ಟ್ರಂಪ್ ಅವರ ಕ್ರಮಗಳು ಸಂವಿಧಾನ ವಿರೋಧಿ!

ಆಮದು ಸುಂಕ ಹೆಚ್ಚಳದ ಬಗ್ಗೆ ಟ್ರಂಪ್ ಅವರನ್ನು ಟೀಕಿಸಿದ ಅಮೇರಿಕಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಕ್ಸ್

ವಾಷಿಂಗ್ಟನ್ (ಅಮೇರಿಕಾ) – “ಭಾರತವು ಒಂದು ದೊಡ್ಡ ಶಕ್ತಿ. ಜಗತ್ತಿನಲ್ಲಿ ಅದಕ್ಕೆ ಸ್ವತಂತ್ರ ಸ್ಥಾನವಿದೆ. ಚೀನಾದ ವಿರುದ್ಧ ಅಮೇರಿಕಾದ ಪರವಾಗಿ ನಿಂತರೆ ಭಾರತಕ್ಕೆ ದೀರ್ಘಾವಧಿಯ ಭದ್ರತೆ ಸಿಗುವುದಿಲ್ಲ. ಆಮದು ಸುಂಕದ ಬಗ್ಗೆ ಟ್ರಂಪ್ ಮಾಡುತ್ತಿರುವುದು ಸಂವಿಧಾನ ವಿರೋಧಿ” ಎಂದು ಅಮೇರಿಕಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಕ್ಸ್ ಅವರು ಟ್ರಂಪ್‌ರನ್ನು ಟೀಕಿಸಿದರು.

ಟ್ರಂಪ್ ಸ್ವಯಂ ವಿನಾಶ ಮಾಡಿಕೊಳ್ಳುತ್ತಿದ್ದಾರೆ!- ಪ್ರೊಫೆಸರ್ ಸ್ಟೀವ್ ಹ್ಯಾಂಕ್

ಅಮೇರಿಕಾದ ಇನ್ನೊಬ್ಬ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಟೀವ್ ಹ್ಯಾಂಕ್ ಅವರು ಟ್ರಂಪ್ ಅವರ ನಡೆಯನ್ನು ಟೀಕಿಸಿದರು. ಅವರು ಮಾತನಾಡಿ, “ಟ್ರಂಪ್ ಅವರ ಆಮದು ಸುಂಕ ಹೆಚ್ಚಳದ ನಿರ್ಧಾರ ಸಂಪೂರ್ಣವಾಗಿ ತಪ್ಪಾಗಿದ್ದು ಅದು ದೀರ್ಘಕಾಲ ಉಳಿಯುವುದಿಲ್ಲ. ಅವರ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿದೆ. ವ್ಯಾಪಾರ ಯುದ್ಧವನ್ನು ಪ್ರಾರಂಭಿಸುವ ಮೂಲಕ ಟ್ರಂಪ್ ಸ್ವಯಂ ವಿನಾಶ ಮಾಡಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದರು.