ಚರ್ಚ್‌ಗೆ ಹೋಗುವುದನ್ನು ನಿಲ್ಲಿಸಿದ್ದರಿಂದ ಜೀವ ಬೆದರಿಕೆ!

ಅಹಿಲ್ಯಾನಗರ – ಇಲ್ಲಿನ ಶೇವಗಾಂವ್ ತಾಲ್ಲೂಕಿನ ಒಬ್ಬ ಹಿಂದೂ ಮಹಿಳೆಯನ್ನು ಆಕೆಯ ಅನಾರೋಗ್ಯ ಪೀಡಿತ ಸೋದರಳಿಯನ ಚಿಕಿತ್ಸೆಯ ನೆಪದಲ್ಲಿ ಚರ್ಚ್‌ಗೆ ಕರೆಸಿ, ಆಕೆಯೊಂದಿಗೆ ಅಶ್ಲೀಲ ವರ್ತನೆ ನಡೆಸಿ ಮತಾಂತರಕ್ಕೆ ಒತ್ತಡ ಹೇರಲಾಗಿದೆ. ಈ ಪ್ರಕರಣದಲ್ಲಿ, ಸಂತ್ರಸ್ತ ಮಹಿಳೆಯು ‘ಆಶೀರ್ವಾದ ಪ್ರಾರ್ಥನಾ ಭವನ ಹೋಲಿ ಸ್ಪಿರಿಟ್ ಜನರೇಷನ್ ಚರ್ಚ್’ನ ಪಾದ್ರಿ ಪ್ರದೀಪ್ ಕೋಲ್ಹೆ ವಿರುದ್ಧ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಕುಟುಂಬ ಚರ್ಚ್‌ಗೆ ಹೋಗುವುದನ್ನು ನಿಲ್ಲಿಸಿದಾಗ, ಆರೋಪಿ ಕೋಲ್ಹೆ ನಿಂದಿಸುವುದು, ಜೀವ ಬೆದರಿಕೆ ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪಾದ್ರಿ ಪ್ರದೀಪ್ ಕೋಲ್ಹೆ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಹಿಂದೂ ಮಹಿಳೆಯು ತಮ್ಮ ದೂರಿನಲ್ಲಿ,
೧. ನನ್ನ ಸೋದರಳಿಯ ೨೦೧೪ ರಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಅವನು ಗುಣಮುಖನಾಗುವ ಆಶಯದಿಂದ ನಾನು ನನ್ನ ಕುಟುಂಬದೊಂದಿಗೆ ಚರ್ಚ್‌ಗೆ ಹೋಗಲು ಪ್ರಾರಂಭಿಸಿದೆ. ಪಾದ್ರಿ ಪ್ರದೀಪ್ ಕೋಲ್ಹೆ ಚಿಕಿತ್ಸೆಯ ನೆಪದಲ್ಲಿ ನನ್ನ ಶ್ರದ್ಧೆಯ ದುರುಪಯೋಗಪಡಿಸಿಕೊಂಡು, ಚರ್ಚ್‌ನಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಲು ಹೇಳಿ ನನ್ನ ಬೆನ್ನು ಮತ್ತು ಕುತ್ತಿಗೆಯ ಮೇಲೆ ಕೈಯಾಡಿಸುವುದು, ಸೆರಗು ತೆಗೆಯುವುದು ಮತ್ತು ನನ್ನ ಕೈಗಳನ್ನು ಹಿಡಿಯುವಂತಹ ಅಶ್ಲೀಲ ಕೃತ್ಯಗಳನ್ನು ಮಾಡಿದ್ದಾನೆ.
೨. ಅದೇ ರೀತಿ, ‘ಇನ್ನೂ ಹೆಚ್ಚಿನ ಸಂಬಂಧಿಕರನ್ನು ಚರ್ಚ್‌ಗೆ ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ನಾನು ಚಿಕಿತ್ಸೆ ನೀಡುವುದಿಲ್ಲ’ ಎಂದು ಹೇಳಿ ಧಾರ್ಮಿಕ ಪ್ರಭಾವ ಬೀರಲು ಪ್ರಯತ್ನಿಸಿದ್ದಾನೆ.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!