
(ಮುಬಾರಾತ್ ಎಂದರೆ ಪರಸ್ಪರ ಒಪ್ಪಿಗೆಯೊಂದಿಗೆ, ಯಾವುದೇ ಲಿಖಿತ ಒಪ್ಪಂದವಿಲ್ಲದೆ ಮೌಖಿಕವಾಗಿ ನೀಡುವ ವಿಚ್ಛೇದನ)
ಕರ್ಣಾವತಿ (ಗುಜರಾತ) – ಮುಸ್ಲಿಮರಲ್ಲಿ ಮದುವೆಯ ಸಮಯದಲ್ಲಿ ‘ಖುಬೂಲ್’ ಎಂದು ಹೇಳಿದ ತಕ್ಷಣವೇ ಮದುವೆ ಮಾನ್ಯವಾಗುವಂತೆ, ವಿಚ್ಛೇದನವನ್ನು ಕೂಡ ಮೌಖಿಕವಾಗಿ ನೀಡಬಹುದು ಎಂದು ಗುಜರಾತ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ಈ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು, ‘ಮುಬಾರಾತ್’ ಮೂಲಕ ವಿಚ್ಛೇದನ ನೀಡಲು ಸಾಧ್ಯವಿದೆ ಎಂದು ತಿಳಿಸಿದೆ. ಕುರಾನ್ ಮತ್ತು ಹದೀಸ್ ಆಧಾರದ ಮೇಲೆ, ರಾಜಕೋಟ್ ಇಲ್ಲಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಆ ಆದೇಶದಲ್ಲಿ ಮುಸ್ಲಿಂ ದಂಪತಿಯೊಬ್ಬರಿಗೆ ‘ಮುಬಾರಾತ್’ ಮೂಲಕ ವಿಚ್ಛೇದನ ಪಡೆಯಲು ಅವಕಾಶ ನಿರಾಕರಿಸಲಾಗಿತ್ತು.
ಮುಸ್ಲಿಮರಲ್ಲಿ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಯಾವುದೇ ನೋಂದಣಿ ಅಥವಾ ಲಿಖಿತ ಒಪ್ಪಂದದ ಅಗತ್ಯವಿಲ್ಲ. ಮದುವೆಗೆ ‘ಖುಬೂಲ್’ ಸಾಕಾಗುವಂತೆ, ವಿಚ್ಛೇದನಕ್ಕೆ ‘ಮುಬಾರಾತ್’ ಸಾಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಈ ಪ್ರಕರಣವನ್ನು ಮತ್ತೆ ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸಿದ್ದು, ಮೂರು ತಿಂಗಳೊಳಗೆ ವಿಚಾರಣೆ ಮುಗಿಸುವಂತೆ ಸೂಚಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!