ಶಾಲೆಯಲ್ಲಿ ‘ರಾಧೆ ರಾಧೆ’ ಎಂದಿದ್ದಕ್ಕೆ, ಕ್ರೈಸ್ತ ಮಹಿಳಾ ಪ್ರಾಂಶುಪಾಲರಿಂದ ಮೂರೂವರೆ ವರ್ಷದ ಬಾಲಕಿಯ ಮೇಲೆ ಹಲ್ಲೆ – Child Assault School

  • ಪೋಷಕರ ದೂರಿನ ನಂತರ ಪ್ರಾಂಶುಪಾಲರ ಬಂಧನ

  • ಬಾಯಿಗೆ ಟೇಪ್ ಹಚ್ಚಿ ಚಿಕೃತಿ

ದುರ್ಗ (ಛತ್ತೀಸಗಢ) – ಇಲ್ಲಿನ ಶಿಶುವಿಹಾರದಲ್ಲಿ ಓದುತ್ತಿರುವ ಮೂರೂವರೆ ವರ್ಷದ ಬಾಲಕಿಯು ತರಗತಿಯಲ್ಲಿ ‘ರಾಧೆ ರಾಧೆ’ ಎಂದು ಹೇಳಿದ್ದರಿಂದ, ಮದರ್ ತೆರೇಸಾ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲೆ ಇಲಾ ಇವನ್ ಕೌಲವಿನ್ ಅವರು ಆಕೆಯ ಮುಂಗೈ ಮೇಲೆ ಹೊಡೆದಿದ್ದಾರೆ ಮತ್ತು ಬಾಯಿಗೆ ಟೇಪ್ ಹಚ್ಚಿದ್ದಾರೆ. ಸಂತ್ರಸ್ತ ಬಾಲಕಿಯ ತಂದೆ ಪ್ರವೀಣ ಯಾದವ ಅವರು ನಂದಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಪೊಲೀಸರು ಪ್ರಾಂಶುಪಾಲೆ ಕೌಲವಿನ್ ಅವರನ್ನು ಬಂಧಿಸಿದ್ದಾರೆ.

1. ಬಾಲಕಿಗೆ ಹಲ್ಲೆ ಮಾಡಿರುವ ಘಟನೆಯ ಮಾಹಿತಿ ತಿಳಿದ ನಂತರ, ಹಿಂದೂ ಸಂಘಟನೆಗಳು ಈ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದವು. ಬಜರಂಗ ದಳ ಸೇರಿದಂತೆ ಹಲವು ಹಿಂದುತ್ವನಿಷ್ಠ ಸಂಘಟನೆಗಳು ಇದರಲ್ಲಿ ಭಾಗವಹಿಸಿದ್ದವು. ಈ ಪ್ರತಿಭಟನೆಗಳಿಂದಾಗಿ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

2. ಪೊಲೀಸರು ಪ್ರಾಂಶುಪಾಲೆ ಇಲಾ ಇವನ್ ಕೌಲವಿನ್ ಅವರ ವಿರುದ್ಧ ‘ಕಿಶೋರ್ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015’ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

  • ಹಿಂದೂಗಳು ಬಹುಸಂಖ್ಯಾತರಾಗಿರುವ ‘ಜಾತ್ಯತೀತ’ ಭಾರತದಲ್ಲಿ, ಹಿಂದೂಗಳು ತಮ್ಮ ಆರಾಧ್ಯ ದೇವತೆಗಳ ಹೆಸರನ್ನು ತೆಗೆದುಕೊಳ್ಳದಂತೆ ಕ್ರೈಸ್ತರು ನಿರ್ಬಂಧಿಸುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
  • ಹಿಂದೂ ರಾಷ್ಟ್ರದ ಅವಶ್ಯಕತೆ ಏಕೆ ಇದೆ ಎಂಬುದನ್ನು ಇಂತಹ ಘಟನೆಗಳು ಪ್ರತಿದಿನ ಸ್ಪಷ್ಟಪಡಿಸುತ್ತವೆ!