‘ದಿ ಕೇರಳ ಸ್ಟೋರಿ’ಗೆ ರಾಷ್ಟ್ರೀಯ ಪ್ರಶಸ್ತಿ ನೀಡಿದ್ದಕ್ಕಾಗಿ ‘ಎಫ್‌.ಟಿ.ಐ.ಐ’ ವಿದ್ಯಾರ್ಥಿ ಸಂಘಟನೆಗೆ ಉರಿ !

(ಎಫ್‌.ಟಿ.ಐ.ಐ ಎಂದರೆ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’)

ಪುಣೆ (ಮಹಾರಾಷ್ಟ್ರ) – ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಗಿದೆ. ಇದರಲ್ಲಿ ನಿರ್ದೇಶಕ ಸುದಿಪ್ತೋ ಸೇನ್ ಅವರ 2023 ರಲ್ಲಿ ಬಿಡುಗಡೆಯಾದ ಲವ್ ಜಿಹಾದ್ ಆಧಾರಿತ ‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ಗೌರವ ಸಲ್ಲಿಸಲಾಗಿದೆ. ಸುದಿಪ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ನೀಡಲಾಯಿತು. ಅಲ್ಲದೆ, ಈ ಚಲನಚಿತ್ರಕ್ಕೆ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ಲಭಿಸಿದೆ. ಅನೇಕ ಪ್ರೇಕ್ಷಕರು ಇದನ್ನು ಸ್ವಾಗತಿಸಿದ್ದಾರೆ, ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳದ ಹಿಂದೂ ದ್ವೇಷಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಚಲನಚಿತ್ರಕ್ಕೆ ಪ್ರಶಸ್ತಿ ನೀಡಿದ್ದನ್ನು ಖಂಡಿಸಿದ್ದರು. ಈಗ ಪುಣೆಯ ಅಭಿನಯ ತರಬೇತಿ ನೀಡುವ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ (ಎಫ್‌ಟಿಐಐ) ವಿದ್ಯಾರ್ಥಿ ಸಂಘಟನೆಯೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

1.’ ದಿ ಕೇರಳ ಸ್ಟೋರಿ’ ಕೇವಲ ಒಂದು ಚಲನಚಿತ್ರವಲ್ಲ, ಒಂದು ಶಸ್ತ್ರವಾಗಿದೆ ಎಂದು ‘ಎಫ್‌.ಟಿ.ಐ.ಐ’ ವಿದ್ಯಾರ್ಥಿ ಸಂಘಟನೆ ಹೊರಡಿಸಿದ ಮನವಿಯಲ್ಲಿ ತಿಳಿಸಿದೆ. ‘ದಿ ಕೇರಳ ಸ್ಟೋರಿ’ಗೆ ಪ್ರಶಸ್ತಿ ನೀಡುವುದು ಕೇವಲ ನಿರಾಶಾದಾಯಕವಲ್ಲ, ಅತ್ಯಂತ ಅಪಾಯಕಾರಿ. ಈ ಚಲನಚಿತ್ರವು ಒಂದು ಅಭಿವ್ಯಕ್ತಿಯಲ್ಲ, ಆದರೆ ಮುಸ್ಲಿಂ ಸಮುದಾಯವನ್ನು ಮತ್ತು ಕೇರಳದಂತಹ ಪ್ರಗತಿಪರ ರಾಜ್ಯವನ್ನು ಕಳಂಕಿತಗೊಳಿಸುವ ಸಾಧನವಾಗಿದೆ ಎಂದು ಈ ಮನವಿಯಲ್ಲಿ ತಿಳಿಸಲಾಗಿದೆ. (‘ದಿ ಕೇರಳ ಸ್ಟೋರಿ’ ಚಲನಚಿತ್ರದಲ್ಲಿ ಕೇರಳದಲ್ಲಿ ಲವ್ ಜಿಹಾದ್‌ಗೆ ಬಲಿಯಾದ ಸಾವಿರಾರು ಹಿಂದೂ ಹೆಣ್ಣುಮಕ್ಕಳ ಭೀಕರ ಸ್ಥಿತಿಯನ್ನು ತೋರಿಸಲಾಗಿದೆ. ಇದರಲ್ಲಿ ಭಯೋತ್ಪಾದಕರ ಮನಸ್ಥಿತಿಯನ್ನು ಜಗತ್ತಿಗೆ ತೋರಿಸಲಾಗಿದೆ. ಹಾಗಾಗಿ ಕಳಂಕಿತಗೊಳಿಸುವ ಪ್ರಶ್ನೆ ಎಲ್ಲಿ ಬರುತ್ತದೆ? ಬದಲಿಗೆ ರಾಜ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲಾರದು! – ಸಂಪಾದಕರು)

2. ವಿದ್ಯಾರ್ಥಿ ಸಂಘಟನೆಯು, ‘ಅಲ್ಪಸಂಖ್ಯಾತರ ವಿರುದ್ಧ ತಪ್ಪು ಮಾಹಿತಿ ಮತ್ತು ಭಯವನ್ನು ಹರಡುವ ಚಲನಚಿತ್ರಗಳಿಗೆ ಸರಕಾರಿ ಸಂಸ್ಥೆಗಳು ಪ್ರಶಸ್ತಿ ನೀಡಿದಾಗ, ಅವು ಕೇವಲ ಕಲೆಯನ್ನು ಗೌರವಿಸುವುದಿಲ್ಲ, ಆದರೆ ಹಿಂಸಾಚಾರಕ್ಕೂ ಮಾನ್ಯತೆ ನೀಡುತ್ತವೆ. (ಈ ಚಲನಚಿತ್ರವು ಜಿಹಾದಿ ಭಯೋತ್ಪಾದಕರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ. ಹಾಗಾಗಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಭೇದ ಮಾಡಿ ವಿದ್ಯಾರ್ಥಿ ಸಂಘಟನೆಯು ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಬಾರದು! – ಸಂಪಾದಕರು)

ಸಂಪಾದಕೀಯ ನಿಲುವು

ಅಭಿನಯ ತರಬೇತಿ ನೀಡುವ ಈ ಸರಕಾರಿ ಸಂಸ್ಥೆಯು ಕಮ್ಯುನಿಸ್ಟರ ಅಡ್ಡೆಯಾಗಿದೆ. ಹಾಗಾಗಿ ‘ಕೇರಳ ಸ್ಟೋರಿ’ಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಲ್ಲಿನ ಕಮ್ಯುನಿಸ್ಟ್ ವಿಚಾರಧಾರೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಆಶ್ಚರ್ಯವಿಲ್ಲ!