ರಾಷ್ಟ್ರೀಯ ಏಕತೆಗೆ ಅಪಾಯ ತರುವ 25 ಪುಸ್ತಕಗಳ ಮೇಲೆ ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧ

ಅರುಂಧತಿ ರಾಯ್ ಅವರ ‘ಆಜಾದಿ’ ಪುಸ್ತಕವೂ ಸೇರಿದೆ

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆಯು ವಿಭಜನಾವಾದಿ ಭಾವನೆಗಳನ್ನು ಹೆಚ್ಚಿಸುವ ಮತ್ತು ದೇಶದ ಏಕತೆಗೆ ಅಪಾಯ ತರುವ 25 ಪುಸ್ತಕಗಳ ಮೇಲೆ ನಿಷೇಧ ಹೇರಿದೆ. ಸರಕಾರವು ಈ ಎಲ್ಲಾ ಪುಸ್ತಕಗಳ ಪ್ರಕಾಶನ, ವಿತರಣೆ ಮತ್ತು ಮಾರಾಟದ ಮೇಲೆ ನಿರ್ಬಂಧ ಹೇರಿದ್ದು, ಮಾರುಕಟ್ಟೆಯಿಂದ ಈ ಪುಸ್ತಕಗಳನ್ನು ವಶಪಡಿಸಿಕೊಳ್ಳಲು ಆದೇಶ ನೀಡಿದೆ.

1. ರಾಜ್ಯ ಆಡಳಿತವು ಸ್ಪಷ್ಟವಾಗಿ ಹೇಳಿದಂತೆ, ಈ ಪುಸ್ತಕಗಳಲ್ಲಿ ಐತಿಹಾಸಿಕ ಸಂಗತಿಗಳನ್ನು ವಿರೂಪಗೊಳಿಸಲಾಗಿದೆ ಮತ್ತು ಭಯೋತ್ಪಾದಕರನ್ನು ನಾಯಕರಂತೆ ಚಿತ್ರಿಸಲಾಗಿದೆ. ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳ ಘನತೆಗೆ ಕುಂದು ತರುವ ಪ್ರಯತ್ನ ಮಾಡಲಾಗಿದ್ದು, ಧಾರ್ಮಿಕ ಮೂಲಭೂತವಾದವನ್ನು ಪ್ರಚೋದಿಸುವ ಪ್ರಯತ್ನವೂ ನಡೆದಿದೆ.

ನಿಷೇಧ ಹೇರಿದ ಕೆಲವು ಪುಸ್ತಕಗಳ ಹೆಸರುಗಳು
ಪುಸ್ತಕದ ಹೆಸರು ಲೇಖಕರು
೧. ಆಜಾದಿ ಅರುಂಧತಿ ರಾಯ್
೨. ದ ಕಾಶ್ಮೀರ್ ಡಿಸ್ಪ್ಯೂಟ್, ೧೯೪೭-೨೦೧೨ ಎ. ಜಿ. ನೂರಾನಿ
೩. ಕಾಶ್ಮೀರ್ ಅಟ್ ದ ಕ್ರಾಸ್‌ರೋಡ್ಸ್ ಅಂಡ್ ಕಂಟೆಸ್ಟೆಡ್ ಲ್ಯಾಂಡ್ಸ್ ಸುಮಂತ್ರ ಬೋಸ್
೪. ಎ ಡಿಸ್ಮ್ಯಾಂಟಲ್ಡ್ ಸ್ಟೇಟ್: ದ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ್ ಆಫ್ಟರ್ ಆರ್ಟಿಕಲ್ ೩೭೦ ಅನುರಾಧಾ ಭಾಸಿನ್
೫. ಇನ್ ಸರ್ಚ್ ಆಫ್ ಅ ಫ್ಯೂಚರ್: ದ ಕಾಶ್ಮೀರ್ ಸ್ಟೋರಿ ಡೇವಿಡ್ ದೇವದಾಸ್
೬. ಇಂಡಿಪೆಂಡೆಂಟ್ ಕಾಶ್ಮೀರ್ ಕ್ರಿಸ್ಟೋಫರ್ ಸ್ನೆಡನ್
೭. ಕೊಲೋನೈಸಿಂಗ್ ಕಾಶ್ಮೀರ್: ಸ್ಟೇಟ್‌ಬಿಲ್ಡಿಂಗ್ ಅಂಡರ್ ಇಂಡಿಯನ್ ಆಕ್ಯುಪೇಷನ್ ಹಫ್ಸಾ ಕಂಜ್‌ವಾಲ್

2. ಈ ಪುಸ್ತಕಗಳು ಯುವಕರನ್ನು ಹಿಂಸೆಯತ್ತ ಪ್ರೇರೇಪಿಸುವ ವಿಚಾರಧಾರೆಯನ್ನು ಹರಡುತ್ತಿವೆ ಎಂದು ಆರೋಪಿಸಲಾಗಿದೆ. ಆದ್ದರಿಂದ, ಈ ಪುಸ್ತಕಗಳನ್ನು ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 152, 196 ಮತ್ತು 197 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 98ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಕೇವಲ ಪುಸ್ತಕಗಳನ್ನು ಕೇವಲ ನಿಷೇಧಿಸಿದರೆ ಸಾಲದು, ಸಂಬಂಧಿತ ಲೇಖಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು!