ಓರ್ವ ಹಿಂದೂವಿನ ಕೊಲೆ ಮಾಡಿದ್ದ ೫ ಮುಸಲ್ಮಾನರಿಗೆ ಜೀವವಧಿ ಶಿಕ್ಷೆ ! : Rachit Murder

ಫೆಬ್ರುವರಿ ೨೦೨೧ ರಲ್ಲಿ ಮಾರುಕಟ್ಟೆಯಲ್ಲಿ ಹಾಡು ಹಗಲು ಗುಂಡುಗಳು ಹಾರಿಸಲಾಗಿತ್ತು !

ಆರೋಪಿಗೆ ಜೀವಾವಧಿ ಶಿಕ್ಷೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಬಿಜನೌರ್‌ನಲ್ಲಿ ಹಿಂದೂ ಯುವಕ ರಚಿತ್‌ನನ್ನು ಗುಂಡಿಕ್ಕಿ ಕೊಲೆ ಮಾಡಿರುವ ೫ ಪ್ರಮುಖ ಮುಸ್ಲಿಂ ಆರೋಪಿಗಳು ಸೇರಿದಂತೆ ೧೧ ಜನರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಎಲ್ಲಾ ಅಪರಾಧಿಗಳಿಗೆ ಒಟ್ಟು ೫ ಲಕ್ಷದ ೭೩ ಸಾವಿರದ ೫೦೦ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ದಂಡದ ಅರ್ಧ ಹಣವನ್ನು ರಚಿತ್‌ನ ತಂದೆ ಧರ್ಮೇಂದ್ರ ಅವರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಫೆಬ್ರವರಿ ೫, ೨೦೨೧ ರಂದು, ರಚಿತ್ ಮೊಬೈಲ್ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದನು. ಆಗ ಅಲ್ಲಿ ಶಹಜಾದ್, ಶಾದಾಬ್, ಶಹಬರ್, ಆಸಿಫ್ ಮತ್ತು ಶಾರಿಕ್ ಸೇರಿದಂತೆ ೧೧ ಜನರು ಆತನನ್ನು ಸುತ್ತುವರೆದು, ಮನಬಂದಂತೆ ಗುಂಡು ಹಾರಿಸಿದ್ದರು. ಇದರಿಂದ ತಪ್ಪಿಸಿಕೊಳ್ಳಲು ರಚಿತ್ ಒಂದು ಅಂಗಡಿಗೆ ಓಡಿಹೋದನು. ಆದರೆ ಹಂತಕರು ಅಲ್ಲಿಗೆ ನುಗ್ಗಿ ಅವನ ಮೇಲೆ ಗುಂಡು ಹಾರಿಸಿದ್ದರು. ಮಾರುಕಟ್ಟೆಯ ಮಧ್ಯದಲ್ಲಿ ಈ ಕೊಲೆ ನಡೆದಿದ್ದರಿಂದ, ಹಂತಕರು ಜನರಿಗೆ, “ಕೊಲೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ, ಅವರನ್ನು ಸಹ ಕೊಲ್ಲಲಾಗುವುದು,” ಎಂದು ಬೆದರಿಕೆ ಹಾಕಿದ್ದರು. ಕೊಲೆ ನಡೆಯುವ ಕೆಲವು ದಿನಗಳ ಮೊದಲು, ರಚಿತ್ ಮತ್ತು ಶಾದಾಬ್ ನಡುವೆ ಜಗಳ ನಡೆದಿತ್ತು. ಅದೇ ದ್ವೇಷ ಕೊಲೆಗೆ ಕಾರಣವಾಗಿತ್ತು.

೫ ಮುಖ್ಯ ಆರೋಪಿಗಳಾದ ಶಹಜಾದ್, ಶಾದಾಬ್, ಶಹಬರ್, ಆಸಿಫ್, ಶಾರಿಕ್ ಜೊತೆಗೆ ಮೊಹಮ್ಮದ್ ನಾಜಿಮ್, ಜಾನಿ, ಹೃತಿಕ್, ಮತೀನ್, ಸಮೀರ್ ಶೇಖ್ ಮತ್ತು ವಾಜಿದ್ ಎಂಬ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.