ದೆಹಲಿ ಮತ್ತು ಗ್ವಾಲಿಯರ್ ಗುರಿಯಾಗಿತ್ತು

ಜೈಪುರ (ರಾಜಸ್ಥಾನ) – ಸ್ವಾತಂತ್ರ್ಯ ದಿನದಂದು ದೆಹಲಿ ಮತ್ತು ಗ್ವಾಲಿಯರ್‌ನಲ್ಲಿ ಬಾಂಬ್ ಸ್ಫೋಟ ನಡೆಸಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಾಡಿದ್ದ ಸಂಚನ್ನು ರಾಜಸ್ಥಾನ ಪೊಲೀಸರು ವಿಫಲಗೊಳಿಸಿದ್ದಾರೆ. ಈ ಸಂಬಂಧ ಮೂವರು ಅಪ್ರಾಪ್ತರು ಸೇರಿದಂತೆ ಗ್ಯಾಂಗ್‌ನ ಆರು ಸದಸ್ಯರನ್ನು ಬಂಧಿಸಲಾಗಿದೆ. ಪ್ರೌಢ ಆರೋಪಿಗಳಾದ ಸೋನು ಅಲಿಯಾಸ್ ಕಾಲಿ (ಕಪುರ್ಥಲಾ, ಪಂಜಾಬ್), ಜಿತೇಂದ್ರ ಚೌಧರಿ (ಟೋಂಕ್, ರಾಜಸ್ಥಾನ) ಮತ್ತು ಸಂಜಯ (ಹನುಮಾನಗಢ, ರಾಜಸ್ಥಾನ) ಸೇರಿದ್ದಾರೆ. ಮುಂಬಯಿನ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಮುಖ್ಯ ಸೂತ್ರಧಾರ, ಕೆನಡಾದಲ್ಲಿ ವಾಸವಾಗಿರುವ ಜಿಶಾನ್ ಅಖ್ತರ್ ನ ಸೂಚನೆ ಮೇರೆಗೆ ಈ ಸಂಚು ರೂಪಿಸಲಾಗಿತ್ತು.
ರಾಜಸ್ಥಾನ ಪೊಲೀಸರ ‘ಆ್ಯಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್’ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. ಬಂಧಿತ ಅಪರಾಧಿಗಳು ಜುಲೈ 7 ರಂದು ಪಂಜಾಬ್‌ನ ಶಹೀದ ಭಗತ ಸಿಂಗ್ ನಗರದಲ್ಲಿ ಗ್ರೆನೇಡ್ ದಾಳಿ ನಡೆಸಿ ಪರಾರಿಯಾಗಿದ್ದರು. ಪಂಜಾಬ್‌ನಲ್ಲಿ ಈ ಘಟನೆ ನಡೆಸಿದ ನಂತರ, ಅವರೆಲ್ಲರೂ ರಾಜಸ್ಥಾನದ ಜೈಪುರ ಮತ್ತು ಟೋಂಕ್ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದರು. ಪೊಲೀಸರು ಅವರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಗ್ಯಾಂಗ್ ಅನ್ನು ಕೆನಡಾದಿಂದ ಜಿಶಾನ ಅಖ್ತರ್ ನಿರ್ವಹಿಸುತ್ತಿದ್ದನು. ಇದೇ ಜಿಶಾನ್ ಮುಂಬಯಿನ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಹೊಣೆಯನ್ನು ಹೊತ್ತಿದ್ದನು. ಜಿಶಾನ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಪರಾಧಿಗಳ ಸಂಪರ್ಕದಲ್ಲಿದ್ದು, ಅವರಿಗೆ ಸೂಚನೆಗಳನ್ನು ನೀಡುತ್ತಿದ್ದನು. ಪಂಜಾಬ್‌ನಲ್ಲಿ ನಡೆದ ಗ್ರೆನೇಡ್ ದಾಳಿಗೂ ಅವನೇ ಆರೋಪಿಗಳಿಗೆ ಗ್ರೆನೇಡ್‌ಗಳನ್ನು ಪೂರೈಸಿದ್ದನು.
ಸಂಪಾದಕೀಯ ನಿಲುವುಭಾರತೀಯರು ಇನ್ನೆಷ್ಟು ವರ್ಷ ಭಯೋತ್ಪಾದನೆಯ ಕರಿ ನೆರಳಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಾಗಬಹುದು? ಸರಕಾರ ಈಗ ಪಾಕಿಸ್ತಾನವನ್ನು ನಿರ್ನಾಮ ಮಾಡಿ ಭಾರತದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!