ಬ್ರಾಜಿಲ್‌ನ ಮುಂದಾಳತ್ವ

(BRICS ಎಂದರೆ ಬ್ರಾಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈ 10 ಉದಯೋನ್ಮುಖ ಆರ್ಥಿಕತೆಗಳ ಗುಂಪು)
(G-7 ಎಂದರೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಈ 7 ಅಭಿವೃದ್ಧಿ ಹೊಂದಿದ ದೇಶಗಳ ಗುಂಪು)
ಬ್ರಾಝಿಲಿಯಾ (ಬ್ರಾಜಿಲ್) – ಡೊನಾಲ್ಡ್ ಟ್ರಂಪ್ ಬ್ರಾಜಿಲ್ ಮೇಲೆ ವಿಧಿಸಿರುವ ಹೆಚ್ಚುವರಿ ಶೇಕಡಾ 50 ರಷ್ಟು ಆಮದು ತೆರಿಗೆ ಕುರಿತು ಚರ್ಚಿಸಲು ಬ್ರಾಜಿಲ್ BRICS ದೇಶಗಳ ಆನ್‌ಲೈನ್ ಸಭೆಯನ್ನು ಆಯೋಜಿಸಿದೆ. ಬ್ರಾಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ವ್ಯಾಪಾರ ತೆರಿಗೆ ವಿರೋಧಿ ಕ್ರಮಗಳು ಮತ್ತು ಸಮಾನ ವ್ಯಾಪಾರ ಕರೆನ್ಸಿ ಕುರಿತು ಚರ್ಚಿಸಲು ಈ ಸಭೆಯನ್ನು ಕರೆದಿದ್ದಾರೆ. ಲುಲಾ ಡಾ ಸಿಲ್ವಾ ಅವರು, “ನಮಗೆ ಪ್ರಜಾಪ್ರಭುತ್ವ, ವಾಣಿಜ್ಯ ಗೌರವ ಮತ್ತು ಬಹುಪಕ್ಷೀಯತೆ ಮುಖ್ಯವಾಗಿದೆ. ಅಮೆರಿಕ ಆಡುತ್ತಿರುವ ಈ ಆಟ ಅದಕ್ಕೆ ಮಾರಕವಾಗಲಿದೆ” ಎಂದು ಹೇಳಿದರು.
🌍⚡ BRICS takes on Trump’s tax war!
Led by Brazil, the 10-nation bloc (Brazil, Russia, India, China, South Africa, Egypt, Ethiopia, Indonesia, Iran, UAE) is set to counter US tariffs head-on.
With BRICS now more influential than the G7, leaders say it’s time to show Washington… pic.twitter.com/4koyHvMnqg
— Sanatan Prabhat (@SanatanPrabhat) August 14, 2025
ಲುಲಾ ಡಾ ಸಿಲ್ವಾ ಅವರು ಮಂಡಿಸಿದ ಅಂಶಗಳು!
1. ಬ್ರಾಜಿಲ್ ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ಇತರ ರಾಜತಾಂತ್ರಿಕ ಮಾರ್ಗಗಳ ಮೂಲಕ ಅಮೆರಿಕದೊಂದಿಗೆ ವಿವಾದವನ್ನು ಬಗೆಹರಿಸಲು ಪ್ರಯತ್ನಿಸುತ್ತದೆ. ಆದರೂ, ಡೊನಾಲ್ಡ್ ಟ್ರಂಪ್ ಅವರೊಂದಿಗೆ ನೇರ ಮಾತುಕತೆ ಇರುವುದಿಲ್ಲ.
2. ನಾವು ಸಮಾನ ವ್ಯಾಪಾರ ಕರೆನ್ಸಿಗೆ ಬದ್ಧರಾಗಿದ್ದೇವೆ. ಇದರಿಂದ ಡಾಲರ್ ಮೇಲಿನ ಜಾಗತಿಕ ಅವಲಂಬನೆ ಕಡಿಮೆ ಆಗುವುದು.
3. ಡಾಲರ್‌ಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ; ಆದರೆ BRICS ಒಳಗೆ ವ್ಯಾಪಾರಕ್ಕಾಗಿ ನಾವು ಪ್ರತ್ಯೇಕ ಕರೆನ್ಸಿಯನ್ನು ಬಳಸಬೇಕು ಎಂದು ನಾವು ಭಾವಿಸುತ್ತೇವೆ.
ಆದಾಗ್ಯೂ, BRICS ದೇಶಗಳು ಸಮಾನ ವ್ಯಾಪಾರ ಕರೆನ್ಸಿಯನ್ನು ರಚಿಸಿದರೆ, ಅವರ ಮೇಲೆ ಶೇಕಡ 100 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು.
ಸಂಪಾದಕೀಯ ನಿಲುವುಅಮೆರಿಕ ಮತ್ತು ಅದರ ಅಭಿವೃದ್ಧಿ ಹೊಂದಿದ ದೇಶಗಳ ‘G-7’ ಗಿಂತ ‘BRICS’ ನ ಜಾಗತಿಕ ಪ್ರಾಮುಖ್ಯತೆ ಹೆಚ್ಚುತ್ತಿದೆ, ಆದ್ದರಿಂದ ಈಗ ಟ್ರಂಪ್‌ಗೆ ಪಾಠ ಕಲಿಸುವುದು ಆವಶ್ಯಕವಾಗಿದೆ ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !