|

ಮುಂಬಯಿ – ‘ಖಾಲಿದ್ ಕಾ ಶಿವಾಜಿ’ ಚಲನಚಿತ್ರದ ಸಂಭಾಷಣೆಗಳ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ, ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿವೆ. “ನೀವು ‘ಖಾಲಿದ್ ಕಾ ಶಿವಾಜಿ’ ಚಿತ್ರವನ್ನು ಪ್ರದರ್ಶಿಸಿದರೆ ನಿಮ್ಮ ಚಿತ್ರಮಂದಿರ ಉಳಿಯುವುದಿಲ್ಲ” ಎಂದು ಅಣ್ಣಾಸಾಹೇಬ ಪಾಟೀಲ ಆರ್ಥಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ. ನರೇಂದ್ರ ಪಾಟೀಲ ಅವರು ಮಲ್ಟಿಪ್ಲೆಕ್ಸ್ (ಚಿತ್ರಮಂದಿರ) ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಚಿತ್ರದ ಮೂಲಕ ಗಣೇಶೋತ್ಸವದ ಸಮಯದಲ್ಲಿ ಗಲಭೆ ಸೃಷ್ಟಿಸಲು ನಿರ್ದೇಶಕ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ.
ಶ್ರೀ. ಪಾಟೀಲ ಅವರು ಚಿತ್ರದ ವಿವಾದದ ಹಿನ್ನೆಲೆಯಲ್ಲಿ, ಆಗಸ್ಟ್ 13 ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರನ್ನು ಭೇಟಿಯಾದರು. ನಂತರ ಮಾತನಾಡಿದ ಅವರು, “‘ಖಾಲಿದ್ ಕಾ ಶಿವಾಜಿ’ ಟ್ರೈಲರ್ ಮೂಲಕ ಉದ್ದೇಶಪೂರ್ವಕವಾಗಿ ಮರಾಠಾ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಮಹಾರಾಜರ ಸರದಾರರು ಮೊಘಲ್ ಮನಸ್ಥಿತಿಯವರಾಗಿರಲಿಲ್ಲ. ಅವರು ಮೊಘಲರ ವಿರುದ್ಧ ಹೋರಾಡಿದ್ದರು. ಗಣೇಶೋತ್ಸವದ ಮೊದಲು ಈ ಚಿತ್ರವನ್ನು ಬಿಡುಗಡೆ ಮಾಡಲು ಇವರು ಬಯಸಿದ್ದರು. ನಂತರ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಗಲಭೆಗಳನ್ನು ಹುಟ್ಟುಹಾಕಲು ನಿರ್ದೇಶಕರು ಯೋಜಿಸಿದ್ದರು” ಎಂದು ಅವರು ಹೇಳಿದರು. “ಚಿತ್ರವನ್ನು ಕನಿಷ್ಠ ಒಂದು ತಿಂಗಳ ಕಾಲ ಮುಂದೂಡಬೇಕೆಂದು ನಾವು ವಿನಂತಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ತಪ್ಪು ಇತಿಹಾಸವನ್ನು ಏಕೆ ತೋರಿಸಲಾಗುತ್ತಿದೆ?
“ಶ್ರೀ. ಪಾಟೀಲ ಇವರು ಮಾತನಾಡಿ, ತಪ್ಪು ಇತಿಹಾಸವನ್ನು ಜನರಿಗೆ ಏಕೆ ತೋರಿಸಲಾಗುತ್ತಿದೆ? ಇದರ ಬಗ್ಗೆ ತನಿಖೆ ನಡೆಸಲು ಗೃಹ ಇಲಾಖೆಯಡಿ ವಿಶೇಷ ತಂಡವನ್ನು ರಚಿಸಬೇಕು ಮತ್ತು ತನಿಖಾ ಅಧಿಕಾರಿಯನ್ನು ನೇಮಿಸಬೇಕು ಎಂದು ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರು ನಮ್ಮ ಕಾರ್ಯಕರ್ತರ ಮಾತುಗಳನ್ನು ಆಲಿಸಿದ್ದಾರೆ. ಇದರ ಹಿಂದಿನ ಸೂತ್ರಧಾರರನ್ನು ಅವರು ಶೀಘ್ರದಲ್ಲೇ ಬಯಲಿಗೆ ತರುತ್ತಾರೆ. ಯಾರ ಮೂಲಕ ಈ ಚಿತ್ರವನ್ನು ಕಳುಹಿಸಲಾಗಿದೆ ಎಂಬ ಬಗ್ಗೆಯೂ ತನಿಖೆಯಾಗಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ