(ಮೊಸರು ಕುಡಿಕೆ ಒಡೆಯುವ ಗುಂಪಿನ ಸದಸ್ಯರನ್ನು ‘ಗೋವಿಂದ’ ಎನ್ನುತ್ತಾರೆ)

ಮುಂಬಯಿ – ಮಹಾರಾಷ್ಟ್ರದಲ್ಲಿ ಒಂದೂವರೆ ಲಕ್ಷ ಗೋವಿಂದರಿಗೆ ವಿಮೆ ಒದಗಿಸಲಾಗುವುದು. ಅದಕ್ಕಾಗಿ, ಪ್ರತಿಯೊಬ್ಬ ಗೋವಿಂದನಿಗೆ ‘ದಿ ಓರಿಯಂಟಲ್ ಇನ್ಶೂರೆನ್ಸ್’ ಸಂಸ್ಥೆಯು ವಿಮಾ ರಕ್ಷಣೆ ನೀಡಲು ಒಪ್ಪಿಕೊಂಡಿದೆ. ಈ ಪ್ರಕಾರ, ಮಹಾರಾಷ್ಟ್ರ ರಾಜ್ಯ ದಹಿಹಂಡಿ ಗೋವಿಂದ ಅಸೋಸಿಯೇಷನ್, ಅಂಧೇರಿ (ಪೂರ್ವ) ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ವಿಮೆ ಮಾಡಿಸುವುದು ಮತ್ತು ವಿಮೆಯ ಅವಧಿಯನ್ನು ನಿರ್ಧರಿಸಲು ಕ್ರೀಡಾ ಮತ್ತು ಯುವ ಸೇವೆಗಳ ವಿಭಾಗದ ಮುಂಬಯಿ ಉಪನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ. ಕ್ರೀಡಾ ಅಭಿವೃದ್ಧಿ ನಿಧಿಯಿಂದ 1 ಕೋಟಿ 12 ಲಕ್ಷದ 50 ಸಾವಿರ ರೂಪಾಯಿಗಳ ನಿಧಿ ಒದಗಿಸಲಾಗುವುದು. ಈ ಪ್ರಕಾರ, ಕೂಡಲೇ ವಿಮೆ ಮಾಡಿಸಲು ಆದೇಶ ನೀಡಲಾಗಿದೆ. ದಹಿಹಂಡಿ ಆಡುವಾಗ 10 ರಿಂದ 12 ಕ್ಕಿಂತ ಹೆಚ್ಚು ಮಾನವ ಗೋಪುರಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಅನೇಕ ಗೋವಿಂದರು ಗಾಯಗೊಳ್ಳುತ್ತಾರೆ. ಅವರ ಚಿಕಿತ್ಸೆಗಾಗಿ ಸರಕಾರ ಈ ವೆಚ್ಚವನ್ನು ಭರಿಸುತ್ತಿದೆ. ಕಳೆದ ವರ್ಷ 1 ಕೋಟಿ 25 ಲಕ್ಷ ಗೋವಿಂದರಿಗೆ ವಿಮಾ ರಕ್ಷಣೆ ಒದಗಿಸಲಾಗಿತ್ತು. ಈಗ ಹೆಚ್ಚುವರಿ 25 ಸಾವಿರ ಗೋವಿಂದರಿಗೆ ಈ ರಕ್ಷಣೆ ಸಿಗಲಿದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!