ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆ

ರಿಯಾದ್ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದಲ್ಲಿ ಒಂದೇ ದಿನ ಎಂಟು ಜನರಿಗೆ ಏಕಕಾಲದಲ್ಲಿ ಗಲ್ಲು ಶಿಕ್ಷೆ ನೀಡಲಾಗಿದೆ. ಇವರಲ್ಲಿ ನಾಲ್ವರು ಸೋಮಾಲಿಯನ್ನರು ಮತ್ತು ಮೂವರು ಇಥಿಯೋಪಿಯನ್ನರು ಸೇರಿದ್ದಾರೆ. ಈ ಏಳು ವಿದೇಶಿ ಪ್ರಜೆಗಳ ಮೇಲೆ ಹಶೀಶ್ ಎಂಬ ಮಾದಕವಸ್ತು ಕಳ್ಳಸಾಗಣೆಯ ಆರೋಪವಿತ್ತು. ಎಂಟನೇ ಆರೋಪಿ ಸೌದಿ ಅರೇಬಿಯಾದ ಪ್ರಜೆಯಾಗಿದ್ದು, ತನ್ನ ತಾಯಿಯನ್ನು ಕೊಲೆ ಮಾಡಿದ್ದನು.
ಈ ವರ್ಷ ಇಲ್ಲಿಯವರೆಗೆ 230 ಜನರಿಗೆ ಮರಣದಂಡನೆ!
‘ಸೌದಿ ಪ್ರೆಸ್ ಏಜೆನ್ಸಿ’ ಮಾಹಿತಿ ಪ್ರಕಾರ, 2025 ರ ಆರಂಭದಿಂದ ಇಲ್ಲಿಯವರೆಗೆ 230 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ 154 ಜನರಿಗೆ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಮರಣದಂಡನೆ ನೀಡಲಾಗಿದೆ. 2024 ರಲ್ಲಿ 338 ಜನರಿಗೆ ಮರಣದಂಡನೆ ವಿಧಿಸಲಾಗಿತ್ತು. ತಜ್ಞರ ಪ್ರಕಾರ, ಮರಣದಂಡನೆ ಹೆಚ್ಚಾಗಲು 2023 ರಲ್ಲಿ ಪ್ರಾರಂಭವಾದ ‘ಮಾದಕವಸ್ತು ವಿರೋಧಿ ಯುದ್ಧ’ ಎಂಬ ನೀತಿಯೇ ಕಾರಣ. ಮಾನವ ಹಕ್ಕುಗಳ ಸಂಸ್ಥೆಗಳು ಮರಣದಂಡನೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮರಣದಂಡನೆಯಂತಹ ಕಠಿಣ ಶಿಕ್ಷೆಗಳು ಅಗತ್ಯ’ ಎಂದು ಸೌದಿ ಸರಕಾರದ ಹೇಳಿಕೆಯಾಗಿದೆ.
ಸಂಪಾದಕೀಯ ನಿಲುವುಸೌದಿ ಅರೇಬಿಯಾ ಮಾಡಬಹುದಾದ್ದನ್ನು, ಇದೇ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ಏಕೆ ಮಾಡಲು ಸಾಧ್ಯವಿಲ್ಲ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation