ಹಿಂದೂ ಹುಡುಗವಿನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪೋಸ್ಟ್ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ರಂಗಪುರ್ ಜಿಲ್ಲೆಯ ಗಂಗಾಚರ ಪ್ರದೇಶದಲ್ಲಿ, ಹಿಂದೂ ಹುಡುಗನು ಫೇಸ್‌ಬುಕ್‌ನಲ್ಲಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದೆ ತಥಾಕಥಿತ ಘಟನೆಯ ನಂತರ, ಮುಸ್ಲಿಮರು ಹಿಂದೂಗಳ 15 ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮುಸ್ಲಿಮರು ಹಿಂದೂಗಳ ಮನೆಗಳನ್ನು ಲೂಟಿ ಮಾಡಿ, ಧ್ವಂಸಗೊಳಿಸಿ ನಂತರ ಬೆಂಕಿ ಹಚ್ಚಿದ್ದಾರೆ. ‘ಹಿಂದೂ ಹುಡುಗ ಮಾಡಿದ ಪೋಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಮುಸ್ಲಿಮರು ಆರೋಪಿಸಿದ್ದಾರೆ. ಪೊಲೀಸರು ಹಿಂದೂ ಹುಡುಗವನ್ನು ಬಂಧಿಸಿದರೂ, ಮುಸ್ಲಿಮರು ದಾಳಿಯನ್ನು ನಿಲ್ಲಿಸಲಿಲ್ಲ. ಈ ದಾಳಿಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ.
ನಮಾಜ್ ನಂತರ ದಾಳಿ
ಜುಲೈ 27 ರಂದು ಮಧ್ಯಾಹ್ನ ನಮಾಜ್ ನಂತರ 500 ರಿಂದ 600 ಮುಸ್ಲಿಮರ ಗುಂಪು ಈ ದಾಳಿಯನ್ನು ನಡೆಸಿದೆ. ಅವರು ಹಿಂದೂಗಳ ಮನೆಗಳನ್ನು ಲೂಟಿ ಮಾಡಿದರು. ಈ ದಾಳಿಯಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ಸೈನ್ಯವನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಒಬ್ಬ ಆರೋಪಿಯನ್ನು ಸಹ ಬಂಧಿಸಲಾಗಿಲ್ಲ.
ಸ್ಥಳೀಯ ಪೊಲೀಸ್ ಅಧಿಕಾರಿ ಮಹಮ್ಮದ್ ಕಮರುಜ್ಜಮಾ ಅವರು, “ನಾವು ಹಿಂದೂ ಹುಡುಗವಿನ ಮನೆಯನ್ನು ರಕ್ಷಿಸಿದ್ದೇವೆ; ಆದರೆ ಜನಸಮೂಹವು ಸುತ್ತಮುತ್ತಲಿನ 15 ರಿಂದ 20 ಮನೆಗಳನ್ನು ಧ್ವಂಸಗೊಳಿಸಿದೆ” ಎಂದು ಹೇಳಿದ್ದಾರೆ.
ರಂಗ್‌ಪುರ್‌ನ ಉಪ ಆಯುಕ್ತ ಅಸೀಬ್ ಅಹ್ಸನ್ ಅವರು, ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಮತ್ತು ನೆರವಿನ ಸಾಮಗ್ರಿಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆಯೇ?
ಒಬ್ಬ ಹಿಂದೂ ಯುವಕ ‘ಆಜ್ಕರ್ ಪತ್ರಿಕಾ’ ಎಂಬ ದೈನಿಕಕ್ಕೆ ಮಾಹಿತಿ ನೀಡಿದ್ದಾನೆ. ಅವನು, “ಈ ಜನರು ನಮ್ಮ ಮನೆಯನ್ನು ಒಡೆಯಲು ಬಂದಾಗ, ಪೊಲೀಸರು ಅಲ್ಲಿಯೇ ಇದ್ದರು. ಅವರು ಮೊದಲು ಮುಸ್ಲಿಮರನ್ನು ತಡೆಯಲು ಪ್ರಯತ್ನಿಸಿದರು; ಆದರೆ ನಂತರ ಅವರು ಅಲ್ಲಿಂದ ಹೊರಟು ಹೋದರು. ನಮ್ಮನ್ನು ನಮ್ಮ ಹಣೆಬರಹಕ್ಕೆ ಬಿಟ್ಟರು. ನಾವು ನಿರಪರಾಧಿಗಳಾಗಿದ್ದರೂ, ನಮ್ಮ ಮನೆಗಳನ್ನು ಏಕೆ ಧ್ವಂಸಗೊಳಿಸಲಾಯಿತು?”, ಎಂದು ವಿಚಾರಿಸಿದ್ದಾರೆ.
ಈಗ ಹೇಗೆ ಬದುಕಬೇಕು?
ಒಬ್ಬ ಸಂತ್ರಸ್ತ ಹಿಂದೂ ಮಹಿಳೆ, “ನಮ್ಮ ಎಲ್ಲವನ್ನೂ ಅವರು ಲೂಟಿ ಮಾಡಿದರು. ಬಟ್ಟೆ, ಚಿನ್ನ, ಧಾನ್ಯ, ಹಣ, ಏನೂ ಉಳಿದಿಲ್ಲ. ನಾವು ಈಗ ಹೇಗೆ ಬದುಕಬೇಕು?”, ಎಂದು ಅಳಲು ತೋಡಿಕೊಂಡಿದ್ದಾರೆ.
ಕಾನೂನಿನ ನಿರೀಕ್ಷೆ ಮತ್ತು ನ್ಯಾಯದ ಬೇಡಿಕೆ
ಈ ಘಟನೆಯ ನಂತರ ಸ್ಥಳೀಯ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವರಿಂದ ಟೀಕೆ ವ್ಯಕ್ತವಾಗುತ್ತಿದೆ. ಸ್ಥಳೀಯ ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ನಿಷ್ಪಕ್ಷಪಾತ ತನಿಖೆ, ಜವಾಬ್ದಾರರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಯಾವ ಆರೋಪದ ಮೇಲೆ ಹಿಂದೂ ಹುಡುಗವನ್ನು ಬಂಧಿಸಲಾಯಿತು, ಅದು ನಕಲಿ ಫೇಸ್‌ಬುಕ್ ಖಾತೆ!
ಪತ್ರಕರ್ತ ಸೋಹನ್ ಆರ್.ಎಸ್.ಬಿ. ಅವರ ಪ್ರಕಾರ, ಹುಡುಗವಿನ ಮೂಲ ಫೇಸ್‌ಬುಕ್ ಖಾತೆ ಬೇರೆಯಾಗಿದ್ದು, ಅವನ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ಅವನ ಮತ್ತು ಅವನ ಕುಟುಂಬದ ಫೋಟೋಗಳೊಂದಿಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಲಾಗಿತ್ತು. ಆದರೂ ಪೊಲೀಸರು ಯಾವುದೇ ತನಿಖೆ ನಡೆಸದೆ ಹುಡುಗವನ್ನು ಬಂಧಿಸಿದರು.
ಪೊಲೀಸ್ ಅಧಿಕಾರಿ ಅಲ್ ಇಮ್ರಾನ್ ಅವರು, ಗ್ರಾಮಸ್ಥರ ಆಕ್ರೋಶವನ್ನು ನೋಡಿ ನಾವು ಅವನನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
2021 ರಲ್ಲಿಯೂ ಇಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿತ್ತು
ಈ ಪ್ರದೇಶದಲ್ಲಿ ಇಂತಹ ಹಿಂಸಾಚಾರದ ಘಟನೆ ಇದು ಮೊದಲನೆಯದಲ್ಲ. 2021 ರಲ್ಲಿ ದುರ್ಗಾಪೂಜೆಯ ಸಮಯದಲ್ಲಿಯೂ ಇದೇ ರೀತಿಯ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಿಂದ 20 ಕ್ಕೂ ಹೆಚ್ಚು ಹಿಂದೂಗಳ ಮನೆಗಳನ್ನು ಸುಟ್ಟುಹಾಕಲಾಯಿತು.
ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್‌ನ ಬೇಡಿಕೆ
ಬಾಂಗ್ಲಾದೇಶದ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಬಾಂಗ್ಲಾದೇಶ ಸರಕಾರಕ್ಕೆ ಈ ದಾಳಿಗಳಲ್ಲಿನ ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಈ ರೀತಿ ಹಿಂದೂಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಇಸ್ಲಾಂಗೆ ಅವಮಾನ ಮಾಡುವ ಪೋಸ್ಟ್‌ಗಳನ್ನು ಹಾಕಿ ಹಿಂದೂಗಳ ಮೇಲೆ ದಾಳಿ ಮಾಡಿದ ಹಲವು ಘಟನೆಗಳು ಇಲ್ಲಿಯವರೆಗೆ ನಡೆದಿವೆ. ಮುಂದೆಯೂ ಅವು ಮುಂದುವರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಘಟನೆಗಳನ್ನು ತಡೆಯಲು ಜಗತ್ತಿನಾದ್ಯಂತದ ಹಿಂದೂಗಳು ನಿಷ್ಕ್ರಿಯರಾಗಿದ್ದಾರೆ ಎಂಬುದು ಕೂಡ ಅಷ್ಟೇ ಸತ್ಯ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ