ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರಿಗೆ ಮತ್ತೆ ಸನಾತನ ದ್ವೇಷದ ತುರಿಕೆ!

ಮುಂಬಯಿ – ನಾನು ಧರ್ಮದ ಅಧ್ಯಯನಕಾರನಲ್ಲ. ನಾನು ಮುಖ್ಯಮಂತ್ರಿಯಾಗಿ ಒಂದು ‘ಭಯೋತ್ಪಾದಕ’ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿದ್ದೆ. ಆ ಸಂಘಟನೆಯ ಹೆಸರು ಸನಾತನ ಸಂಸ್ಥೆ. ಅದು ಬಹುಶಃ ‘ನೋಂದಾಯಿತ ಎನ್.ಜಿ.ಒ.’ (ನೋಂದಾಯಿತ ಸರಕಾರೇತರ ಸಂಸ್ಥೆ) ಆಗಿರಬಹುದು. ಆ ಸಂಸ್ಥೆಗೆ ಅವರು ಸನಾತನ ಎಂಬ ಹೆಸರನ್ನು ಇಟ್ಟಿದ್ದಾರೆ, ಇದರಲ್ಲಿ ನನ್ನ ತಪ್ಪೇನಿದೆ? ನನಗೆ ಆ ಸಂಸ್ಥೆಯನ್ನು ಮಾತ್ರ ನಿಷೇಧಿಸಬೇಕು. ಧರ್ಮವನ್ನು ನಿಷೇಧಿಸುವ ಬಗ್ಗೆ ನಾನು ಹೇಳಿರಲಿಲ್ಲ. ನನ್ನ ಹೇಳಿಕೆ ಅರ್ಥವಾಗದಿದ್ದರೆ, ಅದು ನನ್ನ ದುರದೃಷ್ಟ. ನಾನು ಇನ್ನಷ್ಟು ಸ್ಪಷ್ಟವಾಗಿ ಮಾತನಾಡಬೇಕಿತ್ತು ಎಂದು ಸನಾತನ ದ್ವೇಷಿ ಹೇಳಿಕೆಯನ್ನು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ‘ಜೈ ಮಹಾರಾಷ್ಟ್ರ’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
@nareshmhaske, Shiv Sena MP, tears into Prithviraj Chavan’s “Sanatani Terrorism” remark, calling it a deliberate insult to Sanatan Dharma.
🔥”Targeting Hindus has become convenient for Congress.”
Where were your voices when Sadhus were lynched in Palghar? Why so silent on… pic.twitter.com/8FdBEQ7NCr
— Sanatan Prabhat (@SanatanPrabhat) August 3, 2025
ಜುಲೈ 31 ರಂದು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಯಿತು ಮತ್ತು ಅದರಲ್ಲಿ 7 ಆರೋಪಿಗಳು ನಿರಪರಾಧಿಗಳೆಂದು ಬಿಡುಗಡೆಯಾದರು. ಈ ಬಗ್ಗೆ ಪ್ರತಿಕ್ರಿಯಿಸುವಾಗ ‘ಭಗವಾ ಅಲ್ಲ, ಬದಲಾಗಿ ಸನಾತನ ಭಯೋತ್ಪಾದನೆ ಎನ್ನಿ’ ಎಂಬ ರೀತಿಯ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು.
🔥 From Fake ‘Hindu Terror’ to Targeting Sanatan – Chavan’s Anti-Dharma Agenda
Former Congress CM Prithviraj Chavan once again spits venom against Sanatan Dharma; openly admits, “I had spoken about banning @SanatanSanstha”
This is the same man who peddled the fake ‘Hindu… pic.twitter.com/0pwi7V4HjF
— Sanatan Prabhat (@SanatanPrabhat) August 3, 2025

ಆನಂತರ ಅವರ ಮೇಲೆ ಟೀಕೆಗಳ ಸುರಿಮಳೆ ಸುರಿದಾಗ, ಅವರು ತೇಪೆ ಹಚ್ಚುತ್ತಾ ‘ಸನಾತನ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದೆ’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಸನಾತನ ಸಂಸ್ಥೆ ಬಳಿ ಕ್ಷಮೆ ಕೇಳಿ, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ! – ಸನಾತನ ಸಂಸ್ಥೆ

ಮುಂಬಯಿ – ‘ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಅವರು ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ’ ಎಂದು ಪದೇ ಪದೇ ಹೇಳಿ ಗುರಿಯಾಗಿಸಿದ್ದಾರೆ. ಹಿಂದೆ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಂದಿನ ಕಾಂಗ್ರೆಸ್ ನಾಯಕರು ಸನಾತನವನ್ನು ಅನಗತ್ಯವಾಗಿ ಸಿಲುಕಿಸಿದ್ದರು; ನಂತರ ನ್ಯಾಯಾಲಯವು ಸನಾತನದ ಎಲ್ಲಾ ನಿರಪರಾಧಿ ಸಾಧಕರನ್ನು ಬಿಡುಗಡೆ ಮಾಡಿ, ಸನಾತನವನ್ನು ಸಿಲುಕಿಸಲಾಗಿತ್ತು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು. ಮಾಲೇಗಾಂವ್ ಪ್ರಕರಣದ ಹಿಂದುತ್ವನಿಷ್ಠ ವ್ಯಕ್ತಿಗಳನ್ನು ಮಾತ್ರವಲ್ಲದೆ, ಸನಾತನ ಸಂಸ್ಥೆಯನ್ನೂ ‘ಭಯೋತ್ಪಾದಕ’ ಎಂದು ಘೋಷಿಸಿ ‘ಹಿಂದೂ ಭಯೋತ್ಪಾದನೆ’ಯ ಸಿದ್ಧಾಂತವನ್ನು ಕಾಂಗ್ರೆಸ್ ಪ್ರಸಾರ ಮಾಡಲು ಬಯಸಿತ್ತು. ಕಾಂಗ್ರೆಸ್ ಮಾಡಿದ ಪಾಪಗಳು ಈಗ ಹೊರಬರುತ್ತಿವೆ’ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ನಿಲುವನ್ನು ಮಂಡಿಸಿದರು.
ಶ್ರೀ. ರಾಜಹಂಸ ಅವರು ಮಾತು ಮುಂದುವರೆಸಿ, ‘ನ್ಯಾಯಾಲಯವು ಸನಾತನದ ಸಾಧಕರನ್ನು ಹೇಗೆ ನಿರಪರಾಧಿ ಎಂದು ಬಿಡುಗಡೆ ಮಾಡಿದೆಯೋ, ಅದೇ ರೀತಿ ಮಾಲೇಗಾಂವ್ ಪ್ರಕರಣದ ಹಿಂದುತ್ವನಿಷ್ಠರನ್ನೂ ನಿರಪರಾಧಿ ಎಂದು ಬಿಡುಗಡೆ ಮಾಡಿ, ಕಾಂಗ್ರೆಸ್‌ನ ಹಿಂದೂವಿರೋಧಿ ಆಡಳಿತಗಾರರು ಮತ್ತು ‘ಹಿಂದೂ ಭಯೋತ್ಪಾದನೆ’ಯನ್ನು ಪ್ರಸಾರ ಮಾಡಿದವರಿಗೆ ಬಲವಾದ ತಪರಾಕಿ ನೀಡಿದೆ. ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ಪ್ರಾರಂಭವಾಗುವ ಮೊದಲೇ ‘ಈ ಹತ್ಯೆಯನ್ನು ಹಿಂದುತ್ವನಿಷ್ಠರು ಮಾಡಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರು ಪೊಲೀಸರಿಗೆ ತನಿಖೆಯ ದಿಕ್ಕನ್ನು ನಿರ್ಧರಿಸಿದ್ದರು. ನ್ಯಾಯಾಲಯವು ಈ ಪ್ರಕರಣದಲ್ಲಿಯೂ ಸಹ ಸನಾತನ ಸಂಸ್ಥೆಯ ಸಾಧಕರನ್ನು ಸಿಲುಕಿಸಲಾಗಿತ್ತು ಅವರನ್ನೂ ನಿರಪರಾಧಿಗಳೆಂದು ಬಿಡುಗಡೆ ಮಾಡಿತು. ಇಂತಹ ಹೇಳಿಕೆಗಳನ್ನು ನೀಡಿ ಮುಜುಗರಕ್ಕೊಳಗಾದ ಪೃಥ್ವಿರಾಜ್ ಚವ್ಹಾಣ್ ಅವರು ನಿಜವಾಗಿಯೂ ಹಿಂದೂ ಸಮಾಜದ ಕ್ಷಮೆ ಕೇಳಬೇಕಿತ್ತು, ಆದರೆ ಅವರು ಮತ್ತೆ ಮತ್ತೆ ಹಿಂದುತ್ವನಿಷ್ಠರನ್ನು ಗುರಿಯಾಗಿಸುತ್ತಿದ್ದಾರೆ. ಪೃಥ್ವಿರಾಜ್ ಚವ್ಹಾಣ್ ಅವರು ಸನಾತನ ಸಂಸ್ಥೆಯ ಕ್ಷಮೆ ಕೇಳದಿದ್ದರೆ, ಸನಾತನ ಸಂಸ್ಥೆಯು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದೆ’ ಎಂದು ಶ್ರೀ. ರಾಜಹಂಸ ಎಚ್ಚರಿಕೆ ನೀಡಿದರು.
ಸನಾತನ ಧರ್ಮವನ್ನು ಅವಮಾನಿಸುವವರು ಬೆಲೆ ತೆತ್ತಬೇಕಾಗುತ್ತದೆ! – ಉಪಮುಖ್ಯಮಂತ್ರಿ ಏಕನಾಥ ಶಿಂದೆ

ಮುಂಬಯಿ – ಹಿಂದೂ ಮತ್ತು ಸನಾತನ ಧರ್ಮವನ್ನು ಅವಮಾನಿಸುವವರು ಅದಕ್ಕೆ ಬೆಲೆ ತೆತ್ತಬೇಕಾಗುತ್ತದೆ. ಇಂತಹ ಸಮಯದಲ್ಲಿ ಉದ್ಧವ್ ಠಾಕ್ರೆ ಅವರಿಗೆ ಹಿಂದೂತ್ವ ನೆನಪಾಗುವುದಿಲ್ಲವೇ? ಠಾಕ್ರೆ ಅವರ ಹಿಂದೂತ್ವ ಕೇವಲ ಮತಗಳಿಗಾಗಿದೆ. ಕೇಸರಿ ಧ್ವಜದ ಮೇಲೆ ದಾಳಿಯಾದಾಗ, ಅದನ್ನು ಎದುರಿಸುವ ಕೆಲಸವನ್ನು ನಮ್ಮ ಶಿವಸೇನೆ ಮಾಡುತ್ತದೆ. ರಾಹುಲ್ ಗಾಂಧಿ ಯಾವಾಗಲೂ ಸಾವರ್ಕರ್ ಮತ್ತು ಹಿಂದೂತ್ವವನ್ನು ಅವಮಾನಿಸುತ್ತಾರೆ.
‘ಸನಾತನಿ ಭಯೋತ್ಪಾದನೆ’ ಎಂಬುದು ಹಿಂದೂ ಧರ್ಮಕ್ಕೆ ಅವಮಾನ! – ನಿತೇಶ ರಾಣೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ

ಮುಂಬಯಿ – ‘ಹಿಂದೂ ಭಯೋತ್ಪಾದನೆ’ ಅಥವಾ ‘ಸನಾತನಿ ಭಯೋತ್ಪಾದನೆ’ ಎಂಬುದು ಭಾರತದ ಹಿಂದೂ ಮತ್ತು ಸಂತರ ಪರಂಪರೆಯನ್ನು ಅವಮಾನಿಸಲು ಮಾಡಿದ ವ್ಯಾಖ್ಯಾನವಾಗಿದೆ. ಹಿಂದೆ ಸುಶೀಲ ಕುಮಾರ್ ಶಿಂದೆ, ನಂತರ ಪೃಥ್ವಿರಾಜ್ ಚವ್ಹಾಣ್ ಮತ್ತು ಈಗ ಜಿತೇಂದ್ರ ಆವ್ಹಾಡ್ ಅವರು ಅದೇ ಭಾಷೆಯನ್ನು ಬಳಸುತ್ತಿದ್ದಾರೆ ಮತ್ತು ಹಿಂದೂ ಧರ್ಮವನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದಾರೆ.
‘हिंदू दहशतवाद’ किंवा ‘सनातनी दहशतवाद’ ही भाषा भारताच्या हिंदू आणि संत परंपरेला बदनाम करण्यासाठी तयार केलेली व्याख्या आहे. आधी सुशीलकुमार शिंदे मग पृथ्वीराज चव्हाण आणि आता जितेंद्र आव्हाड ती भाषा वापरत आहेत आणि हिंदू धर्माला बदनाम करण्याचा प्रयत्न करतात. जितेंद्र आव्हाड यांच्या…
— Nitesh Rane (@NiteshNRane) August 3, 2025
ಸುಳ್ಳು ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂ ಧರ್ಮ ಮತ್ತು ಸಂತರ ಪರಂಪರೆಯನ್ನು ಅವಮಾನಿಸುವುದು ಆವ್ಹಾಡ್ ಅವರ ಏಕೈಕ ಕಾರ್ಯಕ್ರಮ ಆಗಿರುತ್ತದೆ. ಆವ್ಹಾಡ್ ಅವರ ಭಾಷೆ ಹಿಂದೂ ಧರ್ಮಕ್ಕೆ ಅವಮಾನಕರವಾಗಿದೆ, ಆವ್ಹಾಡ್ ಅವರ ಈ ನಿಲುವಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಸಹಮತ ವ್ಯಕ್ತಪಡಿಸುತ್ತಾರೆಯೇ?
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ