|

ನವದೆಹಲಿ – ಚೀನಾ ಭಾರತದ 2 ಸಾವಿರ ಚದರ ಕಿ.ಮೀ. ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ನಿಮಗೆ ಹೇಗೆ ತಿಳಿಯಿತು? ವಿಶ್ವಾಸಾರ್ಹ ಮಾಹಿತಿ ಏನು? ನೀವು ನಿಜವಾದ ಭಾರತೀಯರಾಗಿದ್ದರೆ, ನೀವು ಹೀಗೆ ಹೇಳುತ್ತಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಿವಿದಿದೆ. ರಾಹುಲ್ ಗಾಂಧಿ ಅವರು 2022 ರಲ್ಲಿ ಲಡಾಖ್ ಪ್ರವಾಸದಲ್ಲಿದ್ದಾಗ ಒಂದು ಸಭೆಯಲ್ಲಿ ಮಾತನಾಡುವಾಗ ಚೀನಾ ಭಾರತದ 2 ಸಾವಿರ ಕಿ.ಮೀ. ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಹೇಳಿಕೆ ನೀಡಿದ್ದರು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ರಾಹುಲ್ ಗಾಂಧಿಯವರ ಸಮನ್ಸ್ ವಿರುದ್ಧದ ಅರ್ಜಿಯ ಬಗ್ಗೆ ಉತ್ತರಪ್ರದೇಶ ಸರಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರಾಹುಲ್ ಗಾಂಧಿ ವಿರುದ್ಧ ಕೆಳ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲ, ಸಂಸತ್ತಿನಲ್ಲಿ ಮಾತನಾಡಿ!
ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವಾಗ ನೀವು ಇದನ್ನೆಲ್ಲಾ ಮಾತನಾಡಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ನೀವು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಏಕೆ ಕೇಳಲು ಸಾಧ್ಯವಿಲ್ಲ? ನೀವು (ರಾಹುಲ್ ಗಾಂಧಿ) ವಿರೋಧ ಪಕ್ಷದ ನಾಯಕರು, ಸಂಸತ್ತಿನಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲ. ನಿಮಗೆ ಬೇಕಾದುದನ್ನು ಮಾತನಾಡಿ. ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ನಿಮಗೆ ಆ ಹಕ್ಕುಗಳಿವೆ; ಆದರೆ ಇದರರ್ಥ ಒಬ್ಬ ಜವಾಬ್ದಾರಿಯುತ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ನೀವು ಇದನ್ನೆಲ್ಲಾ ಮಾಡುತ್ತೀರಿ ಎಂದಲ್ಲ.
ಚೀನಾ ಭಾರತದ ಒಂದಿಂಚು ಭೂಮಿಯನ್ನೂ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ! – ಅಂದಿನ ಉಪರಾಜ್ಯಪಾಲ ಬಿ.ಡಿ. ಮಿಶ್ರ

ರಾಹುಲ್ ಗಾಂಧಿಯವರ ಆರೋಪದ ಬಗ್ಗೆ ಲಡಾಖ್‌ನ ಅಂದಿನ ಉಪರಾಜ್ಯಪಾಲ ಬ್ರಿಗೇಡಿಯರ್ (ನಿವೃತ್ತ) ಬಿ.ಡಿ. ಮಿಶ್ರ ಅವರು, ಚೀನಾ ಭಾರತದ ಒಂದಿಂಚು ಭೂಮಿಯನ್ನೂ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. 1962 ರ (ಭಾರತ-ಚೀನಾ ಯುದ್ಧ) ರಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಇಂದು ಗಡಿಯ ಕೊನೆಯ ಭೂಮಿಯೂ ನಮ್ಮ ನಿಯಂತ್ರಣದಲ್ಲಿದೆ. ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ, ಸೈನ್ಯವು ಸೂಕ್ತ ಉತ್ತರ ನೀಡಲು ಸಿದ್ಧವಾಗಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ನಿರಾಧಾರ ಆರೋಪ ಮಾಡುವವರಿಗೆ ಕಾರಾಗೃಹ ಶಿಕ್ಷೆ ವಿಧಿಸುವುದು ಅಗತ್ಯ! ರಾಹುಲ್ ಗಾಂಧಿ ಅವರ ಸ್ಥಾನದಲ್ಲಿ ಸಾಮಾನ್ಯ ನಾಗರಿಕನಾಗಿದ್ದರೆ, ಸರಕಾರ ಅವನ ವಿರುದ್ಧ ಯಾವಾಗಲೋ ಕ್ರಮ ಕೈಗೊಳ್ಳುತ್ತಿತ್ತು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ