|

ಕೀವ್ (ಉಕ್ರೇನ್) – ರಷ್ಯಾದ ಸೇನೆಯು ದಾಳಿ ಮಾಡಿದ ಡ್ರೋನ್‌ಗಳಲ್ಲಿ ಭಾರತೀಯ ಕಂಪನಿಗಳು ತಯಾರಿಸಿದ ಎಲೆಕ್ಟ್ರಾನಿಕ್ ಘಟಕಗಳಿವೆ ಎಂದು ಉಕ್ರೇನ್‌ಗೆ ತಿಳಿದುಬಂದಿದೆ. ಈ ಬಗ್ಗೆ ಉಕ್ರೇನ್ ಭಾರತ ಮತ್ತು ಯುರೋಪಿಯನ್ ಯೂನಿಯನ್ ಎರಡಕ್ಕೂ ಅಧಿಕೃತವಾಗಿ ದೂರು ನೀಡಿದೆ. ವರದಿಯ ಪ್ರಕಾರ, ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾ ‘ಶಾಹೆದ್-136’ ಎಂಬ ಇರಾನಿ ಡ್ರೋನ್ ಅನ್ನು ಬಳಸುತ್ತಿದೆ. ಅದರಲ್ಲಿ ಈ ಘಟಕಗಳು ಪತ್ತೆಯಾಗಿವೆ ಎಂದು ಉಕ್ರೇನ್ ಸ್ಪಷ್ಟಪಡಿಸಿದೆ. ಈ ಡ್ರೋನ್‌ಗಳಲ್ಲಿ ‘ಸಿ.ಎಚ್.ಇ.ಪಿ. ವೋಲ್ಟೇಜ್ ರೆಗ್ಯುಲೇಟರ್’ ಮತ್ತು ಭಾರತೀಯ ಕಂಪನಿಗಳು ತಯಾರಿಸಿದ ‘ಸ್ಯಾಟಲೈಟ್ ನ್ಯಾವಿಗೇಷನ್ ಜಾಮರ್‌ಪ್ರೂಫ್ ಆಂಟೆನಾ’ ಇದೆ ಎಂದು ಉಕ್ರೇನ್ ಹೇಳಿಕೊಂಡಿದೆ.
🇮🇳 Indian-made parts found in Russian drones? Ukraine rushes to complain to the EU and the Indian government.
But if U.S., French, or German components were discovered, would Kyiv react the same way?
👉 Fundamentally, Ukraine – a scapegoat in the Russia-America proxy war gains… pic.twitter.com/wu2n1zFnAL
— Sanatan Prabhat (@SanatanPrabhat) August 5, 2025
ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಭಾರತದ ಎರಡು ಉದ್ದೇಶಗಳಿಗಾಗಿ ಬಳಸಬಹುದಾದ ವಸ್ತುಗಳ ರಫ್ತು ಅಣ್ವಸ್ತ್ರ ಪ್ರಸರಣದ ಮೇಲಿನ ಅಂತರರಾಷ್ಟ್ರೀಯ ಜವಾಬ್ದಾರಿಗಳಿಗೆ ಅನುಗುಣವಾಗಿದೆ ಮತ್ತು ಬಲವಾದ ದೇಶೀಯ ಕಾನೂನು ಮತ್ತು ನಿಯಂತ್ರಣ ಚೌಕಟ್ಟನ್ನು ಆಧರಿಸಿದೆ ಇಂತಹ ರಫ್ತುಗಳು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುನಾಳೆ ರಷ್ಯಾದ ಡ್ರೋನ್‌ಗಳಲ್ಲಿ ಅಮೆರಿಕ, ಫ್ರಾನ್ಸ್, ಜರ್ಮನಿ ದೇಶಗಳ ಕೆಲವು ಎಲೆಕ್ಟ್ರಾನಿಕ್ ಭಾಗಗಳು ಉಕ್ರೇನ್‌ಗೆ ಸಿಕ್ಕರೆ, ಅದರ ನಿಲುವೇನಾಗಿರುತ್ತದೆ? ವಾಸ್ತವವಾಗಿ, ರಷ್ಯಾ-ಅಮೆರಿಕ ಯುದ್ಧದಲ್ಲಿ ಬಲಿಪಶುವಾದ ಉಕ್ರೇನ್ ಇಂತಹ ಕ್ಷುಲ್ಲಕ ವಿಷಯಗಳ ಬಗ್ಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ! |
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’