂದು ನಾಯಿಗಳಿಂದ ಕಚ್ಚಿಸಿಕೊಂಡ ಯಾವುದೇ ಪೀಡಿತರು ಬೇಡಿಕೆ ಇಟ್ಟರೆ ಅದರಲ್ಲಿ ತಪ್ಪೇನು ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!