
ಕೀವ್ (ಉಕ್ರೇನ್) – ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸ್ಕಿ ಅವರು, ‘ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾವು ಚೀನಾ ಮತ್ತು ಪಾಕಿಸ್ತಾನದಿಂದ ಬಾಡಿಗೆಗೆ ಸಿಗುವ ಸೈನಿಕರನ್ನು ಕರೆತಂದಿದೆ. ಹಾಗೆಯೇ ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಆಫ್ರಿಕಾ ದೇಶಗಳಿಂದಲೂ ರಷ್ಯಾ ಇಂಥಹ ಜನರನ್ನು ಉಕ್ರೇನ್ ವಿರುದ್ಧ ಹೋರಾಡಲು ಬಳಸಿಕೊಳ್ಳುತ್ತಿದೆ. ಈ ಸೈನಿಕರನ್ನು ಕುರ್ಕ್ ಪ್ರಾಂತ್ಯಕ್ಕೆ ಕಳುಹಿಸಲಾಗಿದೆ’ ಎಂದು ಆರೋಪಿಸಿದ್ದಾರೆ.
Today, I was with those defending our country in the Vovchansk direction – the warriors of the 17th Separate Motorized Infantry Battalion of the 57th Brigade named after Kish Otaman Kost Hordiienko.
We spoke with commanders about the frontline situation, the defense of… pic.twitter.com/40XsGHZU0T
— Volodymyr Zelenskyy / Володимир Зеленський (@ZelenskyyUa) August 4, 2025
ರಷ್ಯಾವು ಈ ಯುದ್ಧದಲ್ಲಿ 100ಕ್ಕಿಂತಲೂ ಅಧಿಕ ಚೀನೀ ಸೈನಿಕರನ್ನು ನಿಯೋಜಿಸಿತ್ತು ಎಂದು ಝೆಲೆನ್ಸ್ಕಿ ಈ ಹಿಂದೆಯೂ ಹೇಳಿದ್ದರು. ಡೊನೆಟ್ಸ್ಕ್ ಪ್ರಾಂತ್ಯದಲ್ಲಿ ಇಬ್ಬರು ಚೀನೀ ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿದ್ದಲ್ಲದೆ, ಒಂದು ವೀಡಿಯೊವನ್ನು ಸಹ ಪ್ರಸಾರ ಮಾಡಿದ್ದರು, ಆದರೆ ಚೀನಾವು ಈ ಆರೋಪಗಳನ್ನು ನಿರಾಕರಿಸಿತ್ತು. ಈ ಯುದ್ಧದಲ್ಲಿ ಉತ್ತರ ಕೊರಿಯಾದ ಸೈನಿಕರು ಕೂಡ ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ಬಂದಿತ್ತು. ಭಾರತದ ಕೆಲವು ನಾಗರಿಕರನ್ನು ವಂಚಿಸಿ (ಮೋಸ ಮಾಡಿ) ಯುದ್ಧದಲ್ಲಿ ತಳ್ಳಲಾಗಿತ್ತು. ಝೆಲೆನ್ಸ್ಕೀ ಮಾತು ಮುಂದುವರೆಸಿ, ನಾವು ಇಂತಹ ಕ್ರೂರ ಯುದ್ಧದಲ್ಲಿ ಹೋರಾಡುತ್ತಿದ್ದೇವೆ, ಇದು ಅಸಂಖ್ಯಾತ ಜೀವಗಳನ್ನು ಬಲಿ ತೆಗೆದುಕೊಂಡಿದೆ ಹಾಗೆಯೇ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ ಎಂದು ಹೇಳಿದ್ದಾರೆ.
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’