ಆಗಸ್ಟ್ 11ರಂದು ಹಿಂದೂ ಕಾರ್ಯಕರ್ತರಿಂದ ಅಲ್ಲಿನ ಗೋರಿ ಧ್ವಂಸ
(ಮಕಬರಾ ಎಂದರೆ ಮುಸ್ಲಿಂ ವ್ಯಕ್ತಿಯನ್ನು ಮಣ್ಣು ಮಾಡಿದ ನಂತರ ಆ ಜಾಗದಲ್ಲಿ ನಿರ್ಮಿಸಲಾದ ಕಟ್ಟಡ)

ಫತೇಪುರ (ಉತ್ತರ ಪ್ರದೇಶ) – ನವಾಬ್ ಅಬ್ದುಲ್ ಸಮದ್ ಮಕಬರಾ ಹಿಂದೆ ಶಿವ ದೇವಾಲಯವಾಗಿತ್ತು ಎಂದು ಹೇಳುವ ಮೂಲಕ ಆಗಸ್ಟ್ 11 ರಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಲ್ಲಿನ ಸಮಾಧಿಯನ್ನು ಧ್ವಂಸಗೊಳಿಸಿ ಭಗವಾನ್ ಶಿವನ ಪೂಜೆ ಮಾಡಿದ್ದರು. ಇದೀಗ, ಈ ಸ್ಥಳವು ಮೂಲತಃ ಶಿವ ದೇವಸ್ಥಾನ ಎಂದು ಹೇಳಿ ಅದರ ಮಾಲೀಕತ್ವಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿ ಬಿಜೆಪಿ ಹೇಳಿದೆ. ಫತೇಪುರ ಬಿಜೆಪಿ ಜಿಲ್ಲಾಧ್ಯಕ್ಷ ಮುಖಲಾಲ್ ಪಾಲ್ ಈ ಕುರಿತು ಮಾತನಾಡಿ,
ಈ ದೇವಸ್ಥಾನಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೂಡ ಹಿಂದೂ ಸಂಘಟನೆಗಳು ಈ ಸ್ಥಳವನ್ನು ದೇವಸ್ಥಾನವೆಂದು ಹೇಳಿ ಪೂಜೆ ಮಾಡುವ ಘೋಷಣೆ ಮಾಡಿದ್ದರು; ಆದರೆ ಸ್ಥಳೀಯ ಸರ್ಕಾರವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಹಿಂದೂಗಳು ಈ ಸ್ಥಳದ ಚಿತ್ರಕ್ಕೆ ಪೂಜೆ ಮಾಡಿ ಅದರ ಮೇಲೆ ಸಾಂಕೇತಿಕವಾಗಿ ತಮ್ಮ ನಿಯಂತ್ರಣ ಸಾಧಿಸಿರುವುದಾಗಿ ಹೇಳಿಕೊಂಡಿದ್ದರು.
ಪ್ರಸ್ತುತ ಈ ಕಟ್ಟಡ ಪೊಲೀಸರ ವಶದಲ್ಲಿದೆ. ವಿವಾದದಿಂದಾಗಿ ಆಗಸ್ಟ್ 17ರವರೆಗೆ ಜಾರಿಯಲ್ಲಿದ್ದ ಸೆಕ್ಷನ್ 144 ಅನ್ನು 2 ತಿಂಗಳುಗಳವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಹಬ್ಬಗಳಿಗೂ ಈ ಆದೇಶ ಅನ್ವಯವಾಗುತ್ತದೆ.

2012ಕ್ಕಿಂತ ಮೊದಲು ದೇವಸ್ಥಾನವಾಗಿತ್ತು!
2012ಕ್ಕಿಂತ ಮೊದಲು ಈ ಪುರಾತನ ಕಟ್ಟಡ ದೇವಸ್ಥಾನವಾಗಿತ್ತು ಮತ್ತು ಇಲ್ಲಿ ಹಿಂದೂ ಸಮುದಾಯದವರು ಪೂಜೆ ಸಲ್ಲಿಸುತ್ತಿದ್ದರು. ಹಿಂದೂಗಳ ಭೂಮಿಯ ಮೇಲೆ ಮುಸ್ಲಿಮರು ತಮ್ಮ ಧಾರ್ಮಿಕ ಸ್ಥಳವನ್ನು ನಿರ್ಮಿಸಿದ್ದಾರೆ. ಈ ಭೂಮಿ ರಾಮ್ ನರೇಶ್ ಸಿಂಗ್ ಎಂಬ ಹಿಂದೂ ವ್ಯಕ್ತಿಗೆ ಸೇರಿದೆ. ಕಟ್ಟಡದಲ್ಲಿ ಕಮಲದ ಹೂವು ಮತ್ತು ತ್ರಿಶೂಲದ ಚಿತ್ರಗಳಿವೆ, ಈ ಚಿಹ್ನೆಗಳು ಕೇವಲ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತವೆ. ದೇವಸ್ಥಾನದಲ್ಲಿ ಗಂಟೆ ಕಟ್ಟಲು ಬಳಸುವ ಸರಪಳಿ ಕೂಡ ಈ ಕಟ್ಟಡದಲ್ಲಿದೆ. ಮುಸ್ಲಿಂ ಧಾರ್ಮಿಕ ಸ್ಥಳಗಳಲ್ಲಿ ಇವು ಇರುವುದಿಲ್ಲ.
ಸಂಪಾದಕೀಯ ನಿಲುವುಬಹುತೇಕ ಇಸ್ಲಾಮಿಕ್ ಕಟ್ಟಡಗಳು ಮೂಲತಃ ಹಿಂದೂ ದೇವಾಲಯಗಳು ಎಂದು ತಿಳಿದುಬಂದಿದೆ. ಹಿಂದೂಗಳು ಒಂದೊಂದು ಕಟ್ಟಡದ ಮೇಲೆ ತಮ್ಮ ಹಕ್ಕನ್ನು ಸಾಬೀತುಪಡಿಸುವ ಅಗತ್ಯವಿಲ್ಲ, ಸರಕಾರವೇ ಈ ಬಗ್ಗೆ ಕಾನೂನು ಮಾಡಿ ಎಲ್ಲಾ ಇಸ್ಲಾಮಿಕ್ ಕಟ್ಟಡಗಳ ಮೇಲೆ ಹಿಂದೂಗಳಿಗೆ ನಿಯಂತ್ರಣವನ್ನು ನೀಡಿ ಇತಿಹಾಸಕ್ಕೆ ನ್ಯಾಯ ಒದಗಿಸಬೇಕು ಎಂದು ಹಿಂದೂ ಸಮುದಾಯವು ಭಾವಿಸುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!