ಭೋಪೆ-ಪುಜಾರಿ ಮಂಡಳಿಯ ಆರೋಪ

ತುಳಜಾಪುರ – ಶ್ರೀ ತುಳಜಾ ಭವಾನಿ ದೇವಿಯ ಕತ್ತಿಯನ್ನು ದೇವಸ್ಥಾನದಿಂದ ಹೊರಗೆ ಸರಿಸಲಾಗಿದೆ ಎಂದು ಭೋಪೆ-ಪುಜಾರಿ ಮಂಡಳಿ ಆರೋಪಿಸಿದೆ. ಈ ಕುರಿತು ‘ಶ್ರೀ ತುಳಜಾ ಭವಾನಿ ದೇವಿ ಭೋಪೆ-ಪುಜಾರಿ ಮಂಡಳಿ’ಯ ಅಧ್ಯಕ್ಷರಾದ ಶ್ರೀ. ಅಮರರಾಜೆ ಕದಮ ಅವರು ಮಾಧ್ಯಮಗಳಿಗೆ, “ನಾವು ದೇವಸ್ಥಾನದ ಸಂಸ್ಥಾನಕ್ಕೆ ಅರ್ಜಿ ಸಲ್ಲಿಸಿ, ‘ದೇವಿಯ ಎದುರಿಗಿದ್ದ ಕತ್ತಿ ಎಲ್ಲಿದೆ?’ ಎಂದು ಕೇಳಿದ್ದೇವೆ. ಈ ಕುರಿತು ಸಂಸ್ಥಾನದಿಂದ ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ. ನಮ್ಮ ಮಾಹಿತಿಯ ಪ್ರಕಾರ, ಈ ಕತ್ತಿಯನ್ನು ದೇವಸ್ಥಾನದ ಹೊರಗೆ ಎಲ್ಲೋ ಇಡಲಾಗಿದೆ. ಆದ್ದರಿಂದ, ಭಕ್ತರು ಕತ್ತಿಯನ್ನು ನೋಡಲು ಸಾಧ್ಯವಾಗುವಂತೆ ಅದನ್ನು ತಕ್ಷಣವೇ ದೇವಿಯ ಬಳಿ ಇಡಬೇಕು” ಎಂದು ತಿಳಿಸಿದ್ದಾರೆ.
ಜೂನ್ 16, 2025 ರಂದು, ಪದ್ಮಶ್ರೀ ಗಣೇಶಜಿ ದ್ರಾವಿಡ ಶಾಸ್ತ್ರಿ ಅವರು ದೇವಿಯ ಎದುರು ಕತ್ತಿಯನ್ನು ಇಟ್ಟು, ಮಂತ್ರಗಳ ಮೂಲಕ ದೇವಿಯ 8 ಕೈಗಳ ಶಸ್ತ್ರಗಳ ತತ್ವಶಕ್ತಿಯನ್ನು ಅದರಲ್ಲಿ ಇರಿಸಿದ್ದಾರೆ. ಇದರಿಂದಾಗಿ ಈ ಕತ್ತಿಯಲ್ಲಿ ದೇವಿಯ ತತ್ವ ಮತ್ತು ಶಕ್ತಿ ಇರುವುದರಿಂದ, ಈ ಕತ್ತಿ ದೇವಿಯ ಎದುರೇ ಇರಬೇಕು. ಈ ಕುರಿತು ಭೋಪೆ-ಪುಜಾರಿ ಮಂಡಳಿ ಪರವಾಗಿ ನಾವು ಪದೇ ಪದೇ ಬೇಡಿಕೆ ಇಟ್ಟರೂ, ಸಂಸ್ಥಾನವು ಅದನ್ನು ಗಣನೆಗೆ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ಶ್ರೀ. ಅಮರರಾಜೆ ಕದಮ ಹೇಳಿದ್ದಾರೆ.
ಸಂಪಾದಕೀಯ ನಿಲುವುದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!