ಪಾಕಿಸ್ತಾನದ ಅರ್ಧದಷ್ಟು ಸರಕಾರಿ ಅಧಿಕಾರಿಗಳು ಭ್ರಷ್ಟರು!

  • ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಆರೋಪ

  • ಭ್ರಷ್ಟ ಅಧಿಕಾರಿಗಳು ಪೋರ್ಚುಗಲ್‌ನಲ್ಲಿ ಆಸ್ತಿ ಖರೀದಿಸಿ ಪಾಕಿಸ್ತಾನ ತೊರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಅರ್ಧಕ್ಕಿಂತ ಹೆಚ್ಚು ಅಧಿಕಾರಿಗಳು ಪೋರ್ಚುಗಲ್‌ನಲ್ಲಿ ಆಸ್ತಿ ಖರೀದಿಸಿದ್ದಾರೆ ಮತ್ತು ಅಲ್ಲಿನ ಪೌರತ್ವ ಪಡೆಯಲು ಸಿದ್ಧತೆ ನಡೆಸಿದ್ದಾರೆ. ದೊಡ್ಡ ಅಧಿಕಾರಿಗಳು, ಅಬ್ಜಗಟ್ಟಲೇ ರೂಪಾಯಿ ಭ್ರಷ್ಟಾಚಾರ ನಡೆಸಿ ಆರಾಮದಾಯಕ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅಧಿಕಾರಶಾಹಿಗಳು ಪಾಕಿಸ್ತಾನದ ಭೂಮಿಯನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆರೋಪಿಸಿದ್ದಾರೆ.
ಆಸಿಫ್ ಅವರು, “ಪಾಕಿಸ್ತಾನದ ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರ ಹತ್ತಿರದ ಒಬ್ಬ ಹಿರಿಯ ಅಧಿಕಾರಿಗೆ ಅವರ ಮಗಳ ಮದುವೆಯಲ್ಲಿ 4 ಅಬ್ಜ ರೂಪಾಯಿಗಳಷ್ಟು ಉಡುಗೊರೆಗಳು ಸಿಕ್ಕಿದ್ದವು” ಎಂದು ಹೇಳಿದರು.

ಪಾಕಿಸ್ತಾನಿ ಅಧಿಕಾರಿಗಳು ಪೋರ್ಚುಗಲ್‌ನಲ್ಲಿ ಏಕೆ ಹಣ ಹೂಡುತ್ತಿದ್ದಾರೆ?

‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ (FATF – ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ಮೇಲೆ ಈ ಜಾಗತಿಕ ಸಂಸ್ಥೆ ಕ್ರಮ ತೆಗೆದುಕೊಳ್ಳುತ್ತದೆ.) ಪೋರ್ಚುಗಲ್ ಅನ್ನು ಕಡಿಮೆ ಅಪಾಯದ ದೇಶವೆಂದು ಪರಿಗಣಿಸುತ್ತದೆ. UK (ಯುನೈಟೆಡ್ ಕಿಂಗ್‌ಡಮ್ – ಇಂಗ್ಲೆಂಡ್, ಸ್ಕಾಟ್‌ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಒಳಗೊಂಡ ದೇಶ), ಯುನೈಟೆಡ್ ಅರಬ್ ಎಮಿರೇಟ್ಸ್ ನಂತಹ ದೇಶಗಳಲ್ಲಿ ಕಟ್ಟುನಿಟ್ಟಾದ ಮೇಲ್ವಿಚಾರಣೆ ನಡೆಯುತ್ತದೆ, ಆದ್ದರಿಂದ ಪಾಕಿಸ್ತಾನಿ ಅಧಿಕಾರಿಗಳು ಕಪ್ಪು ಹಣವನ್ನು ಬಿಳಿ ಮಾಡುವ ಪ್ರಕ್ರಿಯೆಗೆ ಪೋರ್ಚುಗಲ್ ಸುರಕ್ಷಿತ ತಾಣವೆಂದು ಪರಿಗಣಿಸುತ್ತಾರೆ. ಪೋರ್ಚುಗಲ್‌ನ ‘ಗೋಲ್ಡನ್ ವೀಸಾ ಪ್ರೋಗ್ರಾಮ್’ನಲ್ಲಿ ಹೂಡಿಕೆ ಮಾಡುವವರಿಗೆ ಸುಲಭವಾಗಿ ಪೌರತ್ವ ದೊರೆಯುತ್ತದೆ. ಇದರಿಂದಾಗಿ ಅಧಿಕಾರಿಗಳಿಗೆ ದೇಶ ಬಿಡುವುದು ಸುಲಭವಾಗುತ್ತದೆ. ಅಲ್ಲಿ ಅವರು ಆಸ್ತಿ ಖರೀದಿಸುತ್ತಾರೆ.

ಸಂಪಾದಕೀಯ ನಿಲುವು

  • ರಕ್ಷಣಾ ಸಚಿವರಿಗೆ ಇದು ತಿಳಿದಿದ್ದರೆ, ಅವರು ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?
  • ಪಾಕಿಸ್ತಾನದ ಸರಕಾರಿ ಅಧಿಕಾರಿಗಳು ಮಾತ್ರವಲ್ಲ, ಸೇನಾ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡ ಭಿನ್ನವಾಗಿಲ್ಲ ಎಂದು ಹೇಳುವ ಧೈರ್ಯವನ್ನು ಅವರು ತೋರಬೇಕು!