ಚೀನಾ ಭಾರತದ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳುವ ಸಾಧ್ಯತೆ! : India China Flights

ಗಲ್ವಾನ್ ಸಂಘರ್ಷದ ಬಳಿಕ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು

ನವದೆಹಲಿ – 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬಳಿಕ ಎರಡೂ ರಾಷ್ಟ್ರಗಳು ಪರಸ್ಪರ ವಿಮಾನ ಸೇವೆಗಳನ್ನು ನಿಲ್ಲಿಸಿದ್ದವು. ಆದರೆ, ಆಗಸ್ಟ್ ಕೊನೆಯ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಟಿಯಾನ್ಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸಭೆಗೆ ಹೋಗಲಿದ್ದಾರೆ. ಈ ಸಮಯದಲ್ಲಿ ವಿಮಾನ ಸೇವೆಗಳನ್ನು ಪುನಃ ಆರಂಭಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಭಾರತವು ವಿಮಾನಯಾನ ಸಂಸ್ಥೆಗಳಿಗೆ ಚೀನಾಕ್ಕೆ ಹೋಗಲು ತಕ್ಷಣ ವಿಮಾನಗಳನ್ನು ಸಿದ್ಧಪಡಿಸುವಂತೆ ಹೇಳಿದೆ. ಕಳೆದ 4-5 ವರ್ಷಗಳಿಂದ ಎರಡೂ ದೇಶಗಳ ಪ್ರಯಾಣಿಕರು ಹಾಂಗ್‌ಕಾಂಗ್ ಅಥವಾ ಸಿಂಗಾಪುರ ಮೂಲಕ ಪರಸ್ಪರ ದೇಶಗಳಿಗೆ ಹೋಗಬೇಕಿತ್ತು.

ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಸುಧಾರಿಸುತ್ತಿವೆ! – ಚೀನಾ

ಚೀನಾದ ‘ಥಿಂಕ್ ಟ್ಯಾಂಕ್’ (ನೀತಿಗಳನ್ನು ನಿರ್ಧರಿಸಲು ಅಧ್ಯಯನ ಮಾಡುವ ಸಂಸ್ಥೆ) ‘ಸೆಂಟರ್ ಫಾರ್ ಚೀನಾ ಅಂಡ್ ಗ್ಲೋಬಲೈಸೇಶನ್’ನ ಮುಖ್ಯಸ್ಥ ಹೆನ್ರಿ ವಾಂಗ್ ಅವರ ಪ್ರಕಾರ, ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಸುಧಾರಿಸುತ್ತಿವೆ. ‘ಗ್ಲೋಬಲ್ ಸೌತ್’ನ ನಾಯಕರಾಗಿ ಭಾರತ ಮತ್ತು ಚೀನಾ ಪರಸ್ಪರ ಮಾತನಾಡಬೇಕಾದೆ. ಟ್ರಂಪ್ ಅವರ ವ್ಯಾಪಾರ ಸಮರದಿಂದಾಗಿ ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಅರಿತುಕೊಂಡಿದೆ. (‘ಗ್ಲೋಬಲ್ ಸೌತ್’ ಎಂದರೆ ದಕ್ಷಿಣ ಮತ್ತು ಮಧ್ಯ ಅಮೆರಿಕದ ದೇಶಗಳು, ಆಫ್ರಿಕಾದ ದೇಶಗಳು, ಆಸಿಯಾನ್ ದೇಶಗಳು, ಓಷಿಯಾನಿಯ ದ್ವೀಪ ರಾಷ್ಟ್ರಗಳು, ಭಾರತೀಯ ಉಪಖಂಡದ ದೇಶಗಳು, ಕೊಲ್ಲಿ ದೇಶಗಳು (ಬ್ರೂನೈ, ಕಾಂಬೋಡಿಯಾ, ಇಂಡೋನೇಷಿಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್, ವಿಯೆಟ್ನಾಂ), ಚೀನಾ ಇತ್ಯಾದಿ ದೇಶಗಳ ಗುಂಪು.)