ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರಿಗಳ ಮನೆಯ ನೀರು ಪೂರೈಕೆಯನ್ನು ತಡೆದ ಪಾಕಿಸ್ತಾನ ! – Pakistan Petty Retaliation Operation Sindoor

  • ಗ್ಯಾಸ್ ಸಿಲೆಂಡರ್, ಸಮಾಚಾರ ಪತ್ರಗಳು ಕೂಡ ನಿಲ್ಲಿಸಲಾಯಿತು !

  • ‘ಆಪರೇಷನ್ ಸಿಂದೂರ’ ದ ಸೇಡು ತೀರಿಸಿಕೊಳ್ಳಲಾಗುತ್ತಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರಿಗಳ ಮನೆಗೆ ಪೂರೈಸಲಾಗುತ್ತಿರುವ ನೀರು ಮತ್ತು ಗ್ಯಾಸ್ ಅನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಸಮಾಚಾರ ಪತ್ರ ಕೂಡ ನಿಲ್ಲಿಸಲಾಗಿದೆ. ಪಾಕಿಸ್ತಾನದ ಸ್ಥಳಿಯ ಗ್ಯಾಸ್ ಸಿಲಿಂಡರ್ ಏಜೆಂಟರಿಗೆ ಭಾರತೀಯ ರಾಯಭಾರಿಗಳಿಗೆ ಸಿಲಿಂಡರ್ ಮಾರದಿರಲು ಆದೇಶ ನೀಡಲಾಗಿದೆ. ‘ಆಪರೇಷನ್ ಸಿಂದೂರ’ ದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಇಂದ ರೂಪಿಸಿರುವ ಷಡ್ಯಂತ್ರದ ಇದು ಒಂದು ಭಾಗವಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ ೨೦೧೯ ರಲ್ಲಿ ಭಾರತವು ನಡೆಸಿರುವ ‘ಸರ್ಜಿಕಲ್ ಸ್ಟ್ರೈಕ್’ ನಂತರ ಪಾಕಿಸ್ತಾನದಿಂದ ರಾಯಭಾರಿಗಳಿಗೆ ಇದೇ ರೀತಿ ಕಿರುಕುಳ ನೀಡಲಾಗಿತ್ತು. ಪಾಕಿಸ್ತಾನದ ಈಗಿನ ಕೃತಿಯ ನಂತರ ಭಾರತವು ದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರಿಗಳಿಗೆ ಸಮಾಚಾರ ಪತ್ರಗಳನ್ನು ತಲುಪಿಸುವುದನ್ನು ನಿಲ್ಲಿಸಿದೆ.

ಅಂತರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ !

ಪಾಕಿಸ್ತಾನ ನಡೆಸುತ್ತಿರುವ ಕೃತ್ಯಗಳು ರಾಜತಾಂತ್ರಿಕ ಸಂಬಂಧದ ‘ವಿಯೆನ್ನಾ ಒಪ್ಪಂದ’ ದ (೧೯೬೧ ರ) ಉಲ್ಲಂಘನೆ ಆಗಿದೆ. ಒಪ್ಪಂದದ ಕಲಂ ೨೫ ರ ಪ್ರಕಾರ ಆಥಿತೆಯ ದೇಶ ರಾಜತಾಂತ್ರಿಕ ಅಭಿಯಾನದ ಕಾರ್ಯಕ್ರಮಗಳು ಸುರಳಿತವಾಗಿ ನಡೆಸುವುದಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಪೂರೈಸಬೇಕು. ತಿಳಿದು ತಿಳಿದು ಅಗತ್ಯ ವಸ್ತುಗಳನ್ನು ತಡೆದು ಪಾಕಿಸ್ತಾನವು ರಾಯಭಾರಿಗಳ ದೈನಂದಿನ ಜೀವನ ಹಾಳು ಮಾಡಿದೆ.

ಸಂಪಾದಕೀಯ ನಿಲುವು

  • ಈ ರೀತಿ ಬಾಲಿಷ ಕೃತಿ ಮಾಡಿ ಪಾಕಿಸ್ತಾನ ಜಗತ್ತಿನ ಎದುರು ತನ್ನ ಮರ್ಯಾದೆ ತಾನೆ ಕಳೆದುಕೊಳ್ಳುತ್ತಿದೆ. ಹಾಗೂ ನಿರ್ಲಜ್ಜ ಪಾಕಿಸ್ತಾನಕ್ಕೆ ಯಾರೇ ಏನೇ ಎಂದರು ಅದಕ್ಕೆ ಏನು ವ್ಯತ್ಯಾಸವಾಗುವುದಿಲ್ಲ !
  • ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನದಿಂದ ಭಾರತ ಕೂಡ ತನ್ನ ರಾಯಭಾರಿಗಳನ್ನು ಹಿಂಪಡೆಯಬೇಕು ಮತ್ತು ಪಾಕಿಸ್ತಾನದ ಜೊತೆಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕೂಡ ತೊರೆಯಬೇಕು!