‘ಮುಂದಿನ ಸಾರಿ ಭಾರತದ ಒಳಗೆ ಯುದ್ಧವಾಗುವುದು !(ಅಂತೆ) – Pakistan Threaten India

  • ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಇವರ ಬೆದರಿಕೆ

  • ಅಸಿಮ್ ಮುನಿರ್ ಇವರ ಪರಮಾಣು ಯುದ್ಧದ ಬೆದರಿಕೆ ನೀಡಿರುವುದನ್ನು ಕೂಡ ನಿರಾಕರಿಸಿದ್ದಾರೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಮುಂದಿನ ಬಾರಿ ಯುದ್ಧವಾದರೆ, ಅದು ಗಡಿಯಲ್ಲಿ ಅಲ್ಲ, ಅದು ಭಾರತದ ಒಳಗೆ ನಡೆಯುವುದು, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಇವರು ಈ ರೀತಿಯ ಬೆದರಿಕೆ ನೀಡಿದ್ದಾರೆ. ಈ ಸಮಯದಲ್ಲಿ ಖ್ವಾಜಾ ಇವರು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಇವರು ಅಮೇರಿಕಾದಲ್ಲಿ ಪರಮಾಣು ಯುದ್ಧದ ನೀಡಿರುವ ಬೆದರಿಕೆ ಕೂಡ ಸುಳ್ಳು ಎಂದು ಹೇಳಿದ್ದಾರೆ.

ಖ್ವಾಜಾ ಆಸಿಫ್ ಇವರು ಮಾತು ಮುಂದುವರೆಸುತ್ತಾ, ಈಗ ಭಾರತ ನಮ್ಮ ಫೀಲ್ಡ್ ಮಾರ್ಷಲ್ ಭಾಷಣದಲ್ಲಿ, ಅವರು ಪರಮಾಣು ಉಪಯೋಗಿಸುವ ಹೇಳಿಕೆ ನೀಡಿದ್ದಾರೆ, ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇಂತಹ ಹೇಳಿಕೆ ಅವರು ನೀಡಿಲ್ಲ. ತದ್ವಿರುದ್ಧ ಭಾರತದ ಸೈನ್ಯದಳ ಪ್ರಮುಖರೇ, ಮತ್ತೊಮ್ಮೆ ಯುದ್ಧ ಆಗುವದು, ಎಂದು ಹೇಳಿದ್ದಾರೆ. (ಇದರ ಅರ್ಥ ಪಾಕಿಸ್ತಾನ ಕ್ಯಾತೆ ಮಾಡುವುದು ಮತ್ತು ನಂತರ ಭಾರತ ಉತ್ತರ ನೀಡುವುದು! ಕಾರಣ ಭಾರತ ಎಂದಿಗೂ ಸ್ವತಃ ಪಾಕಿಸ್ತಾನದ ಮೇಲೆ ದಾಳಿ ನಡೆಸುವುದಿಲ್ಲ, ಇದು ಇತಿಹಾಸ ಇರುವುದು! ವಾಸ್ತವದಲ್ಲಿ ಈ ಮನಸ್ಥಿತಿಯನ್ನು ಭಾರತ ಬದಲಾಯಿಸುವ ಅಗತ್ಯವಿದೆ ! – ಸಂಪಾದಕರು)

ಪ್ರತಿಯೊಬ್ಬ ಪಾಕಿಸ್ತಾನಿ ಯುದ್ಧಕ್ಕಾಗಿ ಸಿದ್ದನಿದ್ದಾನೆ ! – ಬಿಲಾವಲ್ ಬುಟ್ಟೋ ಝರದಾರಿ

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಭಾರತದ ವಿರುದ್ಧ ವಿಷ ಕಾರಿದ್ದಾರೆ. ಸಿಂಧ್ ಸರಕಾರದ ಒಂದು ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಬಿಲಾವಲ್ ಭುಟ್ಟೋ ಅವರು ಮಾತನಾಡಿ, ಭಾರತವು ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಬದಲಾಯಿಸಿದರೆ ಯುದ್ಧ ಭುಗಿಲೇಳಲಿದೆ. ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದೆ. ಪ್ರತಿಯೊಬ್ಬ ಪಾಕಿಸ್ತಾನಿಯೂ ಯುದ್ಧಕ್ಕೆ ಸಿದ್ಧನಾಗಿದ್ದಾನೆ. ಇತ್ತೀಚಿನ ಸೈನಿಕ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯು ಭಾರತಕ್ಕೆ ಐತಿಹಾಸಿಕ ಉತ್ತರವನ್ನು ನೀಡಿದೆ. (ಇದಕ್ಕೆ ಹೇಳೋದು ‘ಜಟ್ಟಿ ಬಿದ್ದರೂ ಜುಟ್ಟು ಮಣ್ಣಾಗಿಲ್ಲ’ ಎಂದು – ಸಂಪಾದಕರು) ನೀವು (ಭಾರತ) ‘ಆಪರೇಷನ್ ಸಿಂಧೂರ್’ ನಂತಹ ದಾಳಿ ಮಾಡುವ ಯೋಚನೆ ಮಾಡುತ್ತಿದ್ದರೆ, ಪಾಕಿಸ್ತಾನದ ಪ್ರತಿಯೊಂದು ಪ್ರಾಂತ್ಯದ ಜನರು ನಿಮ್ಮೊಂದಿಗೆ ಹೋರಾಡಲು ಸಿದ್ಧರಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ಇದು ನೀವು ಖಂಡಿತ ಸೋಲುವ ಯುದ್ಧವಾಗಲಿದೆ. ಪಾಕಿಸ್ತಾನೀಯರು ಎಷ್ಟು ಶಕ್ತಿಶಾಲಿಗಳು ಎಂದರೆ, ಅವರು ಯುದ್ಧ ಮಾಡಿ ಎಲ್ಲಾ ನದಿಗಳನ್ನು ಮರಳಿ ಪಡೆಯಬಹುದು. ಪಾಕಿಸ್ತಾನ ಎಂದಿಗೂ ಬಾಗುವುದಿಲ್ಲ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತವು ‘ಆಪರೇಷನ್ ಸಿಂದೂರ’ ನಡೆಸುವ ಮೊದಲು ಕೂಡ ಖ್ವಾಜಾ ಮತ್ತು ಇತರ ಪಾಕಿಸ್ತಾನಿ ಸಚಿವರು ಬೇರೆ ಬೇರೆ ಜಂಭದ ಮಾತುಗಳನ್ನು ಆಡಿದ್ದರೂ ಮತ್ತು ಪ್ರತ್ಯಕ್ಷದಲ್ಲಿ ಭಾರತದಿಂದ ಕಾರ್ಯಾಚರಣೆ ನಡೆದ ನಂತರ ಅವರ ಬಾಯಿ ಮುಚ್ಚಿದವು. ಈ ಸತ್ಯ ಮರೆಮಾಚುವುದಕ್ಕಾಗಿ ಮತ್ತು ಪಾಕಿಸ್ತಾನಿ ಜನರನ್ನು ಮೂರ್ಖರನ್ನಾಗಿ ಮಾಡುವುದಕ್ಕಾಗಿ ಈ ರೀತಿಯ ಹೇಳಿಕೆ ಅವರು ಈಗ ನೀಡುತ್ತಿದ್ದಾರೆ !