ರಾಹುಲ ಗಾಂಧಿ ಇವರ ಆರೋಪದ ಕುರಿತು ಮುಖ್ಯ ಚುನಾವಣಾ ಆಯುಕ್ತರ ಪ್ರತ್ಯುತ್ತರ

ನವದೆಹಲಿ – ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಅವರು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯ ಕುರಿತು ಚುನಾವಣಾ ಆಯೋಗದ ಮೇಲೆ ಮತ ಕಳ್ಳತನದ ಆರೋಪ ಮಾಡಿದ್ದರು. ಗಾಂಧಿಯವರ ಆರೋಪಗಳಿಗೆ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ ಕುಮಾರ ಅವರು ಆಗಸ್ಟ್ 17ರಂದು ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದರು. ‘ರಾಹುಲ ಗಾಂಧಿ ಅವರ ಆರೋಪಗಳಿಗೆ ಸಾಕ್ಷಿಗಳಿದ್ದರೆ, ಅವರು 7 ದಿನಗಳೊಳಗೆ ಅಫಿಡವಿಟ್ ಸಲ್ಲಿಸಬೇಕು. ಇಲ್ಲದಿದ್ದರೆ, ಅವರು ಇಡೀ ದೇಶದ ಕ್ಷಮೆಯಾಚಿಸಬೇಕು’ ಎಂದು ಕರೆ ನೀಡಿದ್ದಾರೆ.
" Submit evidence within 7 days, or apologize to the Nation !" – Chief Election Commissioner responds to Rahul Gandhi’s allegations
Voter list correction is a shared responsibility
Parties have time until Sept 1 to raise objections#ElectionCommission #RahulGandhi
VC –@ANI pic.twitter.com/HxmKXaHQQK— Sanatan Prabhat (@SanatanPrabhat) August 17, 2025
ಮತದಾರರ ಪಟ್ಟಿ ಶುದ್ಧೀಕರಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿ!
ಮತದಾರರ ಪಟ್ಟಿ ಶುದ್ಧೀಕರಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿ ಎಂದು ಜ್ಞಾನೇಶ ಕುಮಾರ ಹೇಳಿದರು. ಬಿಹಾರದಲ್ಲಿ ನಮ್ಮ ಮತದಾನ ಕೇಂದ್ರದ ಅಧಿಕಾರಿಗಳು (ಬೂತ್ ಲೆವೆಲ್ ಏಜೆಂಟ್ – ಬಿ.ಎಲ್.ಒ.) ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಬಹುಶಃ ಇದೇ ಕಾರಣದಿಂದಾಗಿ ಆಗಸ್ಟ್ 1ರ ನಂತರ ಯಾವುದೇ ರಾಜಕೀಯ ಪಕ್ಷವು ಆಕ್ಷೇಪಣೆ ಸಲ್ಲಿಸಿಲ್ಲ. ಬಿಹಾರದ ಮತದಾರರ ಪಟ್ಟಿ ಸಂಪೂರ್ಣವಾಗಿ ಸರಿಯಾಗಿದೆ ಎಂದು ಚುನಾವಣಾ ಆಯೋಗ ಭಾವಿಸುವುದಿಲ್ಲ. ಇದರಲ್ಲಿ ದೋಷಗಳಿರಬಹುದು, ಅವುಗಳನ್ನು ಸರಿಪಡಿಸಲಾಗುವುದು ಎಂದು ಆಯೋಗ ಹೇಳುತ್ತದೆ. ಇನ್ನೂ 15 ದಿನಗಳು ಬಾಕಿ ಇವೆ.
ಎಲ್ಲಾ ರಾಜಕೀಯ ಪಕ್ಷಗಳು ಜವಾಬ್ದಾರಿ ತೆಗೆದುಕೊಳ್ಳಬೇಕು!
ಜ್ಞಾನೇಶ ಕುಮಾರ ಅವರು ಮಾತು ಮುಂದುವರೆಸಿ, ‘ಸೆಪ್ಟೆಂಬರ್ 1ರ ನಂತರವೂ ಇದೇ ರೀತಿಯ ಆರೋಪಗಳು ಮುಂದುವರಿದರೆ, ಅದರ ಜವಾಬ್ದಾರಿ ಯಾರದು? ಎಲ್ಲಾ ಮಾನ್ಯತೆ ಪಡೆದ ಪಕ್ಷಗಳಿಗೆ ಇನ್ನೂ 15 ದಿನಗಳಿವೆ. ಸೆಪ್ಟೆಂಬರ್ 1ರ ಮೊದಲು ದೋಷಗಳನ್ನು ತೋರಿಸುವಂತೆ ನಾನು ಎಲ್ಲಾ ರಾಜಕೀಯ ಪಕ್ಷಗಳಿಗೆ ಕರೆ ನೀಡುತ್ತೇನೆ, ಚುನಾವಣಾ ಆಯೋಗ ಅವುಗಳನ್ನು ಸರಿಪಡಿಸಲು ಸಿದ್ಧವಾಗಿದೆ’ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!