ದುಬೈ: ಜನವರಿಯಿಂದ ಜೂನ್‌ವರೆಗೆ 3 ಸಾವಿರದ 600 ಜನರು ಇಸ್ಲಾಂಗೆ ಮತಾಂತರ!

ಸರಕಾರಿ ಸಂಸ್ಥೆಯಿಂದ ಮತಾಂತರ ಕಾರ್ಯ

ದುಬೈ – 2025ರ ಮೊದಲ ಆರು ತಿಂಗಳಲ್ಲಿ (ಜನವರಿ – ಜೂನ್) ದುಬೈನಲ್ಲಿ 3,600 ಕ್ಕಿಂತ ಹೆಚ್ಚು ಜನರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಈ ಜನರು ಯಾವ ಧರ್ಮಕ್ಕೆ ಸೇರಿದವರು ಎಂದು ತಿಳಿಸಲಾಗಿಲ್ಲ; ಆದರೆ ಅವರು ವಿವಿಧ ದೇಶಗಳಿಂದ ದುಬೈಗೆ ಬಂದವರು.

ಈ ಮತಾಂತರವನ್ನು ‘ಮೊಹಮ್ಮದ್ ಬಿನ್ ರಶೀದ್ ಸೆಂಟರ್ ಫಾರ್ ಇಸ್ಲಾಮಿಕ್ ಕಲ್ಚರ್’ ಎಂಬ ಸಂಸ್ಥೆಯು ನಡೆಸಿದೆ. ಈ ಸಂಸ್ಥೆಯು ದುಬೈ ಸರಕಾರದ ‘ಇಸ್ಲಾಮಿಕ್ ಅಫೇರ್ಸ್ ಅಂಡ್ ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದುಬೈ ಸರಕಾರದ ಈ ಪ್ರಮುಖ ಸಂಸ್ಥೆಯು ಈ ಮಾಹಿತಿ ನೀಡಿದೆ. ಈ ಸಂಸ್ಥೆಯು ದುಬೈ ಸರಕಾರದ ಒಂದು ವಿಭಾಗವಾಗಿದ್ದು, ಇಸ್ಲಾಂಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತದೆ.

1969ರಲ್ಲಿ ಸ್ಥಾಪನೆಯಾದ ಈ ವಿಭಾಗದ ಉದ್ದೇಶ ದುಬೈನಲ್ಲಿ ಧಾರ್ಮಿಕ ಜಾಗೃತಿ ಮತ್ತು ಇಸ್ಲಾಮಿಕ್ ಮೌಲ್ಯಗಳನ್ನು ಹೆಚ್ಚಿಸುವುದಾಗಿದೆ. ಈ ವಿಭಾಗ ಕೇವಲ ಕುರಾನ್ ಹಂಚುವುದು, ಮಸೀದಿಗಳ ಮೇಲ್ವಿಚಾರಣೆ ಮಾಡುವುದು ಅಥವಾ ಇಸ್ಲಾಮಿಕ್ ಶಿಕ್ಷಕರಿಗೆ ಪರವಾನಗಿ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಜಗತ್ತಿಗೆ ಇಸ್ಲಾಂನ ಬೋಧನೆಗಳನ್ನು ಪ್ರಸ್ತುತಪಡಿಸುವುದು ಸಹ ಇದರ ಕಾರ್ಯವಾಗಿದೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶಗಳಲ್ಲಿ ಸರಕಾರದಿಂದ ಇಸ್ಲಾಂ ಧರ್ಮ ಸ್ವೀಕಾರಕ್ಕಾಗಿ ಸಂಸ್ಥೆಗಳನ್ನು ನಡೆಸಲಾಗುತ್ತದೆ, ಇದನ್ನು ಗಮನಿಸಿದರೆ ಹಿಂದೂ ರಾಷ್ಟ್ರದ ಸರಕಾರವು ಹಿಂದೂ ಧರ್ಮವನ್ನು ಸ್ವೀಕರಿಸುವವರಿಗಾಗಿ, ಈ ಹಿಂದೆ ಮತಾಂತರಗೊಂಡವರು ಈಗ ಹಿಂದೂ ಧರ್ಮಕ್ಕೆ ಹಿಂದಿರುಗಲು ಇಚ್ಛಿಸುವವರಿಗಾಗಿ ಇಂತಹ ಸಂಸ್ಥೆಯನ್ನು ಸ್ಥಾಪಿಸಿದರೆ, ಅದರಲ್ಲಿ ತಪ್ಪೇನು?