
ನವದೆಹಲಿ – ನ್ಯಾಯಾಲಯದ ನಿರ್ಧಾರ ನಿರಾಶಾದಾಯಕವಾಗಿದೆ ಮತ್ತು ಕೇಂದ್ರ ಸರಕಾರ ಹಾಗೂ ಮಹಾರಾಷ್ಟ್ರದ ಫಡ್ನವೀಸ್ ಸರಕಾರ ಈ ನಿರ್ಧಾರದ ವಿರುದ್ಧ ಮೇಲಿನ ನ್ಯಾಯಾಲಯದಲ್ಲಿ ಸವಾಲು ಹಾಕುತ್ತವೆಯೇ? ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎ.ಐ.ಎಂ.ಐ.ಎಂ.) ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರು ಪ್ರತಿಕ್ರಿಯೆ ನೀಡುವಾಗ ಪ್ರಶ್ನಿಸಿದ್ದಾರೆ. 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಅವರು ಮಾತನಾಡುತ್ತಿದ್ದರು.
ಓವೈಸಿ ಮಾತು ಮುಂದುವರೆಸಿ, ರಾಷ್ಟ್ರೀಯ ತನಿಖಾ ದಳ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಕಳಪೆ ತನಿಖೆ ನಡೆಸಿದೆ, ಇದರಿಂದಾಗಿ ಇಂದು ಈ ಜನರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಲಾಗಿದೆ. 2016ರಲ್ಲಿ ಈ ಪ್ರಕರಣದ ಅಂದಿನ ಸರಕಾರಿ ನ್ಯಾಯವಾದಿ ರೋಹಿಣಿ ಸಾಲಿಯನ್ ಅವರು ಸಾರ್ವಜನಿಕವಾಗಿ, ರಾಷ್ಟ್ರೀಯ ತನಿಖಾ ದಳವು ಆರೋಪಿಗಳ ಬಗ್ಗೆ ಸೌಮ್ಯ ನಿಲುವು ತೆಗೆದುಕೊಳ್ಳುವಂತೆ ತಮಗೆ ತಿಳಿಸಿತ್ತು ಎಂದು ಹೇಳಿದ್ದರು. 2017ರಲ್ಲಿ ದಳವು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಲು ಪ್ರಯತ್ನಿಸಿತು. ಅದೇ ವ್ಯಕ್ತಿ 2019ರಲ್ಲಿ ಭಾಜಪ ಸಂಸದರಾದರು. ರಾಷ್ಟ್ರೀಯ ತನಿಖಾ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳನ್ನು ಅವರ ದೋಷಪೂರಿತ ತನಿಖೆಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ? ಈ ಪ್ರಶ್ನೆಗೆ ನಮ್ಮೆಲ್ಲರಿಗೂ ಉತ್ತರ ತಿಳಿದಿದೆ. ಭಯೋತ್ಪಾದನೆಯ ವಿರುದ್ಧ ಇದು ಕಠಿಣವಾದ ಮೋದಿ ಸರಕಾರವಿದೆ. ಭಾಜಪವು ಭಯೋತ್ಪಾದಕ ಆರೋಪಿಯೊಬ್ಬರನ್ನು ಸಂಸದರನ್ನಾಗಿ ಮಾಡಿದೆ ಎಂದು ಜಗತ್ತು ನೆನಪಿನಲ್ಲಿಟ್ಟುಕೊಳ್ಳುತ್ತದೆ. (ಓವೈಸಿಯಂತಹ ಕಟ್ಟರ್ ಮತಾಂಧ ಮುಸ್ಲಿಂ ನಾಯಕರಿಗೆ ಹಿಂದುತ್ವನಿಷ್ಠ ಕಾರ್ಯಕರ್ತರು, ನಾಯಕರು ಅಥವಾ ಸಂತರು ಭಯೋತ್ಪಾದಕರಂತೆ ಕಾಣುತ್ತಾರೆ! ಅಂತಹ ನಾಯಕರನ್ನು ಎಷ್ಟು ಖಂಡಿಸಿದರೂ ಕಡಿಮೆಯೇ! – ಸಂಪಾದಕರು)
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”