|

ಬೆಂಗಳೂರು/ಉಡುಪಿ – ಧರ್ಮಸ್ಥಳ ತೀರ್ಥಕ್ಷೇತ್ರದ ವಿಷಯದಲ್ಲಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಧರ್ಮಸ್ಥಳದ ಮಾನಹಾನಿ ಮಾಡಲು ಸಂಚು!
ಶಿವಕುಮಾರ ಅವರು, “ಧರ್ಮಸ್ಥಳದ ಭಕ್ತಿ ಮತ್ತು ಶ್ರದ್ಧೆಯ ಪ್ರಕ್ರಿಯೆಗಳ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಇದು ಧರ್ಮಸ್ಥಳದ ಪರ ಅಥವಾ ವಿರೋಧದ ವಿಷಯವಲ್ಲ. ಎಲ್ಲಾ ಪ್ರಕ್ರಿಯೆಗಳು ನ್ಯಾಯಯುತವಾಗಿ ನಡೆಯಬೇಕು. ನಾನು ಧರ್ಮಸ್ಥಳವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಧರ್ಮಸ್ಥಳದ ವಿಷಯದಲ್ಲಿ ಏನಾದರೂ ಸಂಚು ನಡೆದಿದೆಯೇ? ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ವಿಧಾನಸಭೆಯ ಅಧಿವೇಶನದಲ್ಲಿ ಉತ್ತರ ನೀಡಿ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಅನಾವರಣಗೊಳಿಸಲಿದ್ದಾರೆ” ಎಂದು ಹೇಳಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಈ ವಿಷಯದ ಬಗ್ಗೆ ಕಳಕಳ ಇದೆ. ಯಾರೂ ಸುಳ್ಳು ಹೇಳಿ, ಸಂಚು ರೂಪಿಸಿ ಅಪಮಾನ ಅಥವಾ ಮಾನಹಾನಿ ಮಾಡಬಾರದು ಎಂದು ಮುಖ್ಯಮಂತ್ರಿಗಳು ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿದೆ. ನಾವು ಅದನ್ನು ರಕ್ಷಿಸಬೇಕು. ಇಲ್ಲಿ ಯಾರಿಗೂ ರಕ್ಷಣೆ ನೀಡಲಾಗುವುದಿಲ್ಲ. ಹಾಗೆಯೇ ಅನಗತ್ಯವಾಗಿ ಯಾರಿಗೂ ಕಳಂಕ ತರಬಾರದು” ಎಂದು ಸಹ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಡಿ.ಕೆ. ಶಿವಕುಮಾರ ಅವರ ಹೇಳಿಕೆಗೆ ನನ್ನ ಬೆಂಬಲ ! – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ

“ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರಾಗಿದ್ದೇವೆ. ಧರ್ಮಸ್ಥಳದ ಮಾನಹಾನಿ ಮಾಡಲು ಸಂಚು ರೂಪಿಸಲಾಗಿದೆ ಎಂಬ ಡಿ.ಕೆ. ಶಿವಕುಮಾರ ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಧರ್ಮಸ್ಥಳದ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ತನಿಖೆಯಿಂದಲೇ ಸತ್ಯ ಹೊರಬರಲಿದೆ” ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಮಂಜುನಾಥನ ವಿಗ್ರಹದ ಕೆಳಗೆ ಶವ ಹೂತಿದ್ದಾರೆ ಎಂದರೆ ಅಲ್ಲಿಯೂ ಅಗೆಯುತ್ತೀರಾ ? – ಶಾಸಕ ಯತ್ನಾಳ ಪ್ರಶ್ನೆ

“ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಲಾಗುತ್ತಿದೆ. 20 ಅಡಿ ಆಳ ಅಗೆದರೂ ಏನೂ ಸಿಗುತ್ತಿಲ್ಲ. 20 ಅಡಿ ಆಳದಲ್ಲಿ ಯಾರಾದರೂ ಶವ ಹಾಕಲು ಸಾಧ್ಯವೇ? ಇದು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಹೆಸರನ್ನು ಕೆಡಿಸುವ ಪ್ರಯತ್ನವಾಗಿದೆ” ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಶಾಸಕ ಯತ್ನಾಳ ಅವರು, “ತಿರುಪತಿ ದೇವಾಲಯದ ಲಡ್ಡುವಿನಲ್ಲಿ ಗೋಮಾಂಸದ ಅಂಶಗಳು ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಪ್ರಯತ್ನ ಮಾಡುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ಮನೋಭಾವವಾಗಿದೆ. ಮಂಜುನಾಥನ ಪ್ರಕರಣವೂ ಅದರ ಒಂದು ಭಾಗವಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಅವರು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಹಾಗಾಗಿ ನಾನು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ‘30 ಕಡೆ ಶವಗಳನ್ನು ಹೂತಿದ್ದಾರೆ’ ಎಂದು ಅವರು ಹೇಳುತ್ತಿದ್ದಾರೆ. ನಾಳೆ ‘ಮಂಜುನಾಥ ದೇವರ ವಿಗ್ರಹದ ಕೆಳಗೆ ಶವ ಹೂತಿದ್ದಾರೆ’ ಎಂದು ಹೇಳಿದರೆ ಅಲ್ಲಿಯೂ ಅಗೆಯುತ್ತೀರಾ?” ಎಂದು ಪ್ರಶ್ನಿಸಿ ಶಾಸಕ ಯತ್ನಾಳ ಅವರು ವಿಶೇಷ ತನಿಖಾ ತಂಡ ರಚನೆಯ ಬಗ್ಗೆ ಟೀಕಿಸಿದರು.
ಏನು ಈ ಪ್ರಕರಣ ?ಜುಲೈ 2025 ರಲ್ಲಿ, ಹಿಂದೆ ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಒಬ್ಬ ಅನಾಮಧೇಯ ವ್ಯಕ್ತಿ, 1995 ರಿಂದ 2014 ರವರೆಗೆ ಇಲ್ಲಿನ ಭೂಮಿಯಲ್ಲಿ ಶವಗಳನ್ನು ಹೂತುಹಾಕುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಹೇಳಿಕೊಂಡರು. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಶವಗಳನ್ನೂ ಇಲ್ಲಿ ಹೂತುಹಾಕಲಾಗಿದೆ ಎಂದು ಅವರು ಹೇಳಿಕೊಂಡರು. ಈ ಹೇಳಿಕೆಯ ನಂತರ, ಸರಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಪ್ರಾರಂಭಿಸಿತು. 13 ಸ್ಥಳಗಳಲ್ಲಿ ಅಗೆಯಲಾಯಿತು, ಆದರೆ ಎಲ್ಲಿಯೂ ಏನೂ ಪತ್ತೆಯಾಗಲಿಲ್ಲ. ಆದ್ದರಿಂದ ಅಗೆಯುವ ಕೆಲಸವನ್ನು ನಿಲ್ಲಿಸಲಾಗಿದೆ. |
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ