‘ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನವಿದೆ ಎಂದು ಜಗತ್ತು ಒಪ್ಪಿಕೊಳ್ಳಲು ಸಿದ್ಧವಿಲ್ಲವಂತೆ’ – Manishankar Aiyar Anti-India Statement

ಪಾಕಿಸ್ತಾನ ಪ್ರೇಮಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ದೇಶದ್ರೋಹಿ ಹೇಳಿಕೆ

ನವದೆಹಲಿ – ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಪಾಕಿಸ್ತಾನವನ್ನು ಬಹಿರಂಗಪಡಿಸಲು ನಮ್ಮ ಸಂಸದರು ವಿಶ್ವದಾದ್ಯಂತ ಪ್ರವಾಸ ಮಾಡಿದರು; ಆದರೆ ಯಾರೂ ನಮ್ಮ ಮಾತನ್ನು ಕೇಳಲಿಲ್ಲ. ನಾವು ಎದೆ ತಟ್ಟಿಕೊಂಡು ‘ಪಹಲ್ಗಾಮ್ ದಾಳಿಗೆ ಪಾಕಿಸ್ತಾನವೇ ಕಾರಣ’ ಎಂದು ಹೇಳಿದೆವು; ಆದರೆ ಯಾರೂ ಅದನ್ನು ನಂಬಲು ಸಿದ್ಧರಿಲ್ಲ. ವಿಶ್ವಸಂಸ್ಥೆ ಮತ್ತು ಅಮೆರಿಕ ಕೂಡ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿಲ್ಲ ಏಕೆಂದರೆ ನಾವು ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆಪರೇಷನ್ ಸಿಂದೂರ್’ ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ನಿಲುವುಗಳ ಬಗ್ಗೆ ಮಾಹಿತಿ ನೀಡಲು 33 ದೇಶಗಳಿಗೆ 7 ನಿಯೋಗಗಳನ್ನು ಕಳುಹಿಸಿದ್ದರು. ಈ ನಿಯೋಗದಲ್ಲಿ ವಿವಿಧ ರಾಜಕೀಯ ಪಕ್ಷಗಳ 51 ನಾಯಕರು ಮತ್ತು 8 ರಾಯಭಾರಿಗಳು ಸೇರಿದಂತೆ 59 ಸದಸ್ಯರಿದ್ದರು.

ಸಂಪಾದಕೀಯ ನಿಲುವು

ಜಗತ್ತಿನ ಬಗ್ಗೆ ಯೋಚಿಸುವುದಕ್ಕಿಂತ ಮೊದಲು ಕಾಂಗ್ರೆಸ್ ಯಾಕೆ ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ ಎಂಬುದಕ್ಕೆ ಅಯ್ಯರ್ ಉತ್ತರ ನೀಡಬೇಕು! ಪಾಕಿಸ್ತಾನವು ಕಾಂಗ್ರೆಸ್‌ ನಿಂದಲೇ ರಚನೆಯಾದ ಕಾರಣ, ಕಳೆದ 78 ವರ್ಷಗಳಿಂದ ಎಲ್ಲ ರೀತಿಯಿಂದಲೂ ಪಾಕಿಸ್ತಾನವನ್ನು ಬೆಂಬಲಿಸುತ್ತಲೇ ಬಂದಿದೆ ಮತ್ತು ಬೆಂಬಲಿಸುತ್ತಿದೆ!