|

ಪುಣೆ – ಮುಕುಂದನಗರದಲ್ಲಿರುವ ಅನಧಿಕೃತ ‘ಹಜರತ್ ದಂ ದಂ ಶಾಹ್ ಆಲಿ ಬಾಬಾ ದರ್ಗಾ’ ಹೆಸರಿನಲ್ಲಿ ಫುಟ್‌ಪಾತ್ ಮೇಲೆ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹಿಂದುತ್ವನಿಷ್ಠ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ. ಈ ಬೇಡಿಕೆಗೆ ಬೆಂಬಲವಾಗಿ ಸಕಲ ಹಿಂದೂ ಸಮಾಜದ ವತಿಯಿಂದ ಆಗಸ್ಟ್ 2 ರಂದು ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಜಪದ ಶಾಸಕ ಯೋಗೇಶ ತಿಳೇಕರ ಭಾಗವಹಿಸಿದ್ದರು. ಆರಂಭದಲ್ಲಿ ದರ್ಗಾದ ಜಾಗದಲ್ಲಿ ಪ್ರತಿಭಟನೆ ನಡೆಸಲು ಅವರು ಪ್ರಯತ್ನಿಸಿದರು; ಆದರೆ ಪೊಲೀಸರು ಅವರನ್ನು ಘಟನಾ ಸ್ಥಳಕ್ಕೆ ಬಿಡಲಿಲ್ಲ. ಆದ್ದರಿಂದ, ಅವರು ಲಕ್ಷ್ಮೀ ನಾರಾಯಣ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. ‘ಅನಧಿಕೃತ ದರ್ಗಾವನ್ನು 15 ದಿನಗಳೊಳಗೆ ತೆರವುಗೊಳಿಸದಿದ್ದರೆ, ಅಲ್ಲಿ ಮಾರುತಿ ದೇವಸ್ಥಾನವನ್ನು ಕಟ್ಟಲಾಗುವುದು’ ಎಂದು ಶಾಸಕ ತಿಳೇಕರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಎಚ್ಚರಿಕೆ ನೀಡಿದರು. ಪೊಲೀಸರು ಈ ಪ್ರತಿಭಟನೆಯನ್ನು ನಿಲ್ಲಿಸಲು ಪ್ರತಿಭಟನಾಕಾರರನ್ನು ಬಂಧಿಸಿದರು. (ಹಿಂದೂಗಳನ್ನು ಬಂಧಿಸುವ ಪೊಲೀಸರು ಮತಾಂಧರ ಮುಂದೆ ತಲೆಬಾಗುತ್ತಾರೆ! – ಸಂಪಾದಕರು) ದರ್ಗಾದ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ತಡೆಗೋಡೆಗಳನ್ನು ಹಾಕಿ ಬಂದ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 7 ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿತ್ತು. ಸಕಲ ಹಿಂದೂ ಸಮಾಜದ ಪ್ರತಿಭಟನೆ ನಡೆಯುತ್ತಿದ್ದಾಗ, ಕೆಲವು ಮುಸ್ಲಿಂ ಮತ್ತು ದಲಿತ ಸಂಘಟನೆಗಳು ದರ್ಗಾದ ಕಡೆಯಿಂದಲೂ ಪ್ರತಿಭಟನೆ ನಡೆಸಿದವು.
ಸಂಪಾದಕೀಯ ನಿಲುವುಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ? ಆಡಳಿತ ತಾನಾಗಿಯೇ ಕ್ರಮ ತೆಗೆದುಕೊಳ್ಳಲು ಏಕೆ ಬಯಸುವುದಿಲ್ಲ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!