|

ಮುಂಬಯಿ, ೧೬ ಆಗಸ್ಟ್ (ವರದಿ) – ಭಾರತದ ಅತಿ ಹೆಚ್ಚು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾದ ಮಹಾರಾಷ್ಟ್ರದ ಗಡಚಿರೋಲಿ! ೨೦೧೫ ರಿಂದ ಏಪ್ರಿಲ್ ೨೦೨೫ರ ವರೆಗೆ ನಕ್ಸಲರು ಈ ಜಿಲ್ಲೆಯಲ್ಲಿ ೩೮೩ ದಾಳಿಗಳನ್ನು ಮಾಡಿ ೧೩೪ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಇದೇ ಅವಧಿಯಲ್ಲಿ ಪೊಲೀಸರು ನಕ್ಸಲರ ವಿರುದ್ಧ ನಡೆಸಿದ ಕಾರ್ಯಾಚರಣೆಗಳಲ್ಲಿ ೧೮೭ ನಕ್ಸಲರು ಸಹ ಹತ್ಯೆಯಾಗಿದ್ದಾರೆ. ಎಂದು ‘ಸನಾತನ ಪ್ರಭಾತ್’ನ ವಿಶೇಷ ವರದಿಗಾರ ಶ್ರೀ. ಪ್ರೀತಮ ನಾಚಣಕರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಗೃಹ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ೨೦೨೧ ರಿಂದ ಅಂಕಿ-ಅಂಶಗಳನ್ನು ಪರಿಶೀಲಿಸಿದರೆ, ನಕ್ಸಲರು ಮಾಡಿದ ದಾಳಿಗಳು ಮತ್ತು ಅವುಗಳಲ್ಲಿ ಹತ್ಯೆಯಾದ ನಾಗರಿಕರ ಸಂಖ್ಯೆಯಲ್ಲಿ ಕನಿಷ್ಠ ೬೭ ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ.
ಕಳೆದ ೧೦ ವರ್ಷಗಳಲ್ಲಿ ನಕ್ಸಲರ ದಾಳಿಗಳು ಮತ್ತು ಅವರು ಮಾಡಿದ ನಾಗರಿಕರ ಹತ್ಯೆ!
ವರ್ಷ |
ನಕ್ಸಲ್ ದಾಳಿಗಳು |
ನಾಗರಿಕರ ಸಾವುಗಳು |
| 2015 | 51 | 20 |
| 2016 | 72 | 24 |
| 2017 | 68 | 16 |
| 2018 | 53 | 9 |
| 2019 | 49 | 33 |
| 2020 | 26 | 8 |
| 2021-25 | 64 | 24 |
| ಒಟ್ಟು | 383 | 134 |
‘ಆತ್ಮಸಮರ್ಪಣಾ’ ಯೋಜನೆಗೆ ಕಡಿಮೆ ಪ್ರತಿಕ್ರಿಯೆ!
ಗೃಹ ಇಲಾಖೆಯು ಜಾರಿಗೊಳಿಸಿದ ‘ಆತ್ಮಸಮರ್ಪಣಾ’ ಯೋಜನೆಯ ಅಡಿಯಲ್ಲಿ ೧೦ ವರ್ಷಗಳ ಅವಧಿಯಲ್ಲಿ ಕೇವಲ ೭ ನಕ್ಸಲರು ಮಾತ್ರ ಶರಣಾಗಿದ್ದಾರೆ. ಶರಣಾದ ನಕ್ಸಲರಿಗೆ ಉದ್ಯೋಗ ನೀಡಲು, ಅವರ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡಲು ಈ ರೀತಿ ಸರಕಾರದಿಂದ ಸಹಾಯ ಮಾಡಲಾಗಿದೆ.
ಮಹಾರಾಷ್ಟ್ರದ ೪ ಜಿಲ್ಲೆಗಳು ನಕ್ಸಲ್ ಮುಕ್ತ, ಇನ್ನೂ ೨ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ!
ಜೂನ್ ೨೦೨೫ ರಲ್ಲಿ ಮಹಾರಾಷ್ಟ್ರದ ಚಂದ್ರಾಪುರ, ಭಂಡಾರಾ, ನಾಂದೇಡ ಮತ್ತು ಯವತ್ಮಾಳ ಈ ೪ ಜಿಲ್ಲೆಗಳು ನಕ್ಸಲ್ ಮುಕ್ತವಾಗಿವೆ ಎಂದು ಸರಕಾರ ಘೋಷಿಸಿದೆ. ಆದರೆ, ಗೋಂದಿಯಾ ಮತ್ತು ಗಡಚಿರೋಲಿ ಜಿಲ್ಲೆಗಳಲ್ಲಿ ಇನ್ನೂ ನಕ್ಸಲ್ ಚಟುವಟಿಕೆಗಳಿವೆ. ಇದರಲ್ಲಿ ಗೋಂದಿಯಾ ಜಿಲ್ಲೆಯ ತಿರೋಡಾ, ಗೋರೆಗಾವ್, ಸಡಕ್ ಅರ್ಜುನಿ, ಸಾಲೇಕಸಾ, ದೇವರಿ ಮತ್ತು ಅರ್ಜುನಿ ಮೊರಗಾವ್ ತಾಲ್ಲೂಕುಗಳು ನಕ್ಸಲ್ ಪೀಡಿತವಾಗಿದ್ದರೆ, ಗಡಚಿರೋಲಿ ಸಂಪೂರ್ಣ ಜಿಲ್ಲೆಯೇ ನಕ್ಸಲ್ ಪೀಡಿತವಾಗಿದೆ. ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಮಾರ್ಚ್ ೨೦೨೬ರ ವರೆಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಗೋಂದಿಯಾ ಮತ್ತು ಗಡಚಿರೋಲಿ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳನ್ನು ಶಾಶ್ವತವಾಗಿ ಮಟ್ಟಹಾಕಲು ಸರಕಾರ ಪ್ರಯತ್ನಿಸಬೇಕಾಗಿದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!