ಅಮೇರಿಕಾದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್ ರೂಬಿನ್ ಅವರ ಹೇಳಿಕೆ

ವಾಷಿಂಗ್ಟನ (ಅಮೇರಿಕಾ) – ಪಾಕಿಸ್ತಾನದ ಅಸೀಮ್ ಮುನೀರ್ ಅವರು ಸೇನಾ ಸಮವಸ್ತ್ರ ಧರಿಸಿದ ಒಸಾಮಾ ಬಿನ್ ಲಾಡೆನ್. ಪಾಕಿಸ್ತಾನಕ್ಕೆ ಎಷ್ಟು ರಿಯಾಯಿತಿ ಕೊಟ್ಟರೂ ಅದರ ಆಲೋಚನೆಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೇರಿಕಾದ ರಕ್ಷಣಾ ಪ್ರಧಾನ ಕಚೇರಿಯಾದ ‘ಪೆಂಟಗಾನ್’ನ ಮಾಜಿ ಅಧಿಕಾರಿ ಮೈಕಲ್ ರೂಬಿನ್ ಅವರು ಮುನೀರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೇರಿಕಾದಲ್ಲಿರುವಾಗ ಮುನೀರ್ ಭಾರತದ ಮೇಲೆ ಪರಮಾಣು ದಾಳಿ ನಡೆಸುವ ಬೆದರಿಕೆ ಹಾಕಿದ ನಂತರ ರೂಬಿನ್ ಈ ಹೇಳಿಕೆ ನೀಡಿದರು.
ರೂಬಿನ್ ತಮ್ಮ ಮಾತು ಮುಂದುವರಿಸಿ, “ಮುನೀರ್ ಅವರು ಪರಮಾಣು ದಾಳಿಯ ಬೆದರಿಕೆ ಹಾಕಿದ ತಕ್ಷಣ ಅಮೇರಿಕಾದ ಅಧಿಕಾರಿಗಳು ಅವರನ್ನು ಹೊರಹಾಕಬೇಕಿತ್ತು. ಅಮೇರಿಕಾ ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಪ್ರಾಯೋಜಕ ದೇಶ’ ಎಂದು ಘೋಷಿಸಬೇಕು. ಮುನೀರ್ ಅವರನ್ನು ‘ಪರ್ಸನ್ ನಾನ್ ಗ್ರಾಟಾ’ (ಅನಪೇಕ್ಷಿತ ವ್ಯಕ್ತಿ) ಎಂದು ಘೋಷಿಸಿ ಅಮೇರಿಕಾದ ವೀಸಾ ನೀಡಬಾರದು. ಡೊನಾಲ್ಡ್ ಟ್ರಂಪ್ ಓರ್ವ ವ್ಯಾಪಾರಿಯಾಗಿದ್ದು, ಅವರಿಗೆ ಖರೀದಿ-ಮಾರಾಟದ ಅಭ್ಯಾಸವಿದೆ. ಈ ‘ಶಾಂತಿ ಒಪ್ಪಂದ’ವು ಯುದ್ಧಕ್ಕೆ ಆಹ್ವಾನ ನೀಡಬಹುದು ಎಂಬುದು ಟ್ರಂಪ್ ಅವರಿಗೆ ಅರ್ಥವಾಗುತ್ತಿಲ್ಲ. ಅವರಿಗೆ ‘ನೋಬೆಲ್ ಶಾಂತಿ ಪ್ರಶಸ್ತಿ’ ಗೆಲ್ಲುವ ಆಸೆಯಿದೆ” ಎಂದು ರೂಬಿನ್ ಕಿಡಿಕಾರಿದರು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ