
ಪುರಿ (ಒಡಿಶಾ) – ಇಲ್ಲಿನ ಜಗನ್ನಾಥ ದೇವಸ್ಥಾನವನ್ನು ಸ್ಫೋಟಿಸುವ ಬೆದರಿಕೆ ಹಾಕಿರುವ ಮಾಹಿತಿ ಹೊರಬಿದ್ದಿದೆ. ಜಗನ್ನಾಥ ದೇವಸ್ಥಾನದ ಹೊರಗಿನ ಪ್ರದಕ್ಷಿಣಾ ಪಥ ಎಂದೂ ಕರೆಯಲ್ಪಡುವ ‘ಹೆರಿಟೇಜ್ ಕಾರಿಡಾರ್’ ಸಮೀಪವಿರುವ ಮತ್ತೊಂದು ದೇವಸ್ಥಾನದ ಗೋಡೆಯ ಮೇಲೆ ಒಡಿಯಾ ಮತ್ತು ಇಂಗ್ಲಿಷ್ ಈ 2 ಭಾಷೆಗಳಲ್ಲಿ ಬರೆದಿರುವ ಸಂದೇಶದಲ್ಲಿ, ‘ಜಗನ್ನಾಥ ದೇವಸ್ಥಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಅದನ್ನು ನಾಶ ಮಾಡುತ್ತಾರೆ. ಸಂಪರ್ಕಿಸಿರಿ, ಇಲ್ಲವಾದರೆ ಎಲ್ಲವೂ ನಾಶವಾಗುತ್ತದೆ’ ಎಂದು ಬರೆಯಲಾಗಿದೆ. ಅಲ್ಲಿ ಕೆಲವು ದೂರವಾಣಿ ಸಂಖ್ಯೆಗಳನ್ನು ಸಹ ಬರೆಯಲಾಗಿದೆ. ಅದರ ಜೊತೆಗೆ ‘ಪ್ರಧಾನಿ ಮೋದಿ’ ಎಂದೂ ಬರೆಯಲಾಗಿದೆ. ಇದರಿಂದ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ.
ಭದ್ರತೆಯಲ್ಲಿ ಗಂಭೀರ ಲೋಪ!
ಒಬ್ಬ ಸ್ಥಳೀಯ ಭಕ್ತನು, ಇತ್ತೀಚೆಗೆ ನಡೆದ ಒಂದು ಗಂಭೀರ ಭದ್ರತಾ ಲೋಪದಲ್ಲಿ, ಕೆಲವು ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಹೊರಗಿನ ಗೋಡೆಯನ್ನು ಹತ್ತಿ ಅನಧಿಕೃತವಾಗಿ ಪ್ರವೇಶಿಸಿದ್ದರು. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಇದರ ಜೊತೆಗೆ ಈಗ ಈ ಬೆದರಿಕೆಯ ಘಟನೆಯಿಂದ ನಮ್ಮ ಚಿಂತೆ ಹೆಚ್ಚಾಗಿದೆ. ವಾಸ್ತವವಾಗಿ, ಈ ದೇವಸ್ಥಾನವು ನಿರಂತರವಾಗಿ ಕಣ್ಗಾವಲಿನಲ್ಲಿ ಇದ್ದರೂ, ಅಂತಹ ಸ್ಥಳದಲ್ಲಿ ಇಂತಹ ಬೆದರಿಕೆ ಸಂದೇಶಗಳನ್ನು ಬರೆಯಲು ಸಾಧ್ಯವಾಗಿದೆ, ಇದು ಆತಂಕಕಾರಿ ಸಂಗತಿಯಾಗಿದೆ, ಎಂದು ಹೇಳಿದ್ದಾರೆ.
ಅಲಂಕಾರಿಕ ದೀಪಗಳು ಇದ್ದಕ್ಕಿದ್ದಂತೆ ಕೆಟ್ಟುಹೋಗಿವೆ!
‘ಹೆರಿಟೇಜ್ ಕಾರಿಡಾರ್’ ಪ್ರದೇಶದಲ್ಲಿನ ಕೆಲವು ಅಲಂಕಾರಿಕ ದೀಪಗಳು ಇದ್ದಕ್ಕಿದ್ದಂತೆ ಕೆಟ್ಟುಹೋಗಿರುವುದು ಕಂಡುಬಂದಿದೆ. ಇದರ ಬಗ್ಗೆ ಈಗ ಪ್ರಶ್ನಿಸಲಾಗುತ್ತಿದೆ.
ಸಂಪಾದಕೀಯ ನಿಲುವುಹಿಂದೂಗಳ ದೇವಸ್ಥಾನಗಳಿಗೆ ಇಂತಹ ಬೆದರಿಕೆಗಳನ್ನು ನೀಡುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್