ಅಮೇರಿಕಾದ ತೆರಿಗೆ ಏರಿಕೆ ವಿರುದ್ಧ ಭಾರತಕ್ಕೆ ಇರಾನ್ ಬೆಂಬಲ!

ಟೆಹರಾನ್ (ಇರಾನ್) – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಶೇಕಡಾ 50% ರಷ್ಟು ಆಮದು ಸುಂಕದ ನಿರ್ಧಾರಕ್ಕೆ ಇರಾನ್ ಭಾರತವನ್ನು ಬೆಂಬಲಿಸಿದೆ. ಇರಾನ್ ರಾಯಭಾರಿ ಡಾ. ಇರಾಜ್ ಇಲಾಹಿ ಅವರು ಪ್ರತಿಕ್ರಿಯಿಸಿ, ಅಮೇರಿಕಾ ಆರ್ಥಿಕ ವ್ಯವಸ್ಥೆಯನ್ನು ಆಯುಧವಾಗಿ ಬಳಸುತ್ತದೆ. ಅಮೇರಿಕಾ ಯಾವಾಗಲೂ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ದೇಶಗಳ ಮೇಲೆ ಒತ್ತಡ ಹೇರುತ್ತದೆ ಎಂದವರು ಟೀಕಿಸಿದರು.
ಡಾ. ಇಲಾಹಿ ಅವರು ಮುಂದೆ ಮಾತನಾಡಿ:
1. ಟ್ರಂಪ್ ಅವರ ಈ ನಿರ್ಧಾರ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ, ಯಾವ ದೇಶವೂ ಈ ಆರ್ಥಿಕ ಆಕ್ರಮಣದಿಂದ ಸುರಕ್ಷಿತವಾಗಿಲ್ಲ.
2. ಕಳೆದ ಶತಮಾನದಿಂದ ಅಮೇರಿಕಾ ಸ್ವಾತಂತ್ರ್ಯ ಪ್ರಿಯ ರಾಷ್ಟ್ರಗಳ ಮೇಲೆ ಆರ್ಥಿಕ ಒತ್ತಡ ಹೇರುತ್ತಿದೆ. ಅದರಲ್ಲಿಯೂ, ಅಭಿವೃದ್ಧಿ, ಸ್ವಾವಲಂಬನೆ ಮತ್ತು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ದೇಶಗಳ ಮೇಲೆ ಹೆಚ್ಚು ದಾಳಿ ನಡೆಸಲಾಗುತ್ತದೆ.
3. ನಾವು 40 ವರ್ಷಗಳಿಗಿಂತ ಅಧಿಕ ಕಾಲದಿಂದ ಅಮೇರಿಕಾದ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿದ್ದೇವೆ.
4. ಟ್ರಂಪ್ ತಮ್ಮ ಇಚ್ಛೆಯಂತೆ ಇತರ ದೇಶಗಳನ್ನು ನಡೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಅವರು ಇತರ ದೇಶಗಳ ಹಕ್ಕು ಮತ್ತು ಹಿತಾಸಕ್ತಿಗಳನ್ನು ಗೌರವಿಸುತ್ತಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation