ಇಸ್ಲಾಂ ಧರ್ಮ ಸ್ವೀಕರಿಸಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಹಿಂದೂ ಯುವತಿಯ ಕತ್ತು ಸೀಳಿದ ಶೇಖ ರಯಿಸ್

ಬುರಹಾನಪುರ (ಮಧ್ಯಪ್ರದೇಶ) – ಬುರಹಾನಪುರ ಜಿಲ್ಲೆಯ ನೇಪಾನಗರದ ಶೇಖ್ ರಯಿಸ್ ನು ಭಾಗ್ಯಶ್ರೀ ಧಾನುಕ ಎಂಬ ಹಿಂದೂ ಯುವತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಲು ಒತ್ತಡ ಹೇರಿದ್ದನು. ಆದರೆ, ಆಕೆ ನಿರಾಕರಿಸಿದ್ದರಿಂದ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆಯ ನಂತರ, ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಶೇಖ್‌ ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದವು. ಪೊಲೀಸರು ಶೇಖ್ ರಯೀಸನನ್ನು ಬಂಧಿಸಿದ್ದಾರೆ.
ಭಾಗ್ಯಶ್ರೀಯ ಸಹೋದರಿ ಹೇಳಿದ ಪ್ರಕಾರ, ಆರೋಪಿ ರಯೀಸ್ ತನ್ನ ಸಹೋದರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು ಮತ್ತು ಮದುವೆಗಾಗಿ ಒತ್ತಡ ಹೇರುತ್ತಿದ್ದನು. ಈ ಮೊದಲು ಕೂಡ ಅವನು ಬೆದರಿಕೆ ಹಾಕಿದ್ದನು.

ಶೇಖ್ ರಯೀಸ್ ನೇಪಾನಗರದ ಮಾತಾಪುರ ಮಾರುಕಟ್ಟೆಯಲ್ಲಿ ಒಂದು ಡೈರಿಯನ್ನು ನಡೆಸುತ್ತಾನೆ. ಅವನ ಪತ್ನಿ ಅವನನ್ನು ತೊರೆದು ಹೋಗಿದ್ದು, ಅವನ ವಿರುದ್ಧ ಜೀವನಾಂಶಕ್ಕಾಗಿ ಮೊಕದ್ದಮೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

  • ‘ಭಾರತದಲ್ಲಿ ಮುಸ್ಲಿಮರು ಅಲ್ಲ, ಬದಲಾಗಿ ಹಿಂದೂಗಳು ಮತ್ತು ಅವರ ಹೆಣ್ಣುಮಕ್ಕಳು ಅಸುರಕ್ಷಿತರಾಗಿದ್ದಾರೆ’ ಎಂದು ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ಮಮತಾ ಬ್ಯಾನರ್ಜಿ, ಸುಪ್ರಿಯಾ ಸುಳೆ, ಡಿಂಪಲ್ ಯಾದವ್ ಮುಂತಾದ ಮಹಿಳಾ ನಾಯಕಿಯರು ಹೇಳುವುದಿಲ್ಲ; ಏಕೆಂದರೆ ಅವರಿಗೆ ಹಿಂದೂಗಳಿಗಿಂತ ಮುಸ್ಲಿಮರ ಮತಗಳು ಹೆಚ್ಚು ಪ್ರಿಯವಾಗಿವೆ!
  • ಇಸ್ಲಾಮಿಕ್ ರಾಷ್ಟ್ರದಲ್ಲಿ ಒಬ್ಬ ಹಿಂದೂ ಆಕಸ್ಮಿಕವಾಗಿ ಒಬ್ಬ ಮುಸ್ಲಿಂ ಯುವತಿಯೊಂದಿಗೆ ಹೀಗೆ ಮಾಡಿದ್ದರೆ, ಅವನನ್ನು ಅಲ್ಲಿಯೇ ಕೊಂದು ಹಾಕುತ್ತಿದ್ದರು. ಅಷ್ಟೇ ಅಲ್ಲ, ಇತರ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿದ್ದವು, ಮತ್ತು ಅವರ ದೇವಸ್ಥಾನಗಳನ್ನು ಗುರಿಯಾಗಿಸಲಾಗುತ್ತಿತ್ತು!