ಆಜಾದ್ ಮೈದಾನದ ಗಲಭೆಗಳಿಗೆ 13 ವರ್ಷಗಳಾದರೂ ಯಾವುದೇ ಕ್ರಮವಿಲ್ಲ.

ಮುಂಬಯಿ – ನಗರದ ಆಜಾದ್ ಮೈದಾನದಲ್ಲಿ ಆಗಸ್ಟ್ 11, 2012 ರಂದು ನಡೆದ ಗಲಭೆ ಮಹಾರಾಷ್ಟ್ರದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ. ‘ಅಮರ್ ಜವಾನ್ ಜ್ಯೋತಿ’ಯ ವಿರೂಪ, ಪೊಲೀಸ್ ಮತ್ತು ಮಾಧ್ಯಮಗಳ ವಾಹನಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಯ ನಾಶ, ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರ ಮೇಲೆ ಹಲ್ಲೆ ಸೇರಿದಂತೆ ಹಲವು ಗಂಭೀರ ಘಟನೆಗಳು ಆ ದಿನ ನಡೆದಿತ್ತು. ಕೋಟ್ಯಂತರ ರೂಪಾಯಿಗಳ ಹಾನಿಯಾಗಿರುವಾಗ, ಸರ್ಕಾರವು ಕೇವಲ 36 ಲಕ್ಷ 44 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ತೋರಿಸಿತ್ತು; ಆದರೆ ಆರೋಪಿಗಳ ಬಳಿ ಆಸ್ತಿ ಇಲ್ಲ ಎಂದು ಹೇಳಿ ಅದರ ವಸೂಲಿಯನ್ನು ಕೂಡ ನಿಲ್ಲಿಸಿರುವುದು ಆಘಾತಕಾರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ರಜಾ ಅಕಾಡೆಮಿಯಿಂದ ಪರಿಹಾರವನ್ನು ವಸೂಲಿ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ. ಈ ಸಂಬಂಧ ಆಗಸ್ಟ್ 12 ರಂದು ಸಮಿತಿಯ ವತಿಯಿಂದ ಮುಂಬಯಿ ಜಂಟಿ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣ ಚೌಧರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಗಲಭೆಗೆ ಸಂಬಂಧಿಸಿದ ಪೊಲೀಸ್ ವರದಿಯ ಪ್ರತಿ.
ಗಲಭೆಗೆ 13 ವರ್ಷಗಳಾದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳ ಬಳಿ ಆಸ್ತಿ ಇಲ್ಲದಿದ್ದರೆ, ಅವರ ವಿರುದ್ಧ ಸಿವಿಲ್ ಮೊಕದ್ದಮೆಗಳನ್ನು ದಾಖಲಿಸಿ ಕಾನೂನಿನ ಪ್ರಕಾರ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ದಾದರ್ ನಲ್ಲಿನ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ ನಂತರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಸತೀಶ್ ಸೋನಾರ್, ಭೂಮಿಪುತ್ರ ಸಾಮಾಜಿಕ ಸಂಸ್ಥೆಯ ಶ್ರೀ ಸುಭಾಷ ಅಹಿರ್, ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ ಪ್ರಸಾದ ಸಂಕಪಾಳ, ಮಹಾರಾಷ್ಟ್ರ ಮಂದಿರ ಮಹಾಸಂಘದ ಸಂಘಟಕ ಶ್ರೀ ವಿಲಾಸ್ ನಿಕಮ್ ಮತ್ತು ಸನಾತನ ಸಂಸ್ಥೆಯ ಶ್ರೀಮತಿ ಧನಶ್ರೀ ಕೇಳಶೀಕರ್ ಅವರು ಜಂಟಿ ಪೊಲೀಸ್ ಆಯುಕ್ತರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿದಂತೆ ಪೊಲೀಸ್ ಮಹಾನಿರ್ದೇಶಕರಿಗೂ ಈ ಕುರಿತು ಮನವಿ ನೀಡಲಾಗಿದೆ.
ಹಿಂದೂ ಜನಜಾಗೃತಿ ಸಮಿತಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸುವ ಬಗ್ಗೆ ಸ್ವೀಕೃತಿ ಪತ್ರ.
ರಾಜಕೀಯ ಲಾಭ-ನಷ್ಟದ ಹೊರತಾಗಿ ಕ್ರಮ ಕೈಗೊಳ್ಳಬೇಕು!
2012 ರಲ್ಲಿ ಮ್ಯಾನ್ಮಾರ್ ನಲ್ಲಿನ ಘಟನೆಯಿಂದಾಗಿ ಮುಂಬಯಿಯಲ್ಲಿ ದೊಡ್ಡ ಗಲಭೆ ನಡೆಯಿತು. ಇದರಲ್ಲಿ ಗಾಯಗೊಂಡ ಆಜಾದ್ ಮೈದಾನ ಪೊಲೀಸ್ ಠಾಣೆಯ ಪೊಲೀಸ್ ಸಿಪಾಯಿ ಸಂತೋಷ ಹಂಡೆ ಅವರು 2013 ರಲ್ಲಿ ನಿಧನರಾದರು. ಈ ಸಾವಿಗೆ ಕಾರಣವಾದ ‘ರಜಾ ಅಕಾಡೆಮಿ’ ಮತ್ತು ಅದರ ಸಹಯೋಗಿ ಸಂಘಟನೆಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾಗಿತ್ತು. ಈ ಪ್ರಕರಣದಲ್ಲಿ 60 ಆರೋಪಿಗಳು ಮುಂಬಯಿ, ನವಿ ಮುಂಬೈ ಮತ್ತು ಠಾಣೆಯಲ್ಲಿ ವಾಸಿಸುತ್ತಿರುವವರಾಗಿದ್ದಾರೆ. ಅನೇಕ ಆರೋಪಿಗಳು ಪ್ರಸ್ತುತ ತಮ್ಮ ವಿಳಾಸದಲ್ಲಿ ಲಭ್ಯವಿಲ್ಲ ಅಥವಾ ಅವರ ಆಸ್ತಿಗಳು ಬೇರೆಯವರ ಹೆಸರಿನಲ್ಲಿವೆ ಎಂದು ಹೇಳಿ ಪರಿಹಾರ ನೀಡದಿರುವುದು ಅತ್ಯಂತ ಗಂಭೀರವಾಗಿದೆ. ಈ ಗಲಭೆಯಲ್ಲಿ ಅನೇಕ ಮಹಿಳಾ ಪೊಲೀಸರ ಮೇಲೆ ನಡೆದ ದೌರ್ಜನ್ಯದ ಪ್ರಕರಣಗಳ ಬಗ್ಗೆ ತಕ್ಷಣ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಪ್ರಯತ್ನಿಸಬೇಕು. ಆಗಿನ ಕಾಂಗ್ರೆಸ್ ಅಧಿಕಾರಿಗಳು ಮುಸ್ಲಿಮರ ಮತಗಳಿಗಾಗಿ ಗುಲಾಮಗಿರಿಯನ್ನು ಒಪ್ಪಿಕೊಂಡು ರಂಜಾನ ಈದ್ ಸಮಯದಲ್ಲಿ ಅಪರಾಧಿಗಳ ಮೇಲಿನ ಕ್ರಮಗಳನ್ನು ತಪ್ಪಿಸಿದರು. ಈಗಲಾದರೂ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು, ರಾಜಕೀಯ ಲಾಭ-ನಷ್ಟದ ಹೊರತಾಗಿ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಸಂಪಾದಕೀಯ ನಿಲುವುಕಾನೂನಿನ ರಕ್ಷಕರಾದ ಪೊಲೀಸರೇ ಸಂತ್ರಸ್ತರಾಗಿದ್ದರೂ ಕೂಡ 13 ವರ್ಷಗಳ ನಂತರ ಅವರಿಗೇ ನ್ಯಾಯ ಸಿಗುತ್ತಿಲ್ಲ, ಹೀಗಿರುವಾಗ ಸಾಮಾನ್ಯ ಜನರ ಕಥೆಯೇನು ಎಂದು ಯಾರಾದರೂ ವ್ಯವಸ್ಥೆಯನ್ನು ಪ್ರಶ್ನಿಸಿದರೆ ಅದರಲ್ಲಿ ತಪ್ಪೇನಿದೆ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!