|

ನವದೆಹಲಿ – ಬಿಜೆಪಿಯ ಮಾಜಿ ಸಂಸದೆ ಮತ್ತು ಪ್ರಾಣಿ ಪ್ರಿಯೆ ಮೇನಕಾ ಗಾಂಧಿ ಅವರು ಬೀದಿ ನಾಯಿಗಳನ್ನು ಹಿಡಿಯುವ ಸುಪ್ರೀಂ ಕೋರ್ಟ್ ಆದೇಶವನ್ನು ‘ಅವ್ಯಾವಹಾರಿಕ’ ಎಂದು ಕರೆದಿದ್ದಾರೆ. ಬೀದಿ ನಾಯಿಗಳನ್ನು ನೋಡಿಕೊಳ್ಳಲು ದೆಹಲಿ ಸರಕಾರಕ್ಕೆ 15,000 ಕೋಟಿ ರೂಪಾಯಿ ಖರ್ಚಾಗಲಿದೆ. ನಾಯಿಗಳನ್ನು ತೆಗೆದುಹಾಕಿದರೆ, ರಸ್ತೆಗಳಲ್ಲಿ ಇಲಿಗಳ ಕಾಟ ಹೆಚ್ಚಾಗುತ್ತದೆ ಎಂದು ಕೂಡ ಗಾಂಧಿ ಹೇಳಿದರು.
ಗಾಂಧಿ ಅವರು ಮುಂದೆ ಮಾತನಾಡಿ, “ದೆಹಲಿಯಲ್ಲಿ ಸುಮಾರು 3 ಲಕ್ಷ ಬೀದಿ ನಾಯಿಗಳಿವೆ. ಅವುಗಳಿಗಾಗಿ ಕನಿಷ್ಠ 3,000 ಪ್ರಾಣಿ ಮನೆಗಳನ್ನು ನಿರ್ಮಿಸಬೇಕಾಗುತ್ತದೆ. ಇತರ ಎಲ್ಲ ವ್ಯವಸ್ಥೆಗಳನ್ನು ಮಾಡುವುದಕ್ಕೆ ಒಟ್ಟು 15,000 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ದೆಹಲಿಯಲ್ಲಿನ ನಾಯಿಗಳನ್ನು ತೆಗೆದುಹಾಕಿದರೆ, ಗಾಜಿಯಾಬಾದ್ ಮತ್ತು ಫರಿದಾಬಾದ್‌ನಿಂದ ಲಕ್ಷಾಂತರ ನಾಯಿಗಳು ಎರಡು ದಿನಗಳಲ್ಲಿ ರಾಜಧಾನಿಗೆ ಬರುತ್ತವೆ, ಏಕೆಂದರೆ ಇಲ್ಲಿ ಆಹಾರ ಸಿಗುತ್ತದೆ. ಕೋತಿಗಳೂ ಕೂಡ ಕೆಳಗೆ ಇಳಿಯುತ್ತವೆ ಮತ್ತು ಇಲಿಗಳ ಕಾಟವೂ ಹೆಚ್ಚಾಗುತ್ತದೆ. ಮನುಷ್ಯರನ್ನು ನಾಯಿ ಕಚ್ಚುವ ಘಟನೆಗಳಲ್ಲಿ ಶೇಕಡಾ 70%ರಷ್ಟು ಘಟನೆಗ ಳು ಸಾಕು ನಾಯಿಗಳಿಂದಲೇ ನಡೆಯುತ್ತವೆ” ಎಂದು ಅವರು ಹೇಳಿದರು.
ಸಂಪದಕೀಯ ನಿಲುವುಬೀದಿ ನಾಯಿಗಳನ್ನು ದೂರಗೊಳಿಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮೇನಕಾ ಗಾಂಧಿ ಧ್ವನಿ ಎತ್ತುತ್ತಾರೆ, ಆದರೆ ಅವುಗಳಿಂದ ಮನುಷ್ಯರಿಗೆ ತೊಂದರೆಯಾಗದಂತೆ ಏನು ಮಾಡಬಹುದು ಎಂಬುದರ ಬಗ್ಗೆ ಮಾತ್ರ ಅವರು ಒಂದು ಮಾತನ್ನೂ ಹೇಳುವುದಿಲ್ಲ. ಅವರ ಈ ಪ್ರಾಣಿ ಪ್ರೀತಿಯೇ ‘ಅವ್ಯಾವಹಾರಿಕ’ ಮತ್ತು ಇದರಿಂದ ನಾಗರಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!